Aamir Khan: ಗೆಳತಿ ಗೌರಿ ಕೈ ಹಿಡಿದು ಫೋಟೊಗೆ ಪೋಸ್ ಕೊಟ್ಟ ನಟ ಆಮೀರ್ ಖಾನ್!
ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಚೀನಾದಲ್ಲಿ ನಡೆದ ಅಂತರರಾಷ್ಟ್ರೀಯ ಹಾಸ್ಯ ಉತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಈ ಜೋಡಿ ಕೈ ಹಿಡಿದುಕೊಂಡೇ ಫೋಟೋ ಗೆ ಫೋಸ್ ಕೊಟ್ಟಿದ್ದಾರೆ. ಚೀನಾದ ಪಾಪರಾಜಿಗಳು ಈ ಜೋಡಿಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆಮೀರ್ ಖಾನ್ ಕಪ್ಪು ಕುರ್ತಾ, ಬಿಳಿ ಪೈಜಾಮಾದಲ್ಲಿ ಕಾಣಿಸಿಕೊಂಡರೆ ಗೌರಿ ಫ್ಲವರ್ ಪ್ರಿಂಟೆಡ್ ಸೀರೆಯನ್ನು ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ


ನವದೆಹಲಿ: ಬಾಲಿವುಡ್ ಜನಪ್ರಿಯ ನಟ ಆಮೀರ್ ಖಾನ್ (Aamir Khan) ತನ್ನ ಕರಿಯರ್‌ನಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಫೇಮ್ ಗಿಟ್ಟಿಸಿಕೊಂಡವರು. ನಟ ಆಮೀರ್ ಖಾನ್ ಕೇವಲ ವೃತ್ತಿಪರ ವಿಚಾರ ಮಾತ್ರವಲ್ಲದೇ ವೈಯಕ್ತಿಕ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಆಮೀರ್ ಖಾನ್ ಚೀನಾದ ಕಾರ್ಯವೊಂದರಲ್ಲಿ ತನ್ನ ಹೊಸ ಗೆಳತಿ ಗೌರಿ ಸ್ಪ್ರಾಟ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಒಟ್ಟಿಗೆ ಕಾರ್ಯಕ್ರಮ ವೊಂದಕ್ಕೆ ಆಗಮಿಸುತ್ತಿರುವ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Video)ಆಗಿದ್ದು ಅಭಿಮಾನಿಗಳು ಈ ಜೋಡಿ ಬಗ್ಗೆ ಮತ್ತಷ್ಟು ಉತ್ಸುಕರಾಗಿದ್ದಾರೆ.
ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಚೀನಾದಲ್ಲಿ ನಡೆದ ಅಂತರರಾಷ್ಟ್ರೀಯ ಹಾಸ್ಯ ಉತ್ಸವದಲ್ಲಿ ಭಾಗವಹಿಸಿದ್ದರು.ಈ ಸಂದರ್ಭ ಈ ಜೋಡಿ ಸದಾ ಕೈ ಹಿಡಿದುಕೊಂಡೇ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಚೀನಾದ ಪಾಪರಾಜಿಗಳು ಈ ಜೋಡಿಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇಬ್ಬರೂ ಸ್ಥಳದಲ್ಲಿದ್ದ ಪಾಪರಾಜಿಗಳನ್ನು ನೋಡಿ ಮುಗುಳ್ನಕ್ಕಿದ್ದಾರೆ. ಅಮೀರ್ ಕಪ್ಪು ಕುರ್ತಾ, ಬಿಳಿ ಪೈಜಾಮಾದಲ್ಲಿ ಕಾಣಿಸಿಕೊಂಡರೆ ಗೌರಿ ಫ್ಲವರ್ ಪ್ರಿಂಟೆಡ್ ಸೀರೆಯನ್ನು ಧರಿಸಿ ಕ್ಯೂಟ್ ಆಗಿ ಕಾಣಿಸಿ ಕೊಂಡಿದ್ದಾರೆ.
AamirKhan in Macao just now!!!#aamirkhan pic.twitter.com/iAa7A2nNL5
— 𝓙𝓾𝓵𝓵𝓮𝓸𝓿𝓸 (@ITSS_ALLGOODMAN) April 12, 2025
ಇದನ್ನು ಓದಿ: Green Movie: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಚಿತ್ರ ಸದ್ಯದಲ್ಲೇ ತೆರೆಗೆ
ಚೀನಿ ನಟರಾದ ಶೆನ್ ಟೆಂಗ್ ಮತ್ತು ಮಾಲಿ ಕೂಡ ಇವರ ಜೊತೆ ಕಾಣಿಸಿಕೊಂಡಿದ್ದು ಒಟ್ಟಿಗೆ ಫೋಟೋ ಗೆ ಪೋಸ್ ನೀಡಿ ದ್ದಾರೆ. ಇದೀಗ ಈ ಜೋಡಿಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಕೆಲವು ಅಭಿಮಾನಿಗಳು ಆಮೀರ್ ಖಾನ್ ಮತ್ತು ಗೌರಿ ಜೋಡಿಯನ್ನು ಇಷ್ಟಪಟ್ಟರೆ ಇನ್ನು ಕೆಲವರು ಈ ಜೋಡಿಯನ್ನು ಟ್ರೋಲ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ನಟನಿಗೆ ವಯಸ್ಸಾಗಿದೆ ಆದರೆ ನಡವಳಿಕೆಯಲ್ಲಿ ಏನು ಬದಲಾವಣೆ ಇಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟ ಅಮೀರ್ ಖಾನ್ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ. ಇನ್ನು ತನ್ನ 60ನೇ ಹುಟ್ಟುಹಬ್ಬದ ಸಮಯದಲ್ಲಿ ತನ್ನ ಗೆಳತಿ ಗೌರಿ ಸ್ಪ್ರಾಟ್ ಜೊತೆಗಿನ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆಮೀರ್ ಖಾನ್ ಅವರ ಹೊಸ ಗೆಳತಿ ಗೌರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದು ಅವರು ಕೂಡ ಒಂದು ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಈ ಜೋಡಿಯ ವಿಡಿಯೊವಂತೂ ಬಹಳಷ್ಟು ವೈರಲ್ ಆಗುತ್ತಿದೆ.