ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanakya Niti: ಬಾಳ ಸಂಗಾತಿಯ ಆಯ್ಕೆಯಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು? ಇದು ನಿಮಗೆ ತಿಳಿದಿರಲೇಬೇಕಾದ ವಿಚಾರ

ಸಂಗಾತಿಯನ್ನು ಆಯ್ಕೆ ಮಾಡುವಾಗ ಬರೀ ಅಂದ ಚೆಂದವನ್ನು ನೋಡುವುದು ಮಾತ್ರವಲ್ಲ, ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಹೀಗಿರುವಾಗ ನೀವು ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ಚಾಣಕ್ಯ ಅವರ ಈ ಸಲಹೆಗಳನ್ನು ಪಾಲಿಸಿ.

ಬಾಳ ಸಂಗಾತಿಯ ಆಯ್ಕೆ ಹೇಗಿರಬೇಕು? ಚಾಣಕ್ಯರ ಕಿವಿ ಮಾತು ಇಲ್ಲಿದೆ

ಚಾಣಕ್ಯ -

Profile
Sushmitha Jain Dec 15, 2025 8:00 AM

ಬೆಂಗಳೂರು, ಡಿ. 15: ವಿವಾಹಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಹಾಗಾಗಿ ನಮಗೆ ಹೊಂದುವ ಬಾಳ ಸಂಗಾತಿಯನ್ನು ಭಗವಂತ ಮೊದಲೇ ನಿರ್ಧರಿಸಿಬಿಟ್ಟಿರುತ್ತಾನೆ ಎಂದೂ ನಂಬುವವರಿದ್ದಾರೆ. ಇತ್ತೀಚೆಗೆ ಸಂಗಾತಿಗಳ ನಡುವೆ ಸಾಮರಸ್ಯಕ್ಕಿಂತ ಮನಸ್ತಾಪಗಳೇ ಹೆಚ್ಚಾಗುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಸದ್ಯದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ಬದಲಾದ ಕಾಲಘಟ್ಟದಲ್ಲಿ ಸ್ತ್ರೀ ಪುರುಷ ಸಮಾನರು ಎಂಬ ಕಲ್ಪನೆಯೂ ಕಾರಣವಾಗಿರಬಹುದು. ಹಾಗಾಗಿ ಇಂದು ನಮಗೆ ಸರಿ ಹೊಂದುವ ಸಂಗಾತಿಯನ್ನು ಆರಿಸಿಕೊಳ್ಳುವುದು ಗಂಡು ಮತ್ತು ಹೆಣ್ಣಿಗೊಂದು ಸವಾಲಿನ ಕೆಲಸವೇ ಸರಿ.
ನಮಗೊಪ್ಪುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಚಾಣಕ್ಯ ನೀತಿಯಲ್ಲಿನ (Chanakya Niti) ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಸಾಧ್ಯವಾದಷ್ಟು ಪಾಲಿಸಿದಲ್ಲಿ ನಮ್ಮ ಬಯಕೆಯ ಸಂಗಾತಿ ಲಭಿಸಿ ಬಾಳು ಬಂಗಾರವಾಗುವುದರಲ್ಲಿ ಸಂಶಯವಿಲ್ಲ.

ಸಂಗಾತಿಯನ್ನು ಆಯ್ಕೆ ಮಾಡುವಾಗ ಬರೀ ಅಂದ ಚೆಂದವನ್ನು ನೋಡುವುದು ಮಾತ್ರವಲ್ಲ, ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಹೀಗಿರುವಾಗ ನೀವು ಸಹ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ಚಾಣಕ್ಯ ಅವರ ಈ ಸಲಹೆಗಳನ್ನು ಪಾಲಿಸಿ.

ಬಾಹ್ಯ ಸೌಂದರ್ಯಕ್ಕಿಂತ ಗುಣಗಳ ಮೇಲೆ ಗಮನ ಹರಿಸಿ: ಕೇವಲ ಸೌಂದರ್ಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ ದಾಂಪತ್ಯ ಜೀವನ ಯಶಸ್ವಿಯಾಗುವುದಿಲ್ಲ. ಸೌಂದರ್ಯದ ಹೊರತಾಗಿ ಗುಣ ನಡತೆಯನ್ನು ಸಹ ಪರಿಗಣಿಸಬೇಕು.

ಹಣ ಬರುತ್ತಿಲ್ಲ, ಬಂದ ಹಣ ಉಳಿಯುತ್ತಿಲ್ಲವೆಂಬ ಚಿಂತೆಯೇ? ಹಾಗಾದ್ರೆ ಈ ಸಿಂಪಲ್ ಪರಿಹಾರಗಳನ್ನು ಮಾಡಿ

ಮದುವೆಗೂ ಮುನ್ನ ನೀವು ಆಯ್ಕೆ ಮಾಡುವ ಸಂಗಾತಿ ಕುಟುಂಬಕ್ಕೆ ಎಷ್ಟು ಮೌಲ್ಯ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಆಕೆ ಅಥವಾ ಆತ ಕುಟುಂಬ ಸದಸ್ಯರಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ, ಕುಟುಂಬ ಸದಸ್ಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಹಿರಿಯರಿಗೆ ಗೌರವ ನೀಡುತ್ತಾರೆಯೇ ಇತ್ಯಾದಿ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ತಾಳ್ಮೆ ಇರುವ ವ್ಯಕ್ತಿ ಜೀವನದಲ್ಲಿ ಯಾವುದೇ ಕಠಿಣ ಪರಿಸ್ಥಿತಿಯನ್ನು ಸಹ ಎದುರಿಸಬಲ್ಲ ಮತ್ತು ತಾಳ್ಮೆ ಇರುವವರು ಎಲ್ಲೂ ವಿಚಲಿತರಾಗದೆ ಪರಿಸ್ಥಿಯನ್ನು ತಾಳ್ಮೆಯಿಂದ ನಿಭಾಯಿಸುತ್ತಾರೆ. ಹಾಗಾಗಿ, ನಿಮ್ಮ ಸಂಗಾತಿಗೆ ತಾಳ್ಮೆ ಇದೆಯೇ ಎಂಬುದನ್ನು ಪರೀಕ್ಷಿಸುವುದು ಮುಖ್ಯ ಎನ್ನುವುದು ಚಾಣಕ್ಯ ಅವರ ಕಿವಿ ಮಾತು. ನಿಮ್ಮ ಸಂಗಾತಿ ಎಲ್ಲರನ್ನೂ ಗೌರವಿಸುತ್ತಾರೆಯೇ, ಸಂಬಂಧಗಳಿಗೆ ಬೆಲೆ ಕೊಡುತ್ತಾರೆಯೇ ಎಂಬುದನ್ನು ಗಮನಿಸಬೇಕು. ಏಕೆಂದರೆ ಮೌಲ್ಯಗಳ ಕೊರತೆ ವ್ಯಕ್ತಿಯನ್ನು ದುರಹಂಕಾರಿಯನ್ನಾಗಿ ಮಾಡುತ್ತದೆ ಮತ್ತು ಅಂತಹವರು ತಮ್ಮ ಸಂಗಾತಿಯನ್ನು ಸಹ ಗೌರವಿಸಲಾರರು.

ಸಂಗಾತಿಯನ್ನು ಆಯ್ಕೆ ಮಾಡುವಾಗ ಆತ/ಆಕೆ ಮುಂಗೋಪಿಯೇ ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಕೋಪದ ಸ್ವಭಾವದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ದಾಂಪತ್ಯ ಜೀವನವು ತೊಂದರೆಗೊಳಗಾಗುತ್ತದೆ. ಹಾಗಾಗಿ ತಾಳ್ಮೆಯಿಂದ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವಂತಹ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ.

ದಯಾಳು ಸ್ವಭಾವದ ವ್ಯಕ್ತಿಯು ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅದೇ ರೀತಿ ಅವರು ತಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸುತ್ತಾರೆ. ಇದಲ್ಲದೆ, ಸಹಿಷ್ಣು ಸ್ವಭಾವದವರು ಜೀವನದ ಏರಿಳಿತಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾರೆ. ಆದ್ದರಿಂದ ಇಂತಹ ಗುಣಗಳಿರುವ ಸಂಗಾತಿಯನ್ನೇ ಆಯ್ಕೆ ಮಾಡಿ. ಹೀಗಾಗಿ ನಿಮಗೊಪ್ಪುವ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಆಚಾರ್ಯ ಚಾಣಕ್ಯರ ಈ ನೀತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಿರಿ.