Aakhri Sawal Trailer: ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ! ಆರ್ಎಸ್ಎಸ್ ಕುರಿತ ‘ಆಖ್ರಿ ಸವಾಲ್’ ಟ್ರೈಲರ್ ಔಟ್
Aakhri Sawal Trailer: ಈ ಚಿತ್ರವು ಭಾರತೀಯ ಸೈನ್ ಲ್ಯಾಂಗ್ವೇಜ್ ಅಥವಾ ಸಂಕೇತ ಭಾಷೆಯಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶಿಸಿದ ಈ ಚಿತ್ರವು 2026 ರ ಅತ್ಯಂತ ಚರ್ಚೆಯ ಸಿನಿಮಾ ಆಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತ ಕಥೆ ಇದೆ. ಇದೀಗ ಟ್ರೇಲರ್ ಬಿಡುಗಡೆಯಾಗಿದೆ.
ಆಖ್ರಿ ಸವಾಲ್ ಟ್ರೈಲರ್ -
ಸಂಜಯ್ ದತ್ ( Sanjay Dutt) ಅಭಿನಯದ ಆಖ್ರಿ ಸವಾಲ್ (Aakhri Sawal Trailer) ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶಿಸಿದ ಈ ಚಿತ್ರವು 2026 ರ ಅತ್ಯಂತ ಚರ್ಚೆಯ ಸಿನಿಮಾ ಆಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತ ಕಥೆ ಇದೆ.
ಟ್ರೇಲರ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಭಾರತದಲ್ಲಿನ ತುರ್ತು ಪರಿಸ್ಥಿತಿ ಘೋಷಣೆಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ತೋರಿಸಲಾಗಿದೆ. "ಪ್ರತಿಯೊಂದು ಪ್ರಶ್ನೆಗೆ ನಾನು ಅಂತಿಮ ಉತ್ತರವನ್ನು ನೀಡುತ್ತೇನೆ" ಎಂದು ಹೇಳುವ ಡೈಲಾಗ್ ಹೈಲೈಟ್ ಆಗಿದೆ. ಅವರಲ್ಲದೆ, ಸಮೀರಾ ರೆಡ್ಡಿ ಮತ್ತು ಅಮಿತ್ ಸಾಧ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಬಾಲಿವುಡ್‌ಗೆ ಒಂದು ಹೊಸತನದ ಸಿನಿಮಾ ಬಂದಂತಿದೆ ಎಂದು ಟ್ರೈಲರ್ ನೋಡಿದ ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Actor Yash: ಭಾರತದ ಜನಪ್ರಿಯ ಬಿಜಿಎಂಐ ಗೇಮಿನಲ್ಲಿ ರಾಕಿಂಗ್ ಸ್ಟಾರ್ ಯಶ್!
ರಿಲೀಸ್ ಯಾವಾಗ?
ಅಮಿತ್ ಸಾಧ್, ನಮಾಶಿ ಚಕ್ರವರ್ತಿ ಮತ್ತು ನೀತು ಚಂದ್ರ ಸೇರಿದಂತೆ ಅನೇಕರು ನಟಿಸಿದ್ದಾರೆ. "ಆಖ್ರಿ ಸವಾಲ್" ಮೊದಲು ಮೇ 8 ರಂದು ಬಿಡುಗಡೆಯಾಗಬೇಕಿತ್ತು, ಆದರೆ ನಂತರ ಮುಂದೂಡಲ್ಪಟ್ಟಿತು. ಈಗ, ಚಿತ್ರವು ಒಂದು ವಾರದ ನಂತರ ಮೇ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರವು ಭಾರತೀಯ ಸೈನ್ ಲ್ಯಾಂಗ್ವೇಜ್ ಅಥವಾ ಸಂಕೇತ ಭಾಷೆಯಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರರಂಗದಲ್ಲಿ ಇದು ಹೊಸ ಪ್ರಯತ್ನ. ಸಾಮಾನ್ಯವಾಗಿ ಸಿನಿಮಾಗಳು ಎಲ್ಲರಿಗೂ ಲಭ್ಯವಿರುತ್ತವೆ. ಆದರೆ ಶ್ರವಣ ದೋಷವಿರುವವರಿಗೆ ಸಿನಿಮಾ ಅನುಭವ ಅಷ್ಟು ಸುಲಭವಲ್ಲ. ಈ ಕೊರತೆಯನ್ನು ನೀಗಿಸಲು ‘ಆಖ್ರಿ ಸವಾಲ್’ ತಂಡ ಮುಂದಾಗಿದೆ. ಉತ್ಕರ್ಷ್ ನೈತಾನಿ ಅವರು ಈ ಸಿನಿಮಾಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
ನಟ ಸಂಜಯ್ ದತ್ "ರಾಜ ಶಿವಾಜಿ" ಸಿನಿಮಾದಲ್ಲಿ ನಟಿಸಿದ್ದು ಸದ್ಯ ಸುದ್ದಿಯಲ್ಲಿದ್ದಾರೆ. ರಿತೇಶ್ ದೇಶ್ಮುಖ್ ಅವರ ಈ ಚಿತ್ರದಲ್ಲಿ, ಸಂಜು ಬಾಬಾ ಅಫ್ಜಲ್ ಖಾನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: Aase Serial: ರೋಹಿಣಿ ಪಾತ್ರಕ್ಕೆ ನಟಿ ಅಭಿಜ್ಞಾ ಭಟ್ ತಯಾರಾಗಿದ್ದು ಹೇಗೆ? ಭಾವುಕ ಪೋಸ್ಟ್ ವೈರಲ್
ಸಂಜಯ್ ದತ್ ಪ್ರಸ್ತುತ ಮತ್ತೊಂದು ಪ್ರಮುಖ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಚಿತ್ರ "ಖಲ್ನಾಯಕ್ ರಿಟರ್ನ್ಸ್", ಇದು 1993 ರ ಚಿತ್ರ "ಖಲ್ನಾಯಕ್" ನ ಮುಂದುವರಿದ ಭಾಗವಾಗಿದೆ. ಮತ್ತೊಮ್ಮೆ, ಸಂಜಯ್ ದತ್ ಬಲ್ಲು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಇತ್ತೀಚೆಗೆ ಘೋಷಿಸಲಾಯಿತು. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.