Monsoon Fashion 2025: ಮಾನ್ಸೂನ್ಗೆ ಬಂತು ಲೈಟ್ ವೇಟ್ ಯೂನಿಸೆಕ್ಸ್ ಜಾಕೆಟ್ಸ್
Monsoon Fashion 2025: ಈ ಮಾನ್ಸೂನ್ ಸೀಸನ್ನಲ್ಲಿ ಧರಿಸಿದಾಗ ಭಾರವೆನಿಸದ ಲೈಟ್ವೇಟ್ ಯೂನಿಸೆಕ್ಸ್ ಜಾಕೆಟ್ಗಳು ಲಗ್ಗೆ ಇಟ್ಟಿವೆ. ಲೇಯರ್ ಲುಕ್ಗೆ ಸಾಥ್ ನೀಡುತ್ತಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಸ್ಟೈಲಿಂಗ್ ಹೇಗೆ ? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಪಿಕ್ಸೆಲ್


ಮಾನ್ಸೂನ್ ಸೀಸನ್ಗೆ ಹೊಂದುವಂತಹ ವಿನೂತನ ಶೈಲಿಯ ಲೈಟ್ವೇಟ್ ಯೂನಿಸೆಕ್ಸ್ ಜಾಕೆಟ್ಗಳು ಎಂಟ್ರಿ ನೀಡಿವೆ.

ಲಗ್ಗೆ ಇಟ್ಟ ಲೈಟ್ವೈಟ್ ಜಾಕೆಟ್ಸ್
ಫಾರ್ಮಲ್ ಲುಕ್ ನೀಡುವ ಸ್ಲೀಕ್ ಕಟ್ಸ್, ಕ್ಲಾಸಿಕ್ ಲುಕ್ ನೀಡುವ ವೂಲ್ ಜಾಕೆಟ್, ಟ್ಯಾನ್ ಪ್ಲಸ್ ಫರ್ ಕಾಲರ್ಡ್ ಜಾಕೆಟ್, ಕ್ರೇಜಿ ರೈಡರ್ಗಳ ವಿಂಟೇಜ್ ಎವಿಯೆಟರ್ ಬಾಂಬರ್ ಜಾಕೆಟ್, ರಿಪ್ಪೆಡ್ ಜಾಕೆಟ್, ಕ್ವಿಲ್ಟೆಡ್ ಜಾಕೆಟ್ಸ್, ಪಫರ್, ಡಬ್ಬಲ್, ಶೆರ್ಲಿಂಗ್, ಟೂ ಇನ್ ವನ್ ಜಾಕೆಟ್ಗಳು ಹೊಸ ವಿನ್ಯಾಸಗಳೊಂದಿಗೆ ಮಾನ್ಸೂನ್ ಸೀಸನ್ಗೆ ಕಾಲಿಟ್ಟಿವೆ.
ಇನ್ನು ಮಾಡೆಲ್ ಗ್ರೀಷ್ಮಾ ಪ್ರಕಾರ, ಮೊದಲೆಲ್ಲಾ ಜಾಕೆಟ್ಗಳು ಕೇವಲ ಕಾಲೇಜು ಹುಡುಗ ಹುಡುಗಿಯರಿಗೆ ಮಾತ್ರ ಪ್ರಿಯವಾಗಿದ್ದವು. ಚಳಿ ಮಳೆಯಿಂದ ರಕ್ಷಣೆ ಪಡೆಯಲು ಧರಿಸಲು ಸೀಮಿತವಾಗಿದ್ದವು. ಇದೀಗ ಇವು ಮಾನ್ಸೂನ್ ಸ್ಟೈಲ್ ಸ್ಟೇಟ್ಮೆಂಟ್ಗೆ ಸೇರಿದ್ದು, ಎಲ್ಲ ವಯಸ್ಸಿನವರನ್ನು ಆಕರ್ಷಿಸತೊಡಗಿದೆ ಎನ್ನುತ್ತಾರೆ.

ವೈವಿಧ್ಯಮಯ ಜಾಕೆಟ್ಸ್
ಸಿಂಪಲ್ ಆಗಿ ಹೇಳಬೇಕೆಂದರೇ, ಜಾಕೆಟ್ಗಳಲ್ಲೂ ನಾನಾ ವೆರೈಟಿ ಹಾಗೂ ಡಿಸೈನ್ ಲಭ್ಯ. ಕೆಲವು ಫುಲ್ಲೆಂಥ್ ಇದ್ದರೇ, ಇನ್ನು ಕೆಲವು ಸೊಂಟದವರೆಗೆ, ಸೊಂಟದ ಮೇಲೆ ಕೆಳಗೆ ನಿಲ್ಲುತ್ತವೆ. ಒಟ್ನಲ್ಲಿ, ಜಾಕೆಟ್ನ ಔಟ್ಲುಕ್ ಅದನ್ನು ವಿನ್ಯಾಸಗೊಳಿಸಿರುವ ರೀತಿ, ಕಟ್, ಕಲರ್ ಮೇಲೆ ಡಿಪೆಂಡ್ ಆಗಿರುತ್ತವೆ. ಇಲ್ಲಿ ಪಾಕೆಟ್ಗಳಿಗೂ ಪ್ರಾಮುಖ್ಯತೆ ನೀಡಲಾಗಿರುತ್ತದೆ. ಜಾಕೆಟ್ನ ಸಂಪೂರ್ಣ ಲುಕ್ ಬದಲಿಸುವ ಸಾಮರ್ಥ್ಯ ಡಿಸೈನರ್ಸ್ ಬಟನ್ಗಳಲ್ಲಿದೆ. ಅದರಲ್ಲೂ ಮೆಟಲ್, ವಿಂಟೇಜ್ ಹಾಗೂ ಬಟನ್ಸ್ ಇರುವ ಜಾಕೆಟ್ಗಳು ರಾಯಲ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

ರೈಡರ್ಸ್ ಜಾಕೆಟ್ಸ್
ಕಚೇರಿಗೆ ತೆರಳುವವರು ಹಾಗೂ ದ್ವಿಚಕ್ರ ವಾಹನ ಚಾಲನೆ ಮಾಡುವವರು ಆದಷ್ಟೂ ಮಳೆಗೆ ನೆನೆಯದ ವಾಟರ್ ಪ್ರೂಫ್ ಫ್ಯಾಬ್ರಿಕ್ನ ಜಾಕೆಟ್ಗೆ ಪ್ರಾಮುಖ್ಯತೆ ನೀಡುವುದು ಉತ್ತಮ. ಬಟನ್ಗಿಂತ ಜಿಪ್ ಹಾಗೂ ಹೈ ಕಾಲರ್ಡ್ ನೆಕ್ ಜಾಕೆಟ್ ಖರೀದಿಸುವುದು ಬೆಸ್ಟ್. ಮಳೆ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸ್ಪೋರ್ಟ್ಸ್, ರೈಡರ್ಗಳಿಗೆಂದೇ ನಾನಾ ಬಗೆಯ ಜಾಕೆಟ್ಸ್ ಲಭ್ಯವಿದೆ ಎನ್ನುತ್ತಾರೆ ಮಾರಾಟಗಾರರು.

ಜಾಕೆಟ್ ಲವ್ವರ್ಸ್ಗೆ ಸಲಹೆ
- ಉದ್ದಗಿರುವವರಿಗೆ ಎಲ್ಲಾ ಶೈಲಿಯ ಜಾಕೆಟ್ಗಳೂ ಹೊಂದುತ್ತವೆ.
- ಪ್ಲಂಪಿಯಾಗಿರುವವರು ಆದಷ್ಟೂ ಲಾಂಗ್ ಜಾಕೆಟ್ ಆಯ್ಕೆ ಮಾಡಿ. ಫರ್, ಸ್ಪೋಟ್ಸ್, ಬಾಂಬರ್ ಜಾಕೆಟ್ ನಾಟ್ ಓಕೆ.
- ಡೆನಿಮ್ಸ್, ಖಾಕಿ, ಜೋಧ್ಪುರ್ ಪ್ಯಾಂಟ್ ಲಿನೆನ್ ಕುರ್ತಾಗಳ ಜತೆ ಜಾಕೆಟ್ ಪ್ರಯೋಗ ಮಾಡಿ, ನೋಡಿ!
- ನ್ಯಾರೋ ಕಟ್, ಬೂಟ್ಕಟ್ ಪ್ಯಾಂಟ್ಗಳ ಜತೆ ಜಾಕೆಟ್ ನಾಟ್ ಓಕೆ.