ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಈಗ ನೀವೇ ನನಗೆ ಸ್ಪೂರ್ತಿʼ: 200 ರನ್‌ ಚಚ್ಚಿದ ವೈಭವ್‌ ಸೂರ್ಯವಂಶಿಗೆ ಸ್ಕೈ ವಿಶೇಷ ಸಂದೇಶ!

ಯುಎಇ ವಿರುದ್ಧ ಭಾರತ ಎ ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಸ್ಫೋಟಕ ದ್ವಿಶತಕಕ್ಕೆ ಸೂರ್ಯಕುಮಾರ್ ಯಾದವ್, ಸುರೇಶ್ ರೈನಾ, ಮೊಹಮ್ಮದ್ ಕೈಫ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

200 ರನ್‌ ಚಚ್ಚಿದ ವೈಭವ್‌ಗೆ ಸೂರ್ಯಕುಮಾರ್‌ ವಿಶೇಷ ಸಂದೇಶ!

ವೈಭವ್‌ ಸೂರ್ಯವಂಶಿಗೆ ಸೂರ್ಯಕುಮಾರ್‌ ಯಾದವ್‌ ವಿಶೇಷ ಸಂದೇಶ. -

Profile
Ramesh Kote Nov 24, 2026 11:26 PM

ದೋಹಾ: ಭಾರತದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ. 2026ರ ಎಸಿಸಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ (ACC Rising Stars Asia Cup 2026) ಟೂರ್ನಿಯಲ್ಲಿ ಯುಎಇ ವಿರುದ್ಧ ಭಾರತ ಎ ತಂಡದ ಪರ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನ ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಅವರ ಸ್ಫೋಟಕ ಬ್ಯಾಟಿಂಗ್‌ಗೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದರು. ಆ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಗರ್ಕ್ ಅವರ ದಾಖಲೆಯನ್ನು ಮುರಿದರು. ಮೆಗರ್ಕ್ 2023ರಲ್ಲಿ 29 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇಷ್ಟಕ್ಕೇ ಸುಮ್ಮನಾಗದ 15ರ ವಯಸ್ಸಿನ ಸೂರ್ಯವಂಶಿ ಕೇವಲ 40 ಎಸೆತಗಳಲ್ಲಿ 150 ರನ್‌ಗಳ ಗಡಿ ತಲುಪಿದರು. ಕಳೆದ ವರ್ಷ ಅರುಣಾಚಲ ಪ್ರದೇಶ ವಿರುದ್ಧ ಬಿಹಾರ ಪರ ಆಡಿದ್ದಾಗ 59 ಎಸೆತಗಳಲ್ಲಿ 150 ರನ್ ಗಳಿಸಿ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು 19 ಎಸೆತಗಳ ಅಂತರದಿಂದ ಮುರಿದರು.

ಇನ್ನು ದ್ವಿಶತಕದ ಸಾಧನೆಯನ್ನು ಕೇವಲ 52 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಈ ಹಿಂದೆ ನ್ಯೂಜಿಲೆಂಡ್‌ನ ಚಾಡ್ ಬೌಸ್ ಅವರು ಫೋರ್ಡ್ ಟ್ರೋಫಿಯಲ್ಲಿ ಒಟಾಗೊ ವಿರುದ್ಧ ಕ್ಯಾಂಟರ್‌ಬರಿ ಪರ 103 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದು ದಾಖಲೆಯಾಗಿತ್ತು. ಇದೀಗ ಸೂರ್ಯವಂಶಿ ಆ ದಾಖಲೆಯನ್ನು ಬಹುತೇಕ ಅರ್ಧದಷ್ಟು ಎಸೆತಗಳಲ್ಲಿ ಮುರಿದಿದ್ದಾರೆ.

IND A vs UAE A: 52 ಎಸೆತಗಳಲ್ಲಿ ಡಬಲ್‌ ಸೆಂಚುರಿ, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಈಗ ನನಗೆ ನೀವೇ ಸ್ಪೂರ್ತಿ: ಸೂರ್ಯ

ವೈಭವ್ ಸೂರ್ಯವಂಶಿ ಅವರ ಐತಿಹಾಸಿಕ ಇನಿಂಗ್ಸ್‌ಗೆ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ವೈಭವ್ ಸೂರ್ಯವಂಶಿ, ಈಗ ನೀನೇ ನನಗೆ ಸ್ಫೂರ್ತಿ. ಎಂತಹ ಅದ್ಭುತ ಆಟಗಾರ. ನಿಜಕ್ಕೂ ವಿಶೇಷ ಪ್ರತಿಭೆ," ಎಂದು ಸೂರ್ಯಕುಮಾರ್ ಯಾದವ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.



28 ಸಿಕ್ಸರ್‌ ಬಾರಿಸಿದ ವೈಭವ್‌

ತಮ್ಮ ಇನಿಂಗ್ಸ್‌ನಲ್ಲಿ ಸೂರ್ಯವಂಶಿ ಏಳು ಬೌಂಡರಿ ಹಾಗೂ ಬರೋಬ್ಬರಿ 28 ಸಿಕ್ಸರ್‌ಗಳನ್ನು ಸಿಡಿಸಿದರು. ಆ ಮೂಲಕ ಲಿಸ್ಟ್ ಎ ಕ್ರಿಕೆಟ್‌ನ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಬರೆದದರು. 2018ರಲ್ಲಿ ಡಿ'ಆರ್ಸಿ ಶಾರ್ಟ್ ದಾಖಲಿಸಿದ್ದ 23 ಸಿಕ್ಸರ್‌ಗಳ ದಾಖಲೆಯನ್ನು ಹಿಂದಿಕ್ಕಿದರು. ಅಂತಿಮವಾಗಿ 53 ಎಸೆತಗಳಲ್ಲಿ 204 ರನ್ ಗಳಿಸಿ ಔಟಾದರೂ, ಅದಕ್ಕೂ ಮುನ್ನ ಹಲವು ದಾಖಲೆಗಳನ್ನು ಮುರಿದಿದ್ದಾರೆ.



ವೈಭವ್‌ ಆಟಕ್ಕೆ ಸುರೇಶ್ ರೈನಾ ಮೆಚ್ಚುಗೆ

"ಅಸಾಧಾರಣ ಪ್ರತಿಭೆ! ಇಷ್ಟು ಚಿಕ್ಕ ವಯಸ್ಸಿನಲ್ಲೇ ದ್ವಿಶತಕ ಸಿಡಿಸಿರುವುದು ವೈಭವ್ ಸೂರ್ಯವಂಶಿ ಅವರ ನಿರ್ಭೀತ ಮನೋಭಾವ ಮತ್ತು ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತದೆ. ದೊಡ್ಡ ಕನಸುಗಳನ್ನು ಕಾಣುತ್ತಾ ಇರಿ, ಇದೇ ರೀತಿ ಮಿಂಚುತ್ತಾ ದೇಶಕ್ಕೆ ಹೆಮ್ಮೆ ತಂದುಕೊಡಿ ಯುವ ಚಾಂಪಿಯನ್," ಎಂದು ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ ಬರೆದುಕೊಂಡಿದ್ದಾರೆ.



"ಕೇವಲ 53 ಎಸೆತಗಳಲ್ಲಿ 204 ರನ್, 28 ಸಿಕ್ಸರ್‌ಗಳು. ವೈಭವ್ ಸೂರ್ಯವಂಶಿ ದಾಖಲೆಗಳು ಮುರಿಯುವುದನ್ನು ಕಾಯುತ್ತಿಲ್ಲ, ಬದಲಿಗೆ ಕ್ರಿಕೆಟ್ ಇತಿಹಾಸವನ್ನೇ ಮರುಬರೆಯುತ್ತಿದ್ದಾರೆ. ಭವಿಷ್ಯದ ಸೂಪರ್‌ಸ್ಟಾರ್," ಎಂದು ಮೊಹಮ್ಮದ್‌ ಕೈಫ್ ಹೇಳಿದ್ದಾರೆ.