ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದುವೆ, ಚಳಿಗಾಲದ ಸೀಸನ್‌ಗೆ ಬಂಪರ್‌ ಆಫರ್: ಸೌಂದರ್ಯ ಪ್ರಿಯರಿಗಾಗಿ ಶುರುವಾಗಿದೆ ಇನ್‌ಸ್ಟಾಗ್ಲೋ ಬ್ಯೂಟಿ ಸೇಲ್

ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ವೇದಿಕೆಯು ತನ್ನ ಮೊದಲ ವಿಶೇಷ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಮಾರಾಟ ಮೇಳವಾದ ‘ಇನ್‌ಸ್ಟಾಗ್ಲೋ’ ಸೇಲ್ ಅನ್ನು ಆರಂಭಿಸಿದೆ. ನ19ರಿಂದ 22ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸೇಲ್‌ನಲ್ಲಿ ಜನಪ್ರಿಯ ಹಾಗೂ ಪ್ರೀಮಿಯಂ ಬ್ರ್ಯಾಂಡ್‌ಗಳ ಆಯ್ದ ಉತ್ಪನ್ನಗಳ ಮೇಲೆ ಶೇ. 60ರವರೆಗೆ ರಿಯಾಯಿತಿ ನೀಡಲಾಗುತ್ತಿದೆ

ಸೌಂದರ್ಯ ಪ್ರಿಯರಿಗಾಗಿ ಶುರುವಾಗಿದೆ ಇನ್‌ಸ್ಟಾಗ್ಲೋ ಬ್ಯೂಟಿ ಸೇಲ್

-

Profile
Ashok Nayak Nov 21, 2026 10:10 PM

ಬೆಂಗಳೂರು: ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ವೇದಿಕೆಯು ತನ್ನ ಮೊದಲ ವಿಶೇಷ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಮಾರಾಟ ಮೇಳವಾದ ‘ಇನ್‌ಸ್ಟಾಗ್ಲೋ’ ಸೇಲ್ ಅನ್ನು ಆರಂಭಿಸಿದೆ. ನ19ರಿಂದ 22ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸೇಲ್‌ನಲ್ಲಿ ಜನಪ್ರಿಯ ಹಾಗೂ ಪ್ರೀಮಿಯಂ ಬ್ರ್ಯಾಂಡ್‌ಗಳ ಆಯ್ದ ಉತ್ಪನ್ನಗಳ ಮೇಲೆ ಶೇ. 60ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ದಿನಸಿ ಮತ್ತು ನಿತ್ಯೋಪಯೋಗಿ ವಸ್ತುಗಳ ಹೊರತಾಗಿ ಜೀವನಶೈಲಿ ಹಾಗೂ ಸೌಂದರ್ಯವರ್ಧಕ ವಿಭಾಗವನ್ನು ವಿಸ್ತರಿಸುವ ನಿಟ್ಟಿನಲ್ಲಿ ಇನ್‌ಸ್ಟಾಮಾರ್ಟ್ ಈ ಹೆಜ್ಜೆ ಇಟ್ಟಿದೆ.

ಈ ಸೇಲ್‌ನಲ್ಲಿ ಮಿನಿಮಲಿಸ್ಟ್, ಮಾಕ್ಸಿ, ನಿವಿಯಾ, ಸೆಟಾಫಿಲ್, ಬಿಯರ್ಡೋ, ಪಿಲ್‌ಗ್ರಿಮ್, ಅರಾಟಾ, ಲನೇಜ್, ಫಾರೆಸ್ಟ್ ಇಂಟರ್‌ನ್ಯಾಷನಲ್, ಮೇಬೆಲಿನ್, ಮ್ಯಾಕ್ ಮತ್ತು ಕಲರ್‌ಬಾರ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳ ತ್ವಚೆ ಆರೈಕೆ, ಮೇಕಪ್, ಕೇಶರಾಶಿ ಆರೈಕೆ ಹಾಗೂ ಗಿಫ್ಟ್ ಸೆಟ್‌ಗಳು ಲಭ್ಯವಿವೆ.

ಚಳಿಗಾಲದ ತ್ವಚೆ ಮತ್ತು ಕೂದಲಿನ ಆರೈಕೆ ಉತ್ಪನ್ನಗಳ ಮೇಲೆ ಶೇ. 70ರವರೆಗೆ, ಮದುವೆ ಸೀಸನ್ ಮೇಕಪ್ ಉತ್ಪನ್ನಗಳ ಮೇಲೆ ಶೇ. 80ರವರೆಗೆ ಹಾಗೂ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ ಪ್ರಯುಕ್ತ ಪುರುಷರ ಗ್ರೂಮಿಂಗ್ ಉತ್ಪನ್ನಗಳ ಮೇಲೆ ಶೇ. 70ರವರೆಗೆ ರಿಯಾಯಿತಿ ದೊರೆಯಲಿದೆ. ಜೊತೆಗೆ ಫೇಸ್ ಶೀಟ್ ಮಾಸ್ಕ್‌ಗಳು ಕೇವಲ 29 ರೂ.ನಿಂದ ಆರಂಭವಾಗಲಿವೆ.

ಇದನ್ನೂ ಓದಿ: Women’s T20 Trophy 2026: ರೈಲ್ವೇಸ್‌ ವಿರುದ್ಧ ಗೆದ್ದ ಕರ್ನಾಟಕ ವನಿತೆಯರಿಗೆ ಚೊಚ್ಚಲ ಟ್ರೋಫಿ!

ಇದಕ್ಕೆ ಪೂರಕವಾಗಿ, ಸೇಲ್ ಅವಧಿಯಲ್ಲಿ ಪ್ರತಿದಿನ ಎರಡು ಗಂಟೆಗಳ ವಿಶೇಷ ‘ಫ್ಲ್ಯಾಶ್ ಸೇಲ್’ ನಡೆಯಲಿದ್ದು, ಮಾಕ್ಸಿ, ನ್ಯಾಟ್ ಹ್ಯಾಬಿಟ್, ಬಿಯರ್ಡೋ, ಅರಾಟಾ, ಪಿಲ್‌ಗ್ರಿಮ್ ಮತ್ತು ಪ್ಯಾರಾ ಡೈಸ್‌ನಂತಹ ಜೆನ್-ಝೀ ನೆಚ್ಚಿನ ಬ್ರ್ಯಾಂಡ್‌ಗಳ ಆಯ್ದ ಉತ್ಪನ್ನಗಳ ಮೇಲೆ ಶೇ. 80ರವರೆಗೆ ರಿಯಾಯಿತಿ ಸಿಗಲಿದೆ.

ಪ್ರಮುಖ ಕೊಡುಗೆಗಳಲ್ಲಿ ಮಾಕ್ಸಿ ಹೇರ್ ಮಾಸ್ಕ್ (₹365, ಎಂಆರ್‌ಪಿ ₹825), ಡಾಟ್ ಆ್ಯಂಡ್ ಕೀ ಸನ್‌ಸ್ಕ್ರೀನ್ (₹250, ಎಂಆರ್‌ಪಿ ₹445), ಅರಾಟಾ ಬಾಡಿ ಲೋಷನ್ (₹199, ಎಂಆರ್‌ಪಿ ₹349), ಸೀಕ್ರೆಟ್ ಆಲ್ಕೆಮಿಸ್ಟ್ ಮಿನಿ ಪರ್ಫ್ಯೂಮ್ ಗಿಫ್ಟ್ ಸೆಟ್ (₹567, ಎಂಆರ್‌ಪಿ ₹787), ಡರ್ಮಟಚ್ ಕೋಜಿಕ್ ಆ್ಯಸಿಡ್ ಸೋಪ್ (₹118, ಎಂಆರ್‌ಪಿ ₹170), ಡಿಕನ್‌ಸ್ಟ್ರಕ್ಟ್ ಮಾಯಿಶ್ಚರೈಸರ್ (₹307, ಎಂಆರ್‌ಪಿ ₹349) ಹಾಗೂ ಮಿನಿಮಲಿಸ್ಟ್ ವಿಟಮಿನ್ ಬಿ5 ಮಾಯಿಶ್ಚರೈಸರ್ (₹319, ಎಂಆರ್‌ಪಿ ₹349) ಸೇರಿವೆ.

2020ರ ಆಗಸ್ಟ್‌ನಲ್ಲಿ ಆರಂಭವಾದ ಕ್ವಿಕ್ ಕಾಮರ್ಸ್ ವೇದಿಕೆ, ಪ್ರಸ್ತುತ ದೇಶದ 131ಕ್ಕೂ ಹೆಚ್ಚು ನಗರ ಗಳಲ್ಲಿ ಕ್ವಿಕ್ ಕಾಮರ್ಸ್ ಸೇವೆ ಒದಗಿಸುತ್ತಿದೆ. ಗ್ರಾಹಕರು ಇನ್‌ಸ್ಟಾಮಾರ್ಟ್ ಆ್ಯಪ್ ಮೂಲಕ ಈ ಉತ್ಪನ್ನಗಳನ್ನು ಕ್ಷಣಾರ್ಧದಲ್ಲಿ ತರಿಸಿಕೊಳ್ಳಬಹುದಾಗಿದ್ದು, ಕೊಡುಗೆಗಳು ಸ್ಟಾಕ್ ಲಭ್ಯತೆ, ಆಯ್ದ ಸ್ಥಳಗಳು ಹಾಗೂ ನಿಯಮ-ಷರತ್ತುಗಳಿಗೆ ಒಳಪಟ್ಟಿರುತ್ತವೆ ಎಂದು ಸಂಸ್ಥೆ ತಿಳಿಸಿದೆ.