Independence Day Fashion 2026: ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಥ್ ನೀಡುವ 4 ಶೈಲಿಯ ಫ್ಯಾಷನ್‌ವೇರ್ಸ್
ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಈ 4 ಶೈಲಿಯ ಫ್ಯಾಷನ್‌ವೇರ್ಸ್ ಜತೆಯಾಗಿವೆ. ಸೆಲೆಬ್ರೇಷನ್‌ಗೆ ಸಾಥ್ ನೀಡುತ್ತಿವೆ. ಸದ್ಯಕ್ಕೆ ವೆರೈಟಿ ವೆಸ್ಟನ್‌ವೇರ್ಸ್ ಸೈಡಿಗೆ ಸರಿದಿದ್ದು, ದೇಸಿ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಅವು ಯಾವುವು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಕೃಪೆ: ಪಿಕ್ಸೆಲ್ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ (Independence Day Fashion 2026) ವೈವಿಧ್ಯಮಯ ದೇಸಿ ಫ್ಯಾಷನ್‌ವೇರ್‌ಗಳು ಎಂಟ್ರಿ ನೀಡಿದ್ದು, ಅವುಗಳಲ್ಲಿ ಈ 4 ಬಗೆಯವು ಟ್ರೆಂಡಿಯಾಗಿವೆ. ಹೌದು, ಸದ್ಯಕ್ಕೆ ವೆರೈಟಿ ವೆಸ್ಟನ್‌ವೇರ್ಸ್ ಸೈಡಿಗೆ ಸರಿದಿದ್ದು, ದೇಸಿ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಪ್ರವೇಶಿಸಿವೆ.
ಖಾದಿ ಫ್ಯಾಷನ್‌ವೇರ್ಸ್ ಖದರ್
ಎಲ್ಲಾ ವರ್ಗ ಹಾಗೂ ವಯಸ್ಸಿನವರಿಗೂ ಹೊಂದುವಂತಹ ವೆರೈಟಿ ಖಾದಿ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಆಗಮಿಸಿವೆ. ಕುರ್ತಾ, ಸೆಲ್ವಾರ್, ಸೀರೆ ಹೀಗೆ ನಾನಾ ಬಗೆಯವು ಹೊಸ ವಿನ್ಯಾಸದಲ್ಲಿ ಬಂದಿವೆ. ಇನ್ನು, ಜೆನ್ ಜಿ ಜನರೇಷನ್‌ನವರಿಗೂ ಮ್ಯಾಚ್ ಆಗುವಂತಹ ಮಾಡರ್ನ್ ಔಟ್‌ಫಿಟ್‌ಗಳು ಬಂದಿವೆ.
ಕಾಟನ್ ಔಟ್‌ಫಿಟ್ಸ್ ಅಬ್ಬರ
ಪ್ರತಿ ಸ್ವಾತಂತ್ರ್ಯೋತ್ಸವದಲ್ಲೂ ಕಾಟನ್ ಫ್ಯಾಬ್ರಿಕ್‌ನ ನಾನಾ ಡಿಸೈನ್‌ನ ಒಂದಕ್ಕಿಂತ ಒಂದು ಆಕರ್ಷಕವಾಗಿ ಕಾಣುವಂತಹ ಉಡುಪುಗಳು ಮಾರುಕಟ್ಟೆಯಲ್ಲಿ ಬರುತ್ತವೆ. ಈ ಬಾರಿಯೂ ಕೂಡ ಮಹಿಳೆಯರಿಗೆ ಕಾಟನ್ ಕುರ್ತಾ, ಸೆಲ್ವಾರ್ ಹಾಗೂ ಸೀರೆಗಳು ಬಂದಿವೆ. ಲೈಟ್ ವರ್ಣದ ಕ್ರೀಮ್, ಸ್ಕಾರ್ಲೆಟ್, ವೈಟ್ ವಿತ್ ಬಾರ್ಡರ್ ಇರುವಂತವು ಹೆಚ್ಚು ಚಾಲ್ತಿಯಲ್ಲಿವೆ.
ತ್ರಿವರ್ಣ ಸೀರೆಗಳ ಸಂಭ್ರಮ
ಮಹಿಳೆಯರ ಸಂಭ್ರಮ ಹೆಚ್ಚಿಸಲು ನಾನಾ ಫ್ಯಾಬ್ರಿಕ್‌ನಲ್ಲಿ ತ್ರಿವರ್ಣ ಸೀರೆಗಳು ಸೀರೆ ಲೋಕದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಕಾಟನ್, ಜಾರ್ಜೆಟ್, ಶಿಫಾನ್, ಕ್ರೇಪ್ ಹೀಗೆ ಲೆಕ್ಕವಿಲ್ಲದಷ್ಟು ಫ್ಯಾಬ್ರಿಕ್ ಹಾಗೂ ಡಿಸೈನ್ ಮತ್ತು ಪ್ರಿಂಟ್ಸ್‌ನಲ್ಲಿ ಕಾಣಿಸಿಕೊಂಡಿವೆ.
ರಂಗು ರಂಗಿನ ತಿರಂಗಾ ದುಪಟ್ಟಾ
ಸೆಲ್ವಾರ್, ಕುರ್ತಾ ಮೇಲೆ ಧರಿಸಬಹುದಾದ ಕ್ರೇಪ್, ಜಾರ್ಜೆಟ್, ಕಾಟನ್, ನೈಲಾನ್ ಸೇರಿದಂತೆ ನಾನಾ ಮೆಟೀರಿಯಲ್‌ನ ತ್ರಿವರ್ಣ ದುಪಟ್ಟಾಗಳು ಈ ಸೀಸನ್‌ಗೆ ಮತ್ತೊಮ್ಮೆ ಲಗ್ಗೆ ಇಟ್ಟಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)