ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

3 Idiots 2 : 15 ವರ್ಷದ ನಂತರ ಮತ್ತೆ ಬರ್ತಿದ್ದಾರೆ ʻ3 ಈಡಿಯಟ್ಸ್ʼ ! ಸೀಕ್ವೆಲ್ ಮಾಡಲು ಆಮಿರ್ ಖಾನ್ ರೆಡಿ?

Aamir Khan: ಅಭಿಮಾನಿಗಳು ಮತ್ತು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ ಸಿನಿಮಾ ಇದು. ವರದಿಯ ಪ್ರಕಾರ, ತಯಾರಕರು ಅದೇ ತಾರಾಗಣದೊಂದಿಗೆ ಸೀಕ್ವೆಲ್‌ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 15 ವರ್ಷಗಳ ಹಿಂದೆ ಕ್ರಿಸ್‌ಮಸ್‌ ಸಮಯದಲ್ಲಿ 3 ಈಡಿಯಟ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.ಸ್ವಲ್ಪ ಸಮಯದಿಂದ 3 ಈಡಿಯಟ್ಸ್‌ನ ಮುಂದುವರಿದ ಭಾಗವನ್ನೇ ಯೋಚಿಸುತ್ತಿದ್ದಾರೆ ಹಿರಾನಿ ಎನ್ನಲಾಗುತ್ತಿದೆ.

3 Idiots 2 : 15 ವರ್ಷದ ನಂತರ ಮತ್ತೆ ಬರ್ತಿದ್ದಾರೆ  ʻ3 ಈಡಿಯಟ್ಸ್ʼ !

3 ಈಡಿಯಟ್ಸ್ ಸಿನಿಮಾ -

Yashaswi Devadiga
Yashaswi Devadiga Dec 8, 2025 9:03 PM

3 ಈಡಿಯಟ್ಸ್‌ಗೆ (3 Idiots 2) ಪರಿಚಯದ ಅಗತ್ಯವಿಲ್ಲ. ರಾಜ್‌ಕುಮಾರ್ ಹಿರಾನಿ (Rajkumar Hirani ) ನಿರ್ದೇಶನದ ಈ ಐಕಾನಿಕ್ ಚಿತ್ರ ಪ್ರೇಕ್ಷಕರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದೆ. ಅಭಿಮಾನಿಗಳು ಮತ್ತು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ ಸಿನಿಮಾ ಇದು. ವರದಿಯ ಪ್ರಕಾರ, ತಯಾರಕರು ಅದೇ ತಾರಾಗಣದೊಂದಿಗೆ ಸೀಕ್ವೆಲ್‌ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 15 ವರ್ಷಗಳ ಹಿಂದೆ ಕ್ರಿಸ್‌ಮಸ್‌ ಸಮಯದಲ್ಲಿ 3 ಈಡಿಯಟ್ಸ್ ಚಿತ್ರಮಂದಿರಗಳಲ್ಲಿ (theatre) ಬಿಡುಗಡೆಯಾಯಿತು.

ಮೊದಲ ಭಾಗದಷ್ಟೇ ತಮಾಷೆ

"ಸ್ಕ್ರಿಪ್ಟ್ ಅನ್ನು ಲಾಕ್ ಮಾಡಲಾಗಿದೆ ಮತ್ತು ತಂಡವು ಅದಕ್ಕಾಗಿ ತುಂಬಾ ಉತ್ಸುಕವಾಗಿದೆ. ಇದು ಮೊದಲ ಭಾಗದಷ್ಟೇ ತಮಾಷೆಯಾಗಿದೆ, ಭಾವನಾತ್ಮಕವಾಗಿದೆ ಮತ್ತು ಅರ್ಥಪೂರ್ಣವಾಗಿದೆ" ಎಂದು ವರದಿಯಾಗಿದೆ.

ಇದನ್ನೂ ಓದಿ: Aamir Khan-Gauri Spratt: ಸಂಬಂಧ ದೃಢಪಡಿಸಿದ ಬಳಿಕ ಮೊದಲ ಬಾರಿ ಜತೆಯಾಗಿ ಕಾಣಿಸಿಕೊಂಡ ಆಮೀರ್‌ ಖಾನ್‌-ಗೌರಿ ಸ್ಪ್ರಾಟ್

ರಾಜ್‌ಕುಮಾರ್ ಹಿರಾನಿ ಮತ್ತು ಆಮೀರ್ ಖಾನ್ ಅವರು ತಮ್ಮ ಬಹುನಿರೀಕ್ಷಿತ ದಾದಾಸಾಹೇಬ್ ಫಾಲ್ಕೆ ಜೀವನಚರಿತ್ರೆಯ ಚಿತ್ರಕಥೆಯಿಂದ ಸಂಪೂರ್ಣವಾಗಿ ತೃಪ್ತರಾಗದ ಕಾರಣ, ಆ ಚಿತ್ರದ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಸ್ವಲ್ಪ ಸಮಯದಿಂದ 3 ಈಡಿಯಟ್ಸ್‌ನ ಮುಂದುವರಿದ ಭಾಗವನ್ನೇ ಯೋಚಿಸುತ್ತಿದ್ದಾರೆ ಹಿರಾನಿ ಎನ್ನಲಾಗುತ್ತಿದೆ.

ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ

2009 ರಲ್ಲಿ ಬಿಡುಗಡೆಯಾದ ಮೂಲ ಚಿತ್ರವು ಬಾಲಿವುಡ್‌ನ ಅತ್ಯಂತ ಪ್ರತಿಷ್ಠಿತ ಮತ್ತು ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಪುನರ್ಮಿಲನದ ಸುದ್ದಿ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ.



ರಾಂಚೊ ಆಗಿ ಅಮೀರ್ ಖಾನ್, ಫರ್ಹಾನ್ ಆಗಿ ಆರ್ ಮಾಧವನ್, ರಾಜು ಆಗಿ ಶರ್ಮಾನ್ ಜೋಶಿ ಮತ್ತು ಪಿಯಾ ಆಗಿ ಕರೀನಾ ಕಪೂರ್ ಖಾನ್ ಅಭಿನಯಿಸಿದ್ದರು, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ಕೇವಲ ಬಾಕ್ಸಾಫೀಸ್‌ನಲ್ಲಿ ದಾಖಲೆಯಷ್ಟೇ ಬರೆಯಲಿಲ್ಲ. ಅಸಂಖ್ಯಾತ ಜನರ ಹೃದಯವನ್ನು ಗೆದ್ದಿತ್ತು. ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರಶ್ನೆ ಮಾಡಿತ್ತು.

ಇದನ್ನೂ ಓದಿ: Aamir Khan: ಆಮೀರ್‌ ಖಾನ್ ನಿವಾಸಕ್ಕೆ 25 ಮಂದಿ ಐಪಿಎಸ್ ಅಧಿಕಾರಿಗಳ ತಂಡ ಎಂಟ್ರಿ; ಅಷ್ಟಕ್ಕೂ ನಡೆದಿದ್ದೇನು?

200 ಕೋಟಿ ಬಾಕ್ಸಾಫೀಸ್ ಗಳಿಕೆ ಮತ್ತು ವಿಶ್ವವ್ಯಾಪಿ 395 ರೂ ಗಳಿಕೆ ಕಂಡ ಬಾಲಿವುಡ್‌ನ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ಅತಿ ಹೆಚ್ಚು ಬಾಕ್ಸಾಫೀಸ್ ಗಳಿಕೆ ಕಂಡ ಬಾಲಿವುಡ್ ಚಿತ್ರ ಎಂಬ ದಾಖಲೆ ಕೂಡ ಈ ಚಿತ್ರದ್ದು.ಇಷ್ಟೇ ಅಲ್ಲ ಅತ್ಯುತ್ತಮ ಜನಪ್ರಿಯ ಚಿತ್ರ, ಅತ್ಯುತ್ತಮ ಸಾಹಿತ್ಯ ಮತ್ತು ಆಡಿಯೋಗ್ರಫಿ ವಿಭಾಗದಲ್ಲಿ ಒಟ್ಟು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿತ್ತು.