ಸ್ಟಾರ್ ಸುವರ್ಣ ವಾಹಿನಿಯಲ್ಲಿ (Star Suvarna Serial) ಪ್ರಸಾರವಾಗುತ್ತಿದ್ದ `ಆಸೆ' ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ (amrutha ramamurthy) ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಆಸೆ ಧಾರಾವಾಹಿಯಲ್ಲಿ ರೋಹಿಣಿ ಪಾತ್ರ ಸಿಕ್ಕಾಪಟ್ಟೆ ಹೆಸರು ಮಾಡಿದೆ. ಕುಲವಧು, ಕಸ್ತೂರಿ ನಿವಾಸ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ ನಟಿ ಅಮೃತಾ ರಾಮಮೂರ್ತಿ ಈಗ ಈ ಧಾರಾವಾಹಿಯಿಂದ (Serial) ದಿಢೀರ್ ಹೊರಬಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಕಾರಣವನ್ನೂ ನಟಿ ವಿಡಿಯೋ ಮೂಲಕ ತಿಳಿಸಿದ್ದಾರೆ.
ಅಮೃತಾ ಅವರಿಗೆ ಅವರದ್ದೇ ಆದ ಅಭಿಮಾನಿಗಳೂ ಇದ್ದಾರೆ. ಸೀರಿಯಲ್ ಜೊತೆ ನಟಿ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಅದರಲ್ಲಿ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಸೀರಿಯಲ್ ಬಿಟ್ಟ ಕಾರಣವನ್ನು ತಿಳಿಸಿದ್ದಾರೆ.
ಇದನ್ನೂ ಓದಿ: Shree Gandhada gudi: ‘ಶ್ರೀ ಗಂಧದಗುಡಿ’ ಧಾರಾವಾಹಿಗೆ ಎಂಟ್ರಿ ಕೊಟ್ಟೇ ಬಿಟ್ರು ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ!
ʻಆಸೆ ಧಾರಾವಾಹಿಗೆ ನೀವು ತುಂಬ ಪ್ರೀತಿ ಕೊಟ್ಟಿದ್ದೀರಿ. ಕಾರಣಾಂತರಗಳಿಂದ ಆಸೆ ಸೀರಿಯಲ್ ಬಿಟ್ಟಿದ್ದೀನಿ. ಒಂದು ಬ್ರೇಕ್ ತಗೊಂಡು ನಾನು ತೆರೆ ಮೇಲೆ ಕಾಣಿಸಿಕೊಳ್ತೀನಿ. ನೀವೆಲ್ಲರೂ ಆಸೆ ಸೀರಿಯಲ್ ಮೇಲೆ ತುಂಬಾ ಪ್ರೀತಿ ತೋರಿಸಿದ್ದೀರಿ. ಹಾಗೇ ನನ್ನ ಮೇಲೂ ತುಂಬಾ ಪ್ರೀತಿ ತೋರಿಸಿದ್ದೀರ, ಈ ಪ್ರೀತಿ ಸದಾ ಹೀಗೇ ಇರಲಿ. ನಾನು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತೀನಿ. ನನಗೆ ಇಷ್ಟೆಲ್ಲ ಸಪೋರ್ಟ್ ಮಾಡಿದ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು' ಎಂದು ಅಮೃತಾ ವಿಡಿಯೋದಲ್ಲಿ ತಿಳಿಸಿದ್ದಾರೆ.
ನಟ ನಿನಾದ್ ಹರಿತ್ಸ, ಪ್ರಿಯಾಂಕಾ ಡಿ ಎಸ್, ಮಂಡ್ಯ ರಮೇಶ್, ಇಂಚರಾ ಜೋಶಿ, ಸ್ನೇಹಾ ಈಶ್ವರ್ ಅವರು ನಟಿಸುತ್ತಿದ್ದಾರೆ. ನಟ ರಮೇಶ್ ಅರವಿಂದ್ ಅವರು ಈ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: Kannada Serial TRP: ಪಾತಾಳಕ್ಕೆ ಕುಸಿದ ಸೀತಾ ರಾಮ ಧಾರಾವಾಹಿ ಟಿಆರ್ಪಿ: ನಂಬರ್ 1 ಧಾರಾವಾಹಿ ಯಾವುದು?
ಶಾಂತಿ ಮಗ ಮನೋಜ್ ದುವೆಯಾಗಿರೋ ರೋಹಿಣಿಗೆ ಮೊದಲೇ ಮದುವೆಯಾಗಿ, ಮಗ ಕೂಡ ಇರುತ್ತಾನೆ. ಆದರೆ ರೋಹಿಣಿ ಮಾತ್ರ ಈ ಸತ್ಯ ಮುಚ್ಚಿಟ್ಟಿರುತ್ತಾಳೆ.ಅತ್ತೆ ಬಳಿ ತಾನು ಶ್ರೀಮಂತೆ, ತನ್ನ ತಂದೆ ವಿದೇಶದಲ್ಲಿದ್ದಾರೆ ಎಂದು ಹೇಳುತ್ತಿದ್ದ ರೋಹಿಣಿ ಒಮ್ಮೆ ಸಿಕ್ಕಿಹಾಕಿಕೊಂಡಳು. ಆಮೇಲೆ ಅತ್ತೆ ಅವಳಿಗೆ ಕಾಟ ಕೊಡಲು ಆರಂಭಿಸಿದ್ದಾಳೆ. ಇದು ಈ ಪಾತ್ರದ ಕಥೆ.