ಏರ್‌ಬಿಎನ್‌ಬಿಯಿಂದ ಕಭಿ ಖು ಕಭಿ ಗಮ್ ಸಿನಿಮಾದ ರಾಯ್‌ಚಂದ್ ಮನೆಗೆ ಕಾಲಿಡುವ ಸುವರ್ಣಾವಕಾಶ ಚಿತ್ರದ 25ನೇ ವಾರ್ಷಿಕೋತ್ಸವದ ವಿಶೇಷ
ಸುಮಾರು ಎರಡು ಗಂಟೆಗಳ ಈ ಭೇಟಿಯಲ್ಲಿ ರೋಹನ್ ಶೈಲಿಯ ಟಂಗ್ ಟ್ವಿಸ್ಟರ್ ಪರೀಕ್ಷೆ, ಸಾಂಪ್ರದಾಯಿಕ ಸ್ವಾಗತ, ಮನೆಯ ಭವ್ಯ ಮೆಟ್ಟಿಲುಗಳು ಹಾಗೂ ಸ್ಟಡಿ ರೂಮ್ ವೀಕ್ಷಣೆ, ಆಡಿಯೋ ಟೂರ್, ಫ್ಯಾಷನ್ ಐಕಾನ್ ಪೂಳ ವಾರ್ಡ್ರೋಬ್ ಅನ್ವೇಷಣೆ ಹಾಗೂ ವಿಶೇಷ ಸ್ಮರಣಿಕೆ ಪಡೆಯುವ ಅವಕಾಶವಿರಲಿದೆ.
-
ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ಸಿನಿಮಾ ಕಭಿ ಖುಷಿ ಕಭಿ ಗಮ್(Kabhi Khush Kabhi Gum) ಬಿಡುಗಡೆಯಾಗಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ಏರ್‌ಬಿಎನ್‌ಬಿ ಅಭಿಮಾನಿಗಳಿಗೆ ಚಿತ್ರದ ಐತಿಹಾಸಿಕ ರಾಯ್‌ಚಂದ್ ಮನೆಗೆ ಕಾಲಿಡುವ ವಿಶೇಷ ಅವಕಾಶ ಕಲ್ಪಿಸಿದೆ. ಮುಂಬೈನಲ್ಲಿ ಮರುಸೃಷ್ಟಿಸಲಾಗಿರುವ ಈ ಭವ್ಯ ಮನೆಯ ಬಾಗಿಲು ಇದೇ ಮೊದಲ ಬಾರಿಗೆ ಅಭಿಮಾನಿಗಳಿಗಾಗಿ ತೆರೆಯುತ್ತಿದೆ. ಅಟ್ ಹೋಮ್ ವಿಥ್ ದಿ ರಾಯ್‌ಚಂದ್ಸ್ ಹೆಸರಿನ ಈ ಕಾರ್ಯಕ್ರಮ ಡಿಸೆಂಬರ್ 1 ರಿಂದ 6 ರವರೆಗೆ ನಡೆಯಲಿದೆ.
ಸುಮಾರು ಎರಡು ಗಂಟೆಗಳ ಈ ಭೇಟಿಯಲ್ಲಿ ರೋಹನ್ ಶೈಲಿಯ ಟಂಗ್ ಟ್ವಿಸ್ಟರ್ ಪರೀಕ್ಷೆ, ಸಾಂಪ್ರದಾಯಿಕ ಸ್ವಾಗತ, ಮನೆಯ ಭವ್ಯ ಮೆಟ್ಟಿಲುಗಳು ಹಾಗೂ ಸ್ಟಡಿ ರೂಮ್ ವೀಕ್ಷಣೆ, ಆಡಿಯೋ ಟೂರ್, ಫ್ಯಾಷನ್ ಐಕಾನ್ ಪೂಳ ವಾರ್ಡ್ರೋಬ್ ಅನ್ವೇಷಣೆ ಹಾಗೂ ವಿಶೇಷ ಸ್ಮರಣಿಕೆ ಪಡೆಯುವ ಅವಕಾಶವಿರಲಿದೆ. ನ.23ರ ಮಧ್ಯಾಹ್ನ 12 ಗಂಟೆಯಿಂದ ಏರ್‌ಬಿಎನ್‌ಬಿ ವೆಬ್ ಸೈಟ್ ನಲ್ಲಿ ಬುಕಿಂಗ್ ಆರಂಭವಾಗಲಿದೆ. ಪ್ರತಿ ಬುಕ್ಕಿಂಗ್ ನಲ್ಲಿ ಇಬ್ಬರಿಗೆ ಪ್ರವೇಶವಿದ್ದು, ಒಟ್ಟು 180 ಮಂದಿಗೆ ಮಾತ್ರ ಅವಕಾಶವಿದೆ.
ಇದನ್ನೂ ಓದಿ: Kannada New Movie: `ಕೌಂತೇಯ' ಚಿತ್ರದ ‘ಚಿಗುರೆಲೆಯ ತುದಿಯ’ ಸಾಂಗ್ ಔಟ್!
ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಮುಂಬೈ ಪ್ರಯಾಣ ವೆಚ್ಚವನ್ನು ಅತಿಥಿಗಳೇ ಭರಿಸಬೇಕು. ಕಾರ್ಯಕ್ರಮದಲ್ಲಿ ಕರಣ್, ಹೃತಿಕ್ ಅಥವಾ ಕರೀನಾ ಉಪಸ್ಥಿತರಿರುವುದಿಲ್ಲ. ಬುಕ್ಕಿಂಗ್ ಮಾಡು ವವರು ಸಕ್ರಿಯ ಏರ್‌ಬಿಎನ್‌ಬಿ ಪ್ರೊಫೈಲ್, ಉತ್ತಮ ವಿಮರ್ಶೆಗಳ ಇತಿಹಾಸ ಹಾಗೂ ಅಧಿಕೃತ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ.
ಈ ಕುರಿತು ನಿರ್ದೇಶಕ ಕರಣ್ ಜೋಹರ್(Karan Johar) ಮಾತನಾಡಿ, "25 ವರ್ಷಗಳ ಬಳಿಕ ಏರ್‌ಬಿಎನ್‌ಬಿ ಮೂಲಕ ರಾಯ್‌ಚಂದ್ ಮನೆ ಮತ್ತೆ ಜೀವಂತವಾಗುತ್ತಿರುವುದು ಮತ್ತು ಅಭಿಮಾನಿ ಗಳು ಆ ಪ್ರಪಂಚದಲ್ಲಿ ನಡೆದಾಡಲು ಅವಕಾಶ ಸಿಗುತ್ತಿರುವುದು ಅತ್ಯಂತ ವಿಶೇಷ" ಎಂದರು.
ನಟ ಹೃತಿಕ್ ರೋಷನ್(Hrithik Roshan), "ರೋಹನ್ ನನ್ನ ಮನಸ್ಸಿಗೆ ಹತ್ತಿರವಾದ ಪಾತ್ರ. ರಾಯ್‌ಚಂದ್ ಮನೆಯ ಮರುಸೃಷ್ಟಿ ಚಿತ್ರದ ರಜತ ಮಹೋತ್ಸವ ಆಚರಿಸಲು ಅತ್ಯುತ್ತಮ ಮಾರ್ಗ" ಎಂದರೆ, ನಟಿ ಕರೀನಾ ಕಪೂರ್ ಖಾನ್(Kareena Kapoor Khan), "ಪೂ ಪಾತ್ರದ ವಾರ್ಡ್ರೋಬ್ ಮತ್ತು ಪ್ರಪಂಚ ವನ್ನು ಅನುಭವಿಸುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.
ಪೂ ಖಂಡಿತ ಇದಕ್ಕೆ 10ಕ್ಕೆ 10 ಅಂಕ ನೀಡುತ್ತಿದ್ದಳು" ಎಂದು ಸಂತಸ ಹಂಚಿಕೊಂಡರು. ಏರ್‌ಬಿಎನ್‌ಬಿ ಇಂಡಿಯಾ ಮತ್ತು ಆಗ್ನೇಯ ಏಷ್ಯಾದ ಕಂಟ್ರಿ ಹೆಡ್ ಅಮನ್‌ಪ್ರೀತ್ ಸಿಂಗ್ ಬಜಾಜ್, "ರಾಯ್‌ಚಂದ್ ಮನೆಯ ಮ್ಯಾಜಿಕ್ ಅನ್ನು ನೈಜ ಜಗತ್ತಿಗೆ ತಂದು, ಅಭಿಮಾನಿಗಳಿಗೆ ಹೊಸ ನೆನಪು ಗಳನ್ನು ಸೃಷ್ಟಿಸಲು ಈ ಮೂಲಕ ಅವಕಾಶ ನೀಡುತ್ತಿದ್ದೇವೆ" ಎಂದರು.