ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವಿಶ್ವದ ಪ್ರಥಮ ಮಾನವ – ರೋಬೋಟ್ ಮ್ಯಾರಥಾನ್ ಆಯೊಜನೆಗೆ ಸಜ್ಜಾಗಿದೆ ಬೀಜಿಂಗ್

ಮುಂದಿನ ದಿನಮಾನಗಳು ಹೇಗಿರಲಿವೆಯೆಂದರೆ, ನಾವು ರೋಬೋಟ್‌ಗಳೊಂದಿಗೆ ಸ್ಪರ್ಧೆ ಮಾಡುವ ಸಮಯ ಬರಲಿದೆ. ಇದಕ್ಕೊಂದು ತಾಜಾ ನಿದರ್ಶನವೆಂಬಂತೆ ಚೀನಾದಲ್ಲಿ ರೋಬೋಟ್ ಮತ್ತು ಮಾನವ ಸ್ಪರ್ಧಿಗಳ ನಡುವೆ ಮ್ಯಾರಥಾನ್ ಓಟ ನಡೆಯಲಿದೆ.

ಹೇಗಿರಲಿದೆ ಮಾನವ – ರೋಬೋಟ್ ಮ್ಯಾರಥಾನ್? ಅಷ್ಟಕ್ಕೂ ಇದು ಎಲ್ಲಿ ನಡೆಯುತ್ತೆ?

ಸಾಂದರ್ಭಿಕ ಚಿತ್ರ

Profile Sushmitha Jain Jan 20, 2025 5:08 PM

ಬೀಜಿಂಗ್: ಮನುಷ್ಯರು ಮತ್ತು ರೋಬೋಟ್ ಗಳು (Robot) ಜೊತೆಯಾಗಿ ನಡೆಯುವ ಮ್ಯಾರಥಾನ್ ಕೂಟವನ್ನು (Marathon) ಆಯೋಜಿಸಲು ಚೀನಾ (China) ಸಜ್ಜಾಗಿದೆ. ಈ ಕೂಟ ಎಪ್ರಿಲ್ (April) ತಿಂಗಳಿನಲ್ಲಿ ಬೀಜಿಂಗ್‌ನ (Beijing) ಡ್ಯಾಕ್ಸಿಂಗ್ (Daxing) ಜಿಲ್ಲೆಯಲ್ಲಿ ನಡೆಯಲಿದೆ. ಈ ಹಾಫ್ ಮ್ಯಾರಥಾನ್ (21 ಕಿ.ಮೀ.) ನಲ್ಲಿ ಕನಿಷ್ಟ 12ಕ್ಕೂ ಹೆಚ್ಚು ಮಾನವ ಸ್ವರೂಪಿ ರೋಬೋಟ್ ಗಳು ಭಾಗವಹಿಸಲಿವೆ ಎಂದು ತಿಳಿದುಬಂದಿದೆ.

ಈ ರೋಬೋಟ್ ಗಳು 12 ಸಾವಿರ ಅಥ್ಲೀಟ್ ಗಳೊಂದಿಗೆ ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಪಡೆಯುವ ಅಥ್ಲಿಟ್ ಗಳು ಬಹುಮಾನವನ್ನು ಪಡೆದುಕೊಳ್ಳಲಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಬೀಜಿಂಗ್ ಎಕನಾಮಿಕ್ – ಟೆಕ್ನಲಾಜಿಕಲ್ ಡೆವಲಪ್‌ಮೆಂಟ್‌ ಏರಿಯಾದ ಆಡಳಿತ ಮಂಡಳಿ ನೀಡಿರುವ ಮಾಹಿತಿಯಂತೆ, ಈ ಮ್ಯಾರಥಾನ್ ನಲ್ಲಿ ಭಾಗವಹಿಸುತ್ತಿರುವ ರೋಬೋಟ್ ಗಳನ್ನು 20 ಕಂಪೆನಿಗಳು ಅಭವೃದ್ಧಿಪಡಿಸಿವೆ ಎಂದು ಹೇಳಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ರೋಬೋಟ್‌ಗಳಿಗೆ ಇರುವ ಮುಖ್ಯ ನಿಯಮ ಎಂದರೆ, ಈ ರೋಬೋಟ್ ಗಳು ನೊಡಲು ಮನುಷ್ಯರ ಹಾಗೆ ಕಾಣಬೇಕು ಮತ್ತು ಎರಡು ಕಾಲುಗಳಲ್ಲಿ ನಡೆಯುವ ಅಥವಾ ಓಡುವ ಚಲನೆ ಸಾಧ್ಯತೆಯ ಮೆಕ್ಯಾನಿಕಲ್ ರಚನೆಯನ್ನು ಹೊಂದಿರಬೇಕು. ಆದರೆ ಇದಕ್ಕೆ ಚಕ್ರಗಳಿರಬಾರದು’ ಎಂಬ ಷರತ್ತನ್ನು ಹಾಕಲಾಗಿದೆ.

‘ಈ ಸ್ಪರ್ಧೆಯಲ್ಲಿ ಭಾಗವಹಿಸುವ ರೋಬೋಟ್ ಗಳು 0.5 ಮೀಟರ್ ನಿಂದ 2 ಮೀಟರ್ (1.6 ಅಡಿ ಮತ್ತು 6.5 ಅಡಿ) ಎತ್ತರ ಮತ್ತು, ಪೃಷ್ಠ ಸಂಧು ಭಾಗದಿಂದ ಪಾದದರಗಿನ ಇವುಗಳ ಗರಿಷ್ಠ ವಿಸ್ತಾರ ಅಂತರ ಕನಿಷ್ಟ 0.45 ಮೀಟರ್ಗಳಿಷ್ಟರಬೇಕು’ ಎಂದು ಸೂಚಿಸಲಾಗಿದೆ. ಈ ರೇಸ್ ನಲ್ಲಿ ರಿಮೋಟ್ ಕಂಟ್ರೋಲ್ ನ ಮತ್ತು ಸಂಪೂರ್ಣವಾಗಿ ಸ್ವಯಂಚಾಲಿತ ರೋಬೋಗಳಿಗೆ ಭಾಗವಹಿಸಲು ಅನುಮತಿಯಿದೆ. ಇಲ್ಲಿ ರೇಸ್ ನಡುವಿನಲ್ಲಿ ಇವುಗಳ ಬ್ಯಾಟರಿ ಬದಲಾಯಿಸುವಿಕೆಗೆ ಅವಕಾಶವಿದೆ.

ಇದನ್ನೂ ಓದಿ: Viral Video: ನಾಯಿ ಮರಿಯನ್ನು ನೇಣಿಗೇರಿಸಿ ವಿಕೃತಿ ಮೆರೆದ ಕ್ರೂರಿ- ವಿಡಿಯೊ ಫುಲ್‌ ವೈರಲ್‌

ಈ ಮ್ಯಾರಥಾನ್ ನಲ್ಲಿ ತಮ್ಮ ರೋಬೋಟ್ ಮೂಲಕ ಭಾಗವಹಿಸುತ್ತಿರುವ ಚೀನಾದ ಎಂಬೋಡೀಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರೋಬೋಟಿಕ್ ಇನ್ನೋವೇಶನ್ ಸೆಂಟರ್ ಅಭಿವೃದ್ಧಿಪಡಿಸಿರುವ ‘ಟಿಯಾನ್ ಗಾಂಗ್’ ಮಾನವ ಸ್ವರೂಪಿ ರೋಬೋ ಸರಾಸರಿ 10ಕಿ.ಮೀ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.

ಈ ಟಿಯಾನ್ ಗಾಂಗ್ ರೋಬೋ ಯಿಝುವಾಂಗ್ ಹಾಫ್ ಮ್ಯಾರಥಾನ್ ನಲ್ಲಿ ಕಳೆದ ವರ್ಷ ಭಾಗವಹಿಸಿದ್ದ ಬಳಿಕ ಪತ್ರಿಕೆಗಳಲ್ಲಿ ಹೆಡ್ ಲೈನ್ ಸುದ್ದಿಯಾಗಿತ್ತು. ಈ ರೋಬೋ ಜೊತೆ ಎರಡೂ ಕಡೆಗಳಲ್ಲಿ ಮಾನವ ಸ್ಪರ್ಧಿಗಳಿದ್ದರು. ಆದರೆ, ಎಪ್ರಿಲ್ ನಲ್ಲಿ ನಡೆಯಲಿರುವ ಮ್ಯಾರಥಾನ್ ನಲ್ಲಿ ಮಾನವ ಸ್ವರೂಪಿ ರೋಬೋಗಳು ಸಂಪೂರ್ಣ ರೇಸ್ ನಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಚೀನಾ ಭೌಗೋಳಿಕ ಸವಾಲುಗಳನ್ನು ಎದುರಿಸುತ್ತಿರುವ ಕಾರಣದಿಂದ ಅಂದರೆ, ಪ್ರಾಯದವರ ಸಂಖ್ಯೆಯಲ್ಲಿ ಏರಿಕೆ ಹಾಗೂ ಕೆಲಸದ ವರ್ಗ ಕುಸಿಯುತ್ತಿರುವುದು ಚೀನಾ ರೋಬೋಟಿಕ್ಸ ಮತ್ತು ಆಟೊಮೇಶನ್ ಮೇಲೆ ಹೆಚ್ಚೆಚ್ಚು ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತದೆ.