Astro Tips: ಸಾಲದ ಹೊರೆ, ಹಣದ ಸಮಸ್ಯೆ ಕಾಡುತ್ತಿದೆಯೇ? ಈ ಪರಿಹಾರಗಳಿಂದ ದೂರವಾಗಬಹುದು ಆರ್ಥಿಕ ಸಂಕಷ್ಟ
ಹಣ ಕೈಯಲ್ಲಿ ಉಳಿಯದೇ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ಧಾರ್ಮಿಕ ನಂಬಿಕೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನುಸರಿಸಬಹುದಾದ ಕೆಲವು ಸರಳ ಪರಿಹಾರಗಳು ಇಲ್ಲಿದ್ದು, ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರಗೊಳ್ಳಲಿದೆ
ಜ್ಯೋತಿಷ್ಯ ಶಾಸ್ತ್ರ -
ಬೆಂಗಳೂರು: ಹಣ ಕೈಗೆ ಬಂದ ತಕ್ಷಣವೇ ಖರ್ಚಾಗಿ ಹೋಗುತ್ತಿದೆಯೇ? ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯದೇ, ಸಾಲದ ಹೊರೆ ಅಥವಾ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಕಾಡುತ್ತಿದೆಯೇ? ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗಿ, ಆದಾಯಕ್ಕಿಂತ ಖರ್ಚೇ ಹೆಚ್ಚಾಗುತ್ತಿದ್ದರೆ ಅದು ಹಲವು ಕುಟುಂಬಗಳ ಸಾಮಾನ್ಯ ಸಮಸ್ಯೆಯಾಗಿದೆ. ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಸರಳ ಆಧ್ಯಾತ್ಮಿಕ ಆಚರಣೆಗಳನ್ನು ನಿಯಮಿತವಾಗಿ ಪಾಲಿಸುವುದರಿಂದ ಲಕ್ಷ್ಮೀ ದೇವಿಯ ಕೃಪೆ ಲಭಿಸಿ, ಹಣಕಾಸಿನ ಸ್ಥಿತಿ ಸುಧಾರಿಸಬಹುದು ಎಂದು ಹೇಳಲಾಗುತ್ತದೆ. ದಾನ-ಧರ್ಮ ಮಾಡುವುದು, ಮನೆಯ ಶುಭತೆಯನ್ನು ಕಾಪಾಡುವುದು ಹಾಗೂ ಕೆಲವು ವಿಶೇಷ ಪೂಜೆ-ಪುನಸ್ಕಾರಗಳನ್ನು ಆಚರಿಸುವುದರಿಂದ ಧನಸಂಪತ್ತು, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.
ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ(Astro Tips) ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯಲು ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಹೊಂದಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯೋಣ.
ಆದಾಯದ ಒಂದು ಭಾಗವನ್ನು ದಾನ ಮಾಡಿ
ಪ್ರತಿ ತಿಂಗಳು ನಿಮ್ಮ ಆದಾಯದ ಒಂದು ಸಣ್ಣ ಭಾಗವನ್ನು ಬಡವರಿಗೆ, ದೇವಸ್ಥಾನಗಳಿಗೆ ಅಥವಾ ಸಮಾಜಮುಖಿ ಕಾರ್ಯಗಳಿಗೆ ದಾನ ಮಾಡಿ. ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಿ, ಹಣದ ಹರಿವು ಉತ್ತಮವಾಗುತ್ತದೆ ಹಾಗೂ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡಿ
ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನೀರು ಹಾಕಿ, ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿ, ಐಶ್ವರ್ಯ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಜಾನೆ ಈ ಕೆಲಸ ಮಾಡಿದವರಿಗೆ ಸಿಗಲಿದೆ ಮುಕ್ಕೋಟಿ ದೇವರ ವಿಶೇಷ ಅನುಗ್ರಹ!
ಬುಧವಾರ ಹಸುವಿಗೆ ಹಸಿರು ಹುಲ್ಲು ನೀಡಿ
ಪ್ರತಿ ಬುಧವಾರ ಹಸುವಿಗೆ ಹಸಿರು ಹುಲ್ಲು ಅಥವಾ ಮೇವು ತಿನ್ನಿಸುವುದು ಶುಭಕರವೆಂದು ನಂಬಲಾಗಿದೆ. ಇದರಿಂದ ಕುಟುಂಬದ ದೋಷಗಳು ಕಡಿಮೆಯಾಗಿ, ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಎಂದು ಧಾರ್ಮಿಕ ನಂಬಿಕೆಗಳಿವೆ.
ಒಡೆದ ಪಾತ್ರೆಗಳನ್ನು ಮನೆಯಲ್ಲಿ ಇಡಬೇಡಿ
ಮುರಿದ, ಬಿರುಕು ಬಿಟ್ಟ ಅಥವಾ ಬಳಕೆಗೆ ಅಯೋಗ್ಯವಾದ ಪಾತ್ರೆಗಳು ಮತ್ತು ವಸ್ತುಗಳನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಇಂತಹ ವಸ್ತುಗಳನ್ನು ತಕ್ಷಣವೇ ತೆಗೆದುಹಾಕುವುದು ಉತ್ತಮ.
ಶುಕ್ರವಾರ ವಿಷ್ಣುವಿಗೆ ಶಂಖದಿಂದ ಜಲಾಭಿಷೇಕ ಮಾಡಿ
ಪ್ರತಿ ಶುಕ್ರವಾರ ಭಗವಾನ್ ವಿಷ್ಣುವಿಗೆ ಶಂಖದಲ್ಲಿ ನೀರು ತುಂಬಿ ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ವಿಷ್ಣುವಿನೊಂದಿಗೆ ಲಕ್ಷ್ಮೀ ದೇವಿಯ ಕೃಪೆಯೂ ಲಭಿಸಿ, ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಹಾಗೂ ಜೀವನದಲ್ಲಿ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.