'ರಫೇಲ್ ಯುದ್ಧ ವಿಮಾನ ಬಿತ್ತು...' ಪಾಕಿಸ್ತಾನ ಅಂಪೈರ್ ಉದ್ಧಟತನ
Pakistan umpire jet-crash celebrations: "ಈ ಪಾಕಿಸ್ತಾನಿ ಅಂಪೈರ್ 2026ರ ದೃಷ್ಟಿಹೀನರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯುದ್ದಕ್ಕೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು, ಆದರೆ ಅವರು ಪಾಕಿಸ್ತಾನ ತಂಡದೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡುಬಂದಿದೆ," ಎಂದು CABI ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Pakistan umpire after jet-crash celebrations -
ಢಾಕಾ, ನ.20: ಶುಕ್ರವಾರ ನಡೆದಿದ್ದ ಅಂಧರ (ದೃಷ್ಟಿಹೀನರ) ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಮಳೆಯಿಂದಾಗಿ ಒಂದೇ ಒಂದು ಎಸೆತವನ್ನೂ ಎಸೆಯಲು ಸಾಧ್ಯವಾಗದೆ ರದ್ದಾದ ಪಂದ್ಯದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ವಿಜೇತರೆಂದು ಘೋಷಿಸಲಾಯಿತು. ಈ ಅನ್ಯಾಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಅಂಧರ ಕ್ರಿಕೆಟ್ ತಂಡವು ಪ್ರಶಸ್ತಿ ವಿತರಣಾ ಸಮಾರಂಭವನ್ನು ಬಹಿಷ್ಕರಿಸಿತ್ತು.
ಇದೀಗ ಪಾಕಿಸ್ತಾನ ಅಂಪೈರ್ ಒಬ್ಬರು, ಯುದ್ಧ ವಿಮಾನಗಳು ಪತನಗೊಳ್ಳುವುದನ್ನು ಹೋಲುವಂತಹ ಸನ್ನೆಗಳನ್ನು ಮಾಡುತ್ತಾ ಆಟಗಾರರೊಂದಿಗೆ ಸಂಭ್ರಮಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ 'ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ' (CABI) ಅವರ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆ ಎತ್ತಿದೆ. ಫೈನಲ್ ಪಂದ್ಯದ ಸುತ್ತ ಉಂಟಾದ ವಿವಾದದ ಬೆನ್ನಲ್ಲೇ, ಈ ಘಟನೆಯು ಉಭಯ ತಂಡಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಅಂಪೈರ್ ಸಂಭ್ರಮ ಪಾಕಿಸ್ತಾನದಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮಾಡಿದ ಭಾರತೀಯ ಸೇನೆಯನ್ನು ಅಣಕಿಸುವಂತಿತ್ತು. ಈ ಹಿಂದೆ ಏಷ್ಯಾಕಪ್ ಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್ ಹ್ಯಾರಿಸ್ ರೌಫ್, 6-0, ಯುದ್ದ ವಿಮಾನ ಹೊಡೆದುರುಳಿಸಿದ್ದೇವೆ ಎಂದು ಸನ್ನೆ ಮಾಡುವ ಮೂಲಕ ಅಣಕವಾಡಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಧೋನಿಯ ಸಿಎಸ್‌ಕೆ ಜೆರ್ಸಿ ಮೇಲೆ ಸಹಿ ಹಾಕಿದ ಗೌತಮ್ ಗಂಭೀರ್; ವಿಡಿಯೊ ವೈರಲ್
ಅಂಪೈರ್‌ನ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪಂದ್ಯದ ಅಧಿಕಾರಿಗಳು ತಟಸ್ಥವಾಗಿರಬೇಕು ಮತ್ತು ಯಾವುದೇ ತಂಡದೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬಾರದು ಎಂದು ಪ್ರತಿಪಾದಿಸಿದೆ.
"ಈ ಪಾಕಿಸ್ತಾನಿ ಅಂಪೈರ್ 2026ರ ದೃಷ್ಟಿಹೀನರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯುದ್ದಕ್ಕೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು, ಆದರೆ ಅವರು ಪಾಕಿಸ್ತಾನ ತಂಡದೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡುಬಂದಿದೆ," ಎಂದು CABI ತನ್ನ ಹೇಳಿಕೆಯಲ್ಲಿ ತಿಳಿಸಿದೆ.
This Pakistani umpire officiated throughout the Asia Cup Cricket for the Blind 2026, yet is seen celebrating with the Pakistan team. As per the principles of officiating, an umpire must remain neutral and should never be seen aligning with any team. https://t.co/tFFGgALZpd
— Cricket Association for the Blind in India (CABI) (@blind_cricket) November 21, 2026
"ಅಂಪೈರಿಂಗ್ ತತ್ವಗಳ ಪ್ರಕಾರ, ಅಂಪೈರ್ ತಟಸ್ಥವಾಗಿರಬೇಕು ಮತ್ತು ಯಾವುದೇ ತಂಡದ ಪರವಾಗಿ ಗುರುತಿಸಿಕೊಳ್ಳುವಂತೆ ಎಂದಿಗೂ ವರ್ತಿಸಬಾರದು," ಎಂದು ದೂರಿನಲ್ಲಿ ತಿಳಿಸಿದೆ.
ಮಳೆಯ ಕಾರಣದಿಂದಾಗಿ ಫೈನಲ್ ಪಂದ್ಯ ನಡೆಯಲು ಸಾಧ್ಯವಾಗದಿದ್ದಾಗ, ಉತ್ತಮ ರನ್ ರೇಟ್ ಆಧಾರದ ಮೇಲೆ ಪಾಕಿಸ್ತಾನಕ್ಕೆ ಪ್ರಶಸ್ತಿಯನ್ನು ನೀಡಿದ್ದರಿಂದ ಈ ಹೊಸ ವಿವಾದ ಉಂಟಾಗಿದೆ. 'ರಿಸರ್ವ್ ಡೇ' (ಮೀಸಲು ದಿನ) ಇಲ್ಲದಿದ್ದಾಗ, ನೆಟ್ ರನ್ ರೇಟ್ ಮೂಲಕ ವಿಜೇತರನ್ನು ನಿರ್ಧರಿಸುವ ಬದಲು, ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಬೇಕಿತ್ತು ಎಂದು ಭಾರತ ವಾದಿಸಿದೆ.
ವರ್ಲ್ಡ್ ಬ್ಲೈಂಡ್ ಕ್ರಿಕೆಟ್ ಕೌನ್ಸಿಲ್ (WBCC) ಅಧ್ಯಕ್ಷ ಹಾಗೂ ಪಾಕಿಸ್ತಾನ್ ಬ್ಲೈಂಡ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಸುಲ್ತಾನ್ ಶಾ ಅವರು, ಭಾರತ ಮತ್ತು ಪಾಕಿಸ್ತಾನಗಳನ್ನು ಜಂಟಿ ವಿಜೇತರೆಂದು ಘೋಷಿಸಬೇಕೆಂಬ WBCC ತಾಂತ್ರಿಕ ಸಮಿತಿಯ ಶಿಫಾರಸನ್ನು ತಳ್ಳಿಹಾಕಿದ ನಂತರ ಈ ವಿವಾದ ತೀವ್ರಗೊಂಡಿತು. ತರುವಾಯ, ಪಾಕಿಸ್ತಾನವನ್ನೇ ಚಾಂಪಿಯನ್ ಎಂದು ಘೋಷಿಸುವಂತೆ ಪಂದ್ಯದ ರೆಫರಿಗೆ ಸೂಚನೆ ನೀಡಲಾಯಿತು.