ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Grammy Awards: ಭಾರತೀಯ ಮೂಲದ ಚಂದ್ರಿಕಾ ಟಂಡನ್‌ಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌; ರಿಕ್ಕಿ ಕೇಜ್‌ಗೆ ಭಾರೀ ನಿರಾಸೆ

ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ್ದ 67 ನೇ ಅತಿದೊಡ್ಡ ಗ್ರ್ಯಾಮಿ ಪ್ರಶಸ್ತಿ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ಸಂಜೆ ಲಾಸ್ ಏಂಜಲೀಸ್‌ನ ಕ್ರಿಪ್ಟೋ.ಕಾಮ್ ಅರೆನಾದಲ್ಲಿ ನಡೆಯಿತು. ಭಾರತ ಮೂಲದ ಅಮೆರಿಕ ಪ್ರಜೆ ಹಾಗೂ ಉದ್ಯಮಿ ಚಂದ್ರಿಕಾ ಟಂಡನ್(Chandrika Tandon)ಈ ಬಾರಿಯ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ(Grammy Awards) ಮುಡಿಗೇರಿಸಿಕೊಂಡಿದ್ದಾರೆ.

ಗ್ರ್ಯಾಮಿ ಅವಾರ್ಡ್‌: ರಿಕ್ಕಿ ಕೇಜ್‌ ಹಿಂದಿಕ್ಕಿದ ಚಂದ್ರಿಕಾ ಟಂಡನ್‌

Profile Rakshita Karkera Feb 3, 2025 3:21 PM

ನವದೆಹಲಿ: ಭಾರತ ಮೂಲದ ಅಮೆರಿಕ ಪ್ರಜೆ ಹಾಗೂ ಉದ್ಯಮಿ ಚಂದ್ರಿಕಾ ಟಂಡನ್(Chandrika Tandon)ಈ ಬಾರಿಯ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ(Grammy Awards) ಮುಡಿಗೇರಿಸಿಕೊಂಡಿದ್ದಾರೆ. ‘ಬೆಸ್ಟ್ ನ್ಯೂ ಏಜ್’ವಿಭಾಗದಲ್ಲಿ ಅವರ ತ್ರಿವೇಣಿ ಆಲ್ಬಂಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದ್ದು, ಆ ಮೂಲಕ ಅವರು ಭಾರತದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಅವರನ್ನು ಹಿಂದಿಕ್ಕಿದ್ದಾರೆ.



ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ್ದ 67 ನೇ ಅತಿದೊಡ್ಡ ಗ್ರ್ಯಾಮಿ ಪ್ರಶಸ್ತಿ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ಸಂಜೆ ಲಾಸ್ ಏಂಜಲೀಸ್‌ನ ಕ್ರಿಪ್ಟೋ.ಕಾಮ್ ಅರೆನಾದಲ್ಲಿ ನಡೆಯಿತು. ತ್ರಿವೇಣಿ ಆಲ್ಬಂ ಅಲ್ಲಿ ಹೆಸರಾಂತ ಕೊಳಲುವಾದಕ ವೋಟರ್ ಕೆಲ್ಲರ್‌ಮನ್ ವಾದನವೂ ಇದೆ. ಜಪಾನಿನ ಚೆಲೋವಾದಕ ಎರು ಮಾಟ್ಸುಮೊಟೊ ಅವರ ಸ್ಪರ್ಶವೂ ಇದೆ. ಹಾಗೆ ಚಂದ್ರಿಕಾ ಟಂಡನ್ ಅವರ ವೈದಿಕ ಪಠಣದ ವಿಭಿನ್ನತೆನೂ ಇದೆ. ಹಾಗಾಗಿಯೇ ಈ ಒಂದು ಆಲ್ಬಂಗೆ ತ್ರಿವೇಣಿ ಅಂತಲೇ ಹೆಸರು ಇಟ್ಟಂತೆ ಇದೆ. ಇಂತಹ ಈ ಒಂದು ವಿಶೇಷ ಆಲ್ಬಂಗೆ ಬೆಸ್ಟ್ ನ್ಯೂ ಏಜ್, ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಮ್ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ನೀಡಲಾಗಿದೆ.

ಯಾರು ಈ ಚಂದ್ರಿಕಾ ಟಂಡನ್‌?

ಚೆನ್ನೈನ ಮಧ್ಯಮ ವರ್ಗದಲ್ಲಿಯೇ ಹುಟ್ಟಿದ್ದಾರೆ. ಇಲ್ಲಿಯ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರೂ ಮನೆಯಲ್ಲಿ ಮಂತ್ರ ಪಠಣ, ವೇದ ಉಪನಿಷತ್ತುಗಳ ಪಾಠ ಇದ್ದೇ ಇರುತ್ತಿತ್ತು.
ಹೀಗಾಗಿ ನಿಧಾನವಾಗಿ ಆಕೆಗೆ ಸಂಗೀತದ ಮೇಲೆ ಆಸಕ್ತಿ ಬೆಳೆದಿದ್ದು, ಸಂಗೀತ ಕ್ಷೇತ್ರದಲ್ಲಿಯೇ ಸಾಧನೆ ಮಾಡಿದ್ದಾರೆ. ಇದೀಗ ಗ್ರ್ಯಾಮಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ತ್ರಿವೇಣಿ ಆಲ್ಬಂ, ಭಾರತದ ಪುರಾತನ ಮಂತ್ರಗಳಿಗೆ ಆಧುನಿಕ ಸಂಗೀತ ಸ್ಪರ್ಶ ಕೊಟ್ಟು ಆ ಮಂತ್ರಗಳನ್ನು ಮನಸ್ಸಿನಲ್ಲೇ ಸಂಗೀತದ ಸ್ವರಗಳ ಮೂಲಕ ಪಠಿಸುವಂಥ ವಿಭಿನ್ನ ಕೃತಿಯಾಗಿದ್ದು, ಅದರಲ್ಲಿ ನಡೆಸಿರುವ ಪ್ರಯೋಗವನ್ನು ಪರಿಗಣಿಸಿ ಫೆ. 2ರಂದು ನಡೆದ 67ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ಬೆಸ್ಟ್ ನ್ಯೂ ಏಜ್ ಮ್ಯೂಸಿಕ್, ಆ್ಯಂಬಿಯೆಂಟ್ ಅಥವಾ ಚಾಂಟ್ ಆಲ್ಬಮ್’ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ:Grammy Award: ಗ್ರಾಮಿ ಅವಾರ್ಡ್‌ ಬೆತ್ತಲಾಗಿ ಎಂಟ್ರಿ ಕೊಟ್ಟ ಮಾಡೆಲ್ ಬಿಯಾಂಕಾ ಸೆನ್ಸೋರಿ; ಏನಿದು ಕತೆ? ವಿಡಿಯೊ ವೈರಲ್‌

ಅವರ ತಂಗಿ ಇಂದ್ರಾ ನೂಯಿ ಬಹುಶಃ ಎಲ್ಲರಿಗೂ ಗೊತ್ತು. ಅವರು ಪೆಪ್ಸಿಕೋ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸುಮಾರು 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಚಂದ್ರಿಕಾ ಟಂಡನ್ ಕೂಡ ಅಮೆರಿಕದ ಪ್ರತಿಷ್ಠಿತ ಕಂಪನಿಯಾದ ಮ್ಯಾಕ್ ಕೆನ್ಸಿ ಸಂಸ್ಥೆಯ ಪಾಲುದಾರರಾಗಿದ್ದಾರೆ. ಇವರೇ ಹುಟ್ಟುಹಾಕಿರುವ ಟಂಡನ್ ಕ್ಯಾಪಿಟಲ್ ಅಸೋಸಿಯೇಟ್ಸ್ ಎಂಬ ಸಂಸ್ಥೆಯು ಹಲವಾರು ಕಂಪನಿಗಳಲ್ಲಿ ಬಂಡವಾಳ ತೊಡಗಿಸಿದೆ. ಅಲ್ಲದೆ, ಹಲವಾರು ಕಂಪನಿಗಳಿಗೆ ಫೈನಾನ್ಸ್ ಸಹಾಯ ಮಾಡಿದೆ.