Grammy Awards: ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ- ವಿಜೇತರ ಪಟ್ಟಿ ಇಲ್ಲಿದೆ
ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ್ದ 67 ನೇ ಅತಿದೊಡ್ಡ ಗ್ರ್ಯಾಮಿ ಪ್ರಶಸ್ತಿ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ಸಂಜೆ ಲಾಸ್ ಏಂಜಲೀಸ್‌ನ ಕ್ರಿಪ್ಟೋ.ಕಾಮ್ ಅರೆನಾದಲ್ಲಿ ನಡೆಯಿತು. ಸಂಗೀತ ಲೋಕದಲ್ಲಿ ಅಭೂತಪೂರ್ವ ಸಾಧನಗೈದ ಸಾಧಕರಿಗೆ ಈ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಬಾರಿ ಒಟ್ಟು 94 ವಿಭಾಗದಲ್ಲಿ 84 ದಿಗ್ಗಜರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ವಾಷಿಂಗ್ಟನ್: ಹಾಲಿವುಡ್‌ನ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ(Grammy Awards) ಪ್ರಕಟವಾಗಿದ್ದು, ಅತ್ಯುತ್ತಮ ಹೊಸ ಕಲಾವಿದೆ ಪ್ರಶಸ್ತಿಯನ್ನು ಬೆನ್ಸನ್ ಬೂನ್ ಪಡೆದರೆ, ಅತ್ಯುತ್ತಮ ಕಂಟ್ರಿ ಆಲ್ಮಂ ಪ್ರಶಸ್ತಿಯನ್ನು ಬಿಯಾನ್ಸ್ – ಕೌಬಾಯ್ ಕಾರ್ಟರ್ ಪಡೆದುಕೊಂಡಿದ್ದಾರೆ. ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ್ದ 67 ನೇ ಅತಿದೊಡ್ಡ ಗ್ರ್ಯಾಮಿ ಪ್ರಶಸ್ತಿ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ಸಂಜೆ ಲಾಸ್ ಏಂಜಲೀಸ್‌ನ ಕ್ರಿಪ್ಟೋ.ಕಾಮ್ ಅರೆನಾದಲ್ಲಿ ನಡೆಯಿತು. ಸಂಗೀತ ಲೋಕದಲ್ಲಿ ಅಭೂತಪೂರ್ವ ಸಾಧನಗೈದ ಸಾಧಕರಿಗೆ ಈ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಬಾರಿ ಒಟ್ಟು 94 ವಿಭಾಗದಲ್ಲಿ 84 ದಿಗ್ಗಜರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಭಾರತ ಮೂಲದ ಅಮೆರಿಕ ಪ್ರಜೆ ಹಾಗೂ ಉದ್ಯಮಿ ಚಂದ್ರಿಕಾ ಟಂಡನ್(Chandrika Tandon)ಈ ಬಾರಿಯ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ‘ಬೆಸ್ಟ್ ನ್ಯೂ ಏಜ್’ವಿಭಾಗದಲ್ಲಿ ಅವರ ತ್ರಿವೇಣಿ ಆಲ್ಬಂಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದ್ದು, ಆ ಮೂಲಕ ಅವರು ಭಾರತದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರನ್ನು ಹಿಂದಿಕ್ಕಿದ್ದಾರೆ. ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ ಪಡೆದ ಪ್ರಮುಖರ ಪಟ್ಟಿ ಇಲ್ಲಿದೆ.
ಈ ಸುದ್ದಿಯನ್ನು ಓದಿ: Grammy Awards: ಭಾರತೀಯ ಮೂಲದ ಚಂದ್ರಿಕಾ ಟಂಡನ್‌ಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್; ರಿಕ್ಕಿ ಕೇಜ್‌ಗೆ ಭಾರೀ ನಿರಾಸೆ
ಮುಖ್ಯ ವಿಜೇತರ ಪಟ್ಟಿ :
- ರೆಕಾರ್ಡ್ ಆಫ್ ದಿ ಇಯರ್: ನಾಟ್ ಲೈಕ್ ಅಸ್ – ಕೆಂಡ್ರಿಕ್ ಲಾಮರ್
- ಸಾಂಗ್ ಆಫ್ ದಿ ಇಯರ್ : ನಾಟ್ ಲೈಕ್ ಅಸ್ – ನಾಟ್ ಲೈಕ್ ಅಸ್
- ಬೆಸ್ಟ್ ಕ್ಯಾಪ್ ಆಲ್ಬಂ: ಡೋಚಿ – ಅಲಿಗೇಟರ್ ಬೈಟ್ಸ್ ನೆವರ್
- ಬೆಸ್ಟ್ ಪಾಪ್ ವೋಕಲ್ ಆಲ್ಬಮ್: ಸಬ್ರಿನಾ ಕಾರ್ಪೆಂಟರ್ – ಶಾರ್ಟ್ ಎನ್ ಸ್ವೀಟ್
- ಬೆಸ್ಟ್ ಕಂಟ್ರಿ ಆಲ್ಬಂ: ಬೆಯೋನ್ಸ್ – ಕೌಬಾಯ್ ಕಾರ್ಟರ್
- ಬೆಸ್ಟ್ ನ್ಯೂ ಅರ್ಟಿಸ್ಟ್ : ಚಾಪೆಲ್ ರೋನ್
- ಬೆಸ್ಟ್ ಲ್ಯಾಟಿನ್ ಪಾಪ್ ಆಲ್ಬಂ: ಶಕೀರಾ – (ಲಾಸ್ ಮುಜೆರೆಸ್ ಯಾ ನೋ ಲೊರಾನ್ )
- ಬೆಸ್ಟ್ ಪಾಪ್ ಜೋಡಿ/ಗ್ರೂಪ್ ಪರ್ಫಾಮೆನ್ಸ್: ಬ್ರೂನೋ ಮಾರ್ಸ್, ಲೇಡಿ ಗಾಗಾ (ಡೈ ವಿತ್ ಎ ಸ್ಟೈಲ್)
- ಪ್ರೊಡ್ಯೂಸರ್ ಆಫ್ ದಿ ಇಯರ್ (ನಾನ್ ಕ್ಲಾಸಿಕಲ್): ಡೇನಿಯಲ್ ನಿಗೋ
- ಪ್ರೊಡ್ಯೂಸರ್ ಆಫ್ ದಿ ಇಯರ್: ಎಲೈನ್ ಮಾರ್ಟೋನ್
- ಸಾಂಗ್ ರೈಟರ್ ಆಫ್ ಇಯರ್ (ನಾನ್ ಕ್ಲಾಸಿಕಲ್) : ಆಮಿ ಅಲೆನ್
- ಬೆಸ್ಟ್ ಸೋಲೋ ಪರ್ಫಾಮೆನ್ಸ್: ಸಬ್ರಿನಾ ಕಾರ್ಪೆಂಟರ್ (“ಎಸ್ಸೆಸೊ”)
- ಬೆಸ್ಟ್ ರಾಕ್ ಪರ್ಫಾಮೆನ್ಸ್: “ನೌ & ದೆನ್” – ದಿ ಬೀಟಲ್ಸ್
- ಬೆಸ್ಟ್ ರಾಕ್ ಸಾಂಗ್: ಅನ್ನಿ ಕ್ಲಾರ್ಕ್ (ಬೋಕನ್ ಮ್ಯಾನ್)
- ಬೆಸ್ಟ್ ರಾಕ್ ಆಲ್ಬಂ: ಹ್ಯಾಕ್ಷಿ ಡೈಮಂಡ್ಸ್ (ದಿ ರೋಲಿಂಗ್ ಸ್ಟೋನ್ಸ್)
- ಬೆಸ್ಟ್ ಟ್ರೇಡಿಷನಲ್ ಪಾಪ್ ವೋಕಲ್ ಆಲ್ಬಂ: ವಿಷನ್ಸ್ – ನೋರಾ ಜೋನ್ಸ್
- ಬೆಸ್ಟ್ ಕಾಮಿಡಿ ಆಲ್ಬಂ: ದಿ ಡೀಮರ್ – ಡೇವ್ ಚಾಪೆಲ್
- ಬೆಸ್ಟ್ ಮ್ಯೂಸಿಕ್ ಫಿಲ್ಕ್: “ಅಮೆರಿಕನ್ ಸಿಂಫನಿ” – ಜಾನ್ ಬ್ಯಾಟಿಸ್ಟ್
- ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ: ಅಲೈಬುಲನ್ ii (ಮ್ಯಾಟ್ ಬಿ & ರಾಯಲ್ ಫಿಲ್ಟಾರ್ಮೋನಿಕ್ ಆರ್ಕೆಸ್ಟ್ರಾ)
- ಬೆಸ್ಟ್ ಆಫ್ರಿಕನ್ ಪರ್ಫಾಮೆನ್ಸ್: “ಲವ್ ಮಿ ಜೆಜೆ” (ಟೆಮ್ಸ್)
- ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾಮೆನ್ಸ್: “ಬೆಂಬಾ ಕಲೋರಾ'(ಶೀಲಾ ಇ. ಗ್ಲೋರಿಯಾ ಎಸ್ಟೀಫಾನ್ ಮತ್ತು ಮಿಮಿ ಸಕರ್)
- ಬೆಸ್ಟ್ ಸಾಂಗ್ ರೈಟನ್ ಫಾರ್ ವಿಷ್ಯುವಲ್ ಮೀಡಿಯಾ: “ಇಟ್ ನೆವರ್ ವೆಂಟ್ ಅವೇ (ಅಮೇರಿಕನ್ ಸಿಂಫನಿ) ಜಾನ್ ಬ್ಯಾಟಿಸ್ಟ್ & ಡಾನ್ ವಿಲ್ಸನ್, (ಗೀತರಚನೆಕಾರ – ಜಾನ್ ಬ್ಯಾಟಿಸ್ಟೆ)