45 Official Trailer: ‘45’ ಮೂವಿ ಟ್ರೈಲರ್ ಔಟ್! ಹಿಂದೆಂದೂ ಕಾಣದ ಅವತಾರದಲ್ಲಿ ಶಿವಣ್ಣ, ಉಪ್ಪಿ; ಡೈಲಾಗ್‌ಗೆ ಫ್ಯಾನ್ಸ್ ಫಿದಾ
Shivanna: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ , ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ʼ45ʼ ಮೂವಿ ಟ್ರೈಲರ್ ಔಟ್ ಆಗಿದೆ. ರಿಯಲ್ ಸ್ಟಾರ್ ಉಪೆಂದ್ರ ಅಂತೂ ಮಾಸ್ ಡೈಲಾಗ್ ಮೂಲಕವೇ ಅಬ್ಬರಿಸಿದ್ದಾರೆ. ಅದರಲ್ಲೂ ಶಿವಣ್ಣ ಹಿಂದೆಂದೂ ಕಂಡಿರದ ಲುಕ್‌ನಲ್ಲಿ ಮಿಂಚಿದ್ದಾರೆ. ಡಿಸೆಂಬರ್ 25 ಕ್ಕೆ ದೇಶಾದ್ಯಂತ, ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ. 13 ದಿನ ಮುನ್ನ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ.
45 ಸಿನಿಮಾ ಟ್ರೈಲರ್ -
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivarajkumar), ರಿಯಲ್ ಸ್ಟಾರ್ ಉಪೇಂದ್ರ (Actor Upendra) ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ʼ45ʼ ಮೂವಿ ಟ್ರೈಲರ್ ಔಟ್ ಆಗಿದೆ. ರಿಯಲ್ ಸ್ಟಾರ್ ಉಪೆಂದ್ರ ಅಂತೂ ಮಾಸ್ ಡೈಲಾಗ್ ಮೂಲಕವೇ ಅಬ್ಬರಿಸಿದ್ದಾರೆ. ಅದರಲ್ಲೂ ಶಿವಣ್ಣ (Shivanna) ಹಿಂದೆಂದೂ ಕಂಡಿರದ ಲುಕ್‌ನಲ್ಲಿ ಮಿಂಚಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼ45ʼ. ಬೆಂಗಳೂರಿನ ಶಂಕರ್ ನಾಗ್ ಸರ್ಕಲ್ ಬಳಿಯ ಸ್ಟೇಡಿಯಂನಲ್ಲಿ ಅರ್ಜುನ್ ಜನ್ಯಾ (Arjuna Janya) ಮೊಟ್ಟಮೊದಲ ನಿರ್ದೇಶನದ '45' ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ.
ಟ್ರೈಲರ್ ಔಟ್
ಅಲ್ಲಿ ಗೋರಿ ನೋಡ್ತಾ ಇದ್ಯಯಲ್ಲ, ಆ ಗೋರಿ ಮಧ್ಯ ಮನುಷ್ಯ ಹುಟ್ಟಿದ ದಿನಾಂಕ ಡ್ಯಾಶ್..,ಸಾಯೋ ದಿನಾಂಕ ಬರ್ದಿರತ್ತೆ. ಆ ನಡುವಲ್ಲಿ ಇರೋ ಸಣ್ಣ ಡ್ಯಾಶ್, ಮನುಷ್ಯನ ಇಡೀ ಜೀವನ ಅಂತ ಉಪ್ಪಿ ಮಾಸ್ ಡೈಲಾಗ್ ಹೇಳಿದ್ದಾರೆ. ಇನ್ನು ಟ್ರೈಲರ್ ಮ್ಯೂಸಿಕ್‌ಗೂ ಸಖತ್ ಫಿದಾ ಆಗಿದ್ದಾರೆ ಸಿನಿಪ್ರಿಯರು. ಮಾಸ್ ಡೈಲಾಗ್ ಜೊತೆ ಫೈಟ್, ಶಿವಣ್ಣ ಖದರ್, ರಾಜ್ ಬಿ ಶೆಟ್ಟಿ ನಟನೆ ಹೈಲೈಟ್ ಆಗಿದೆ. ಟ್ರೈಲರ್ ಕಂಡು ಸಿನಿಮಾ ಬೇಗ ರಿಲೀಸ್ ಆಗಲಿ, ಕಾಯ್ತಾ ಇದ್ದೀವಿ ಅಂತ ಕಮೆಂಟ್ ಮಾಡ್ತಿದ್ದಾರೆ ಸಿನಿ ಪ್ರೇಮಿಗಳು.
ಟ್ರೈಲರ್‌ನಲ್ಲಿ ಶಿವಣ್ಣನ ಲೇಡಿ ಗೆಟಪ್ ಅವತಾರ ಇನ್ನಷ್ಟು ಕುತೂಹಲ ಮೂಡಿಸಿದೆ. ಶಿವಣ್ಣನ ಪಾತ್ರ ಏನಿರಬಹುದು ಅಂತ ಕಮೆಂಟ್ ಮಾಡ್ತಿದ್ದಾರೆ ಫ್ಯಾನ್ಸ್.
ಟ್ರೈಲರ್ ಔಟ್
ರಾಜ್ಯಾದ್ಯಂತ ಸಿನಿಮಾ ಬಿಡುಗಡೆ
ಡಿಸೆಂಬರ್ 25 ಕ್ಕೆ ದೇಶಾದ್ಯಂತ, ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ. 13 ದಿನ ಮುನ್ನ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಜೊತೆಗೆ ಚಿತ್ರದ ಕಾಲಾವಧಿ ಎಷ್ಟು ಎನ್ನುವುದು ರಿವೀಲ್ ಆಗಿದೆ.ಲೇ '45' ಚಿತ್ರದ ಟೀಸರ್ ಹಾಗೂ ಪ್ರಮೋಷನಲ್ ಸಾಂಗ್ ಈಗಾಗಲೇ ಹಿಟ್ ಆಗಿದೆ. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಎದುರು ಈ ಮಲ್ಟಿಸ್ಟಾರರ್ ಸಿನಿಮಾ ಕೂಡ ಬರ್ತಿದೆ. ಬಹಳ ವರ್ಷಗಳ ಬಳಿಕ ಮತ್ತೆ ಶಿವಣ್ಣ, ಉಪೇಂದ್ರ ಒಟ್ಟಿಗೆ ನಟಿಸಿದ್ದಾರೆ.
ಸೆನ್ಸಾರ್ ವಿಚಾರಕ್ಕೆ ಬಂದರೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. '45' ಚಿತ್ರದ ಕಾಲಾವಧಿ 2 ಗಂಟೆ 30 ನಿಮಿಷ ಎನ್ನುವುದು ಬಯಲಾಗಿದೆ.ಕೌಸ್ತುಭ ಮಣಿ ಹಾಗೂ ಜಿಶು ಸೆಂಗುಪ್ತ ಚಿತ್ರದ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಫಿನಾಲೆ ಯಾವಾಗ? ಕಿಚ್ಚ ಸುದೀಪ್ ಏನಂದ್ರು?
ಸತ್ಯ ಹೆಗಡೆ ಛಾಯಾಗ್ರಹಣ, ಕೆ. ಪ್ರಕಾಶ್ ಸಂಕಲನ '45' ಚಿತ್ರಕ್ಕಿದೆ. ಸ್ವತಃ ಅರ್ಜುನ್ ಜನ್ಯಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ '45' ಸಿನಿಮಾ ಬಿಡುಗಡೆ ಆಗಲಿದೆ.