AadiLakshmi Puraana Serial: ಆದಿಲಕ್ಷ್ಮೀ ಪುರಾಣ ಇನ್ನು 3 ದಿನಗಳಲ್ಲಿ; ಬದಲಾದ ಸಮಯದಲ್ಲಿ ಈ ಸೀರಿಯಲ್!
(Zee Kannada: ಜೀ ಕನ್ನಡ ವರ್ಷದ ) ಕೊನೆಗೆ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡುತ್ತಿದೆ. ಕಿರುತೆರೆಯಲ್ಲಿ ಸದ್ದು ಮಾಡಲು ಸಿದ್ದವಾಗಿರುವ 'ಆದಿಲಕ್ಷ್ಮೀ ಪುರಾಣ' ( AadiLakshmi Puraana) ಸಂಪ್ರದಾಯ ಮತ್ತು ಆಧುನಿಕತೆಯ ಮಧ್ಯೆ ನಿರ್ಮಾಣವಾದ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ.
ಆದಿಲಕ್ಷ್ಮೀ ಪುರಾಣ ಧಾರಾವಾಹಿ -
ಜೀ ಕನ್ನಡ ವರ್ಷದ (Zee Kannada) ಕೊನೆಗೆ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡುತ್ತಿದೆ. ಕಿರುತೆರೆಯಲ್ಲಿ ಸದ್ದು ಮಾಡಲು ಸಿದ್ದವಾಗಿರುವ 'ಆದಿಲಕ್ಷ್ಮೀ ಪುರಾಣ' ( AadiLakshmi Puraana) ಸಂಪ್ರದಾಯ ಮತ್ತು ಆಧುನಿಕತೆಯ ಮಧ್ಯೆ ನಿರ್ಮಾಣವಾದ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ.
ಮೊದಲ ಭೇಟಿಯಲ್ಲೇ ಆದಿಯಿಂದ ತಿರಸ್ಕರಿಸಲ್ಪಟ್ಟ ಲಕ್ಷ್ಮಿ ಪುನಃ ಆತನ ಜಗತ್ತಿಗೆ ಮರಳಿ ಬರುತ್ತಾಳೆ. ಆದಿಯ ಪ್ರೀತಿ ಪಡೆಯಲು ಪರದಾಡುವ ಲಕ್ಷ್ಮಿ ಆತನ ತಾತ ಧರ್ಮರಾಜ್ ಅವರು ನೀಡುವ ಕಠಿಣ ಸವಾಲುಗಳನ್ನು ಎದುರಿಸುತ್ತಾಳೆ. ಮನೆ, ಕಾಲೇಜು ಇವೆರಡರನ್ನು ಲಕ್ಷ್ಮಿ ಹೇಗೆ ಸರಿದೂಗಿಸಿಕೊಂಡು ಹೋಗುತ್ತಾಳೆ ಎಂಬುದು ಈ ಕಥೆಯ ಮುಖ್ಯ ಸಾರಾಂಶ.
ಅದ್ಭುತವಾದ ತಾರಾಬಳಗ
ಈ ಧಾರಾವಾಹಿಯ ಕಥೆಯನ್ನು ಮತ್ತಷ್ಟು ಜೀವಂತಗೊಳಿಸೋದು ಅದ್ಭುತವಾದ ತಾರಾಬಳಗ. ರಜನೀಶ್ ಮತ್ತು ಆಶಾ ಅಯ್ನರ್ ಆದಿ ಮತ್ತು ಲಕ್ಷ್ಮಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಧಾರಾವಾಹಿಯಲ್ಲಿ ಸಂಜೀವ ಅನ್ನುವ ಒಬ್ಬ ಸಾಧಾರಣ ಹಳ್ಳಿ ಟೀಚರ್ ಮತ್ತು ಅಮೃತ, ಸಿಟಿ ಹುಡುಗಿ PHD ಆಕಾಂಕ್ಷಿ, ಇವರಿಬ್ಬರು ಮದುವೆ ಆದ್ಮೇಲೆ ಇವರಿಬ್ಬರ ಬದುಕು ಹೇಗೆ ಬದಲಾಗುತ್ತೆ ಅನ್ನೋ ಕಥೆಯು ಕಾಣಸಿಗಲಿದೆ.
ಇನ್ನು ಈ ಧಾರಾವಾಹಿಯಲ್ಲಿ ಮಂಜುನಾಥ ಹೆಗ್ಡೆ, ಅಶೋಕ್ ಶರ್ಮಾ, ರಕ್ಷಿತಾ, ಸುಷ್ಮಾ ನಾಣಯ್ಯ, ಮಾಲತಿ ಸರ್ದೇಶಪಾಂಡೆ, ಕೈಲಾಶ್, ಜ್ಯೋತಿ, ಸವಿತಾ ಕೃಷ್ಣಮೂರ್ತಿ ಮತ್ತು ಭಾಗ್ಯಶ್ರೀ ರಾವ್ ಅಂತಹ ಹೆಸರಾಂತ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಅದ್ಬುತ ನಟನೆ, ಅತ್ಯುತ್ತಮ ತಾರಾಬಳಗ, ವಿಭಿನ್ನ ಕಥೆಯೇ ಆದಿಲಕ್ಷ್ಮಿ ಪುರಾಣದ ಪ್ಲಸ್ ಪಾಯಿಂಟ್.
ಪ್ರಸಾರ ಯಾವಾಗ?
'ಆದಿಲಕ್ಷ್ಮಿ ಪುರಾಣ' ಕೇವಲ ಸಾಧಾರಣ ಕಥೆಯಾಗಿರದೆ, ನಿಜ ಜೀವನಕ್ಕೆ ಹತ್ತಿರವಾಗಿದ್ದು ಬಹಳ ವಿಭಿನ್ನವಾಗಿದೆ. ಈ ಧಾರಾವಾಹಿಯ ಕಥೆಯ ನೈಜ್ಯತೆ, ಉತ್ತಮ ತಾರಾಬಳಗ ಮತ್ತು ನಿರ್ದೇಶನ, ಅದ್ಭುತ ಸ್ಥಳಗಳು, ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಸೆಟ್‌ಗಳು ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವೀ ಆಗಲಿದೆ. ಅಷ್ಟೇ ಅಲ್ಲದೇ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುವವರು ಒಂದಾದರೆ ಏನಾಗಲಿದೆ ಎಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.
ಇನ್ನು ಇಷ್ಟು ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿದ್ದ ಜನಪ್ರಿಯ ಧಾರಾವಾಹಿ ಶ್ರೀ ರಾಘವೇಂದ್ರ ಮಹಾತ್ಮೆ ಈ ವಾರದಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಬಜೆ 6 ಗಂಟೆಯಿಂದ 7 ಗಂಟೆಯ ವರೆಗೆ ಪ್ರಸಾರ ಆಗಲಿದೆ.
ಇದನ್ನೂ ಓದಿ: Kannada Serial TRP: ಟಿಆರ್ಪಿಯಲ್ಲಿ ಝೀ ಕನ್ನಡ ಧಾರಾವಾಹಿಯದ್ದೇ ಹವಾ: ನಂಬರ್ 1 ಧಾರಾವಾಹಿ ಇದೇ ನೋಡಿ
ವೀಕ್ಷಿಸಿ ‘ಆದಿ ಲಕ್ಷ್ಮೀ ಪುರಾಣ’ ಇದೇ ಡಿಸೆಂಬರ್ 8 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:00 ಗಂಟೆಗೆ ಮತ್ತು ‘ಶ್ರೀ ರಾಘವೇಂದ್ರ ಮಹಾತ್ಮೆ’ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6:00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ.