Tips For Smartphone: ಮೊಬೈಲ್ ಫೋನ್‌ನ ಸ್ಟೋರೇಜ್ ಹೆಚ್ಚಿಸಬೇಕೆ? ಈ ಟಿಪ್ಸ್ ಫಾಲೋ ಮಾಡಿ
ನಿತ್ಯವೂ ಏನಾದರೊಂದು ಫೋಟೊ, ವಿಡಿಯೊ, ಡೌನ್‌ಲೋಡ್ ಮಾಡಿರುವ ಅಪ್ಲಿಕೇಷನ್ ಹೀಗೆ ಹಲವು ಕಾರಣಗಳಿಗೆ ಮೊಬೈಲ್ ಫೋನ ಸ್ಟೋರೇಜ್ ತುಂಬಿ ಸರಾಗವಾಗಿ ಬಳಸಲು ತೊಡಕು ಎದುರಾಗುತ್ತದೆ. ಮೊಬೈಲ್ ಸಂಗ್ರಹ ಸಾಮರ್ಥ್ಯ ಖಾಲಿಯಾದಾಗಲೇ ಅನೇಕ ತೊಂದರೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಈ ಸಮಸ್ಯೆಗೆ ಇಲ್ಲಿದೆ ಪರಿಹಾರ.

ಸಾಂದರ್ಭಿಕ ಚಿತ್ರ.

ಅಲ್ಲಲ್ಲಿ ಕ್ಲಿಕ್ಕಿಸಿಕೊಂಡ ಫೋಟೊ, ಶೂಟ್ ಮಾಡಿದ ವಿಡಿಯೊ, ಬೇಕೆಂದಾಗ ಸುಲಭವಾಗಿ ಸಿಗಲಿ ಎಂದು ಸಂಗ್ರಹಿಸುವ ದಾಖಲೆಗಳು, ಬೇಕಾಗುತ್ತೆ ಎಂದುಕೊಂಡು ಡೌನ್‌ಲೋಡ್ ಮಾಡಿರುವ ಅಪ್ಲಿಕೇಷನ್... ಹೀಗೆ ಇವುಗಳು ತುಂಬಿ ತುಳುಕಿದ ಮೇಲೆ ಮೊಬೈಲ್‌ನಲ್ಲಿ ಸ್ಟೋರೇಜ್ ಭರ್ತಿಯಾಗಿರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಸಂಗ್ರಹ ಸಾಮರ್ಥ್ಯ (Storage) ಖಾಲಿಯಾದಾಗಲೇ ಹೆಚ್ಚಿನವರಿಗೆ ತಮ್ಮ ಫೋನ್ ಚಿಂತೆ ಕಾಡುತ್ತದೆ. ಅಲ್ಲಿವರೆಗೆ ಬೇಕುಬೇಕಾದನ್ನೆಲ್ಲ ತುಂಬಿಸಿಕೊಂಡಿರುತ್ತೇವೆ. ಮೊಬೈಲ್ ಸಂಗ್ರಹ ಸಾಮರ್ಥ್ಯ (phone storage) ಖಾಲಿಯಾದಾಗಲೇ ಅನೇಕ ತೊಂದರೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಯಾಕೆಂದರೆ ಇತ್ತೀಚಿನ ಸ್ಮಾರ್ಟ್ ಫೋನ್‌ಗಳಲ್ಲಿ (Tips For Smartphone) ವಿಸ್ತರಿಸಬಹುದಾದ ಶೇಖರಣಾ ಆಯ್ಕೆಗಳು ಇರುವುದಿಲ್ಲ (Tips for increase phone storage). ಇದ್ದರೂ ಹೆಚ್ಚಿನವರು ಅದನ್ನು ಬಳಸಿಕೊಳ್ಳುವುದಿಲ್ಲ.
ಹೆಚ್ಚಿನವರು ಈಗ ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದಾರೆ. ಇದರಲ್ಲಿ ಹೊಸ ಅಪ್ಲಿಕೇಶನ್, ಫೋಟೋ ಅಥವಾ ನವೀಕರಣಕ್ಕಾಗಿ ಸ್ಥಳಾವಕಾಶ ಬಹುಬೇಗನೆ ಖಾಲಿಯಾಗುತ್ತದೆ. ಇದಕ್ಕಾಗಿ ಸದಾ ಹಳೆಯದನ್ನು ಡಿಲೀಟ್ ಮಾಡಬೇಕಾಗುತ್ತದೆ. ಆಗ ನೆಚ್ಚಿನ ಅಪ್ಲಿಕೇಶನ್ ಅಥವಾ ಫೋಟೊಗಳನ್ನು ಡಿಲೀಟ್ ಮಾಡುವುದು ಹೆಚ್ಚು ದುಃಖ ಕೊಡುತ್ತದೆ.
ಒಂದು ವೇಳೆ ಈ ಸಮಸ್ಯೆ ನಿಮ್ಮ ಮೊಬೈಲ್‌ನಲ್ಲೂ ಕಂಡು ಬಂದರೆ ತ್ವರಿತವಾಗಿ ಇದನ್ನು ಪರಿಹಾರ ಮಾಡಬಹುದು. ಇದಕ್ಕಾಗಿ ಮೊಬೈಲ್‌ನಲ್ಲಿರುವ ಮೌಲ್ಯಯುತವಾದ ಯಾವುದನ್ನೂ ಕಳೆದುಕೊಳ್ಳಬೇಕಿಲ್ಲ. ಮಾತ್ರವಲ್ಲ ಇದಕ್ಕಾಗಿ ಫೋನ್ ಅನ್ನು ಅಪ್‌ಗ್ರೇಡ್ ಕೂಡ ಮಾಡಬೇಕಿಲ್ಲ. ಫೋನ್‌ನಲ್ಲಿ ಸ್ವಲ್ಪ ಜಾಗವನ್ನು ತೆರವುಗೊಳಿಸಲು ಈ ಐದು ದಾರಿ ಖಂಡಿತಾ ಸಹಾಯ ಮಾಡುತ್ತದೆ.

ಸಂಗ್ರಹ ಮತ್ತು ಅಪ್ಲಿಕೇಶನ್ ಡೇಟಾ ತೆರವು
ಅನೇಕ ಅಪ್ಲಿಕೇಶನ್‌ಗಳು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ. ಇದು ಕೂಡ ಫೋನ್ ಸ್ಟೋರೇಜ್ ಫುಲ್ ಆಗಲು ಕಾರಣವಾಗುತ್ತದೆ. ಆಂಡ್ರಾಯ್ಡ್ ಫೋನ್ ನಿಮ್ಮದಾಗಿದ್ದರೆ ಅದರಲ್ಲಿ ಸಂಗ್ರಹವನ್ನು ತೆರವುಗೊಳಿಸಲು Settings-Storage-Cached Dataಗೆ ಹೋಗಿ ಅಲ್ಲಿ clear the cache ಎಂಬುದನ್ನು ಕೊಟ್ಟರೆ ಸಂಪೂರ್ಣ ಡೇಟಾ ಮಾಹಿತಿ ಅಳಿಸಿ ಹೋಗುತ್ತದೆ. ಒಂದು ವೇಳೆ ಸಂಪೂರ್ಣವಾಗಿ ತೆಗೆದುಹಾಕಲು ಬಯಸದಿದ್ದರೆ Settings-General-iPhone Storageಗೆ ಹೋಗಿ ಅಲ್ಲಿ Offload Unused Apps ಆಯ್ಕೆ ಮಾಡಿದರೆ ಬಳಕೆಯಾಗದೇ ಇರುವ ಅಪ್ಲಿಕೇಶನ್‌ಗಳನ್ನು ಸ್ವತಃ ತೆಗೆದು ಹಾಕುತ್ತದೆ.
ಫೋಟೊ ಮತ್ತು ವಿಡಿಯೊ
ಫೋನ್‌ನ ಫೋಟೊ ಗ್ಯಾಲರಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಗ್ರಹವಿರುತ್ತದೆ. ಅದು ಎಷ್ಟು ಜಾಗವನ್ನು ಆಕ್ರಮಿಸಿಕೊಂಡಿದೆ ಎಂಬುದನ್ನು ಪರಿಶೀಲಿಸಲು Settings-General-Storageಗೆ ಹೋಗಿ ಫೋಟೊ ವಿಭಾಗವನ್ನು ಹುಡುಕಿ. ಅದು ಒಂದು ಗಿಗಾಬೈಟ್‌ಗಿಂತ ಹೆಚ್ಚಿದ್ದರೆ ಫೋಟೊ ಮತ್ತು ವಿಡಿಯೊ ಹೆಚ್ಚು ಸಂಗ್ರಹವಾಗಿದೆ ಎಂದರ್ಥ. ಇದಕ್ಕಾಗಿ ಬ್ಯಾಕಪ್ ಸಹಾಯ ತೆಗೆದುಕೊಳ್ಳಬಹುದು. Google ಅಥವಾ Amazon ಫೋಟೋಗಳು ಇದಕ್ಕೆ ಉತ್ತಮ ಆಯ್ಕೆ. ಇಲ್ಲಿ ಫೋಟೊಗಳನ್ನು ಅಪ್‌ಲೋಡ್ ಮಾಡಿದ ಅನಂತರ ಅವುಗಳನ್ನು ಮೊಬೈಲ್‌ನಿಂದ ಡಿಲೀಟ್ ಮಾಡಬಹುದು. ಬಳಿಕ ಡಿಲೀಟ್ ಮಾಡಿದ ಫೋಟೊ ಫೋಲ್ಡರ್ ಅನ್ನು ಡಿಲೀಟ್ ಮಾಡಲು ಮರೆಯಬೇಡಿ.

ಅನಗತ್ಯ ಫೈಲ್‌ಗಳು
ಮೊಬೈಲ್ ತುಂಬಾ ಹಳೆಯ ಅಥವಾ ಅಗತ್ಯವಿಲ್ಲದ ಫೈಲ್‌ಗಳೂ ಇರಬಹುದು. ಇವುಗಳಲ್ಲಿ ಚಲನಚಿತ್ರ, ಅಪ್ಲಿಕೇಶನ್, ಹಳೆಯ ದಾಖಲೆಗಳು ಇದ್ದರೆ ಅವುಗಳನ್ನು ಅಳಿಸಿ ಹಾಕಿ. ಇದರಿಂದ ಹೆಚ್ಚಿನ ಸ್ಥಳಾವಕಾಶವನ್ನು ಮೊಬೈಲ್‌ನಲ್ಲಿ ಪಡೆಯಬಹುದು.
ಇದನ್ನೂ ಓದಿ: Rangaswamy Mookanahalli Column: ನೆದರ್ಲ್ಯಾಂಡಿನಲ್ಲೂ ತಪ್ಪಿದಲ್ಲ ಇಲಿಕಾಟ !

ಲೈಟ್ ಅಪ್ಲಿಕೇಶನ್ ಬಳಸಿ
ಕೆಲವು ಅಪ್ಲಿಕೇಶನ್‌ಗಳು ವಿಶೇಷವಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಗಮನಾರ್ಹ ಸಂಗ್ರಹಣೆ ಅವಕಾಶವನ್ನು ಒದಗಿಸುತ್ತದೆ. ಉದಾ Facebook ಅಥವಾ Snapchatನಂತಹ ಭಾರಿ ಅಪ್ಲಿಕೇಶನ್‌ಗಳನ್ನು ಇಟ್ಟುಕೊಳ್ಳುವ ಬದಲು ಅವುಗಳ "lite" ಆವೃತ್ತಿಗಳನ್ನುಬಳಸುವುದು ಉತ್ತಮ. ಈ ಅಪ್ಲಿಕೇಶನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಕಡಿಮೆ ಜಾಗವನ್ನು ಬಳಸುತ್ತವೆ.
ಕ್ಲೌಡ್ ಸ್ಟೋರೇಜ್
ಆಂಡ್ರಾಯ್ಡ್ ಬಳಕೆದಾರರಿಗೆ Google ಡ್ರೈವ್ ಮತ್ತು iOS ಬಳಕೆದಾರರಿಗೆ iCloudನಂತಹ ಕ್ಲೌಡ್ ಸ್ಟೋರೇಜ್‌ಗಳು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ದಾಖಲೆಗಳು, ಫೋಟೊ, ವಿಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಮೊಬೈಲ್‌ನಲ್ಲಿ ಹೆಚ್ಚಿನ ಜಾಗವನ್ನು ಪಡೆಯಬಹುದು.
ಈ ಐದು ಪರಿಹಾರಗಳು ಖಂಡಿತ ಮೊಬೈಲ್‌ನಲ್ಲಿ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿ ಫೋನ್ ಅನ್ನು ಸರಾಗವಾಗಿ ಬಳಸಲು ಅನುವು ಮಾಡಿಕೊಡುತ್ತದೆ.