ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ದರ್ಶನ್ 'ಡೆವಿಲ್' ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌! ಫ್ಯಾನ್ಸ್‌ ದಿಲ್‌ ಖುಷ್‌

Darshan: ದರ್ಶನ್‌ ಇನ್‌ಸ್ಟಾ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ದರ್ಶನ್ ತಮ್ಮ ಸೂಪರ್​ ಹಿಟ್ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ.

ನಟ ದರ್ಶನ್‌

ನಟ ದರ್ಶನ್ (Actor Darshan) ಅಭಿನಯದ ಹೈ ವೋಲ್ಟೇಜ್ ಸಿನಿಮಾ ದಿ ಡೆವಿಲ್ (The Devil Release Date) ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಇದೆ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗ್ತಿದೆ. ಕಾಯುವಿಕೆ ಬಹುತೇಕ ಅಂತ್ಯವಾಗಿದೆ. ಟ್ರೈಲರ್ (Trailer) ರಿಲೀಸ್‌ ಯಾವಗ ಅಂತ ಅನೌನ್ಸ್‌ ಕೂಡ ಆಗೇ ಹೋಗಿದೆ. ನಾನು ಬರ್ತೀನಿ ಚಿನ್ನ ಅಂತ ದರ್ಶನ್‌ ವಾಯ್ಸ್‌ ಕೇಳಿ ಫ್ಯಾನ ಅಂತೂ ದಿಲ್‌ ಖುಷ್‌ ಆಗಿದ್ದಾರೆ. ಹಾಗಾದ್ರೆ ಟ್ರೈಲರ್‌ ರಿಲೀಸ್‌ ಯಾವಾಗ?

ಟ್ರೈಲರ್ ಘೋಷಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಎಕ್ಸ್ ಖಾತೆಯಿಂದ 'ದಿ ಡೆವಿಲ್' ಚಿತ್ರದ ಟ್ರೈಲರ್ ಘೋಷಣೆ ಆಗಿದೆ. ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ‘ದಿ ಡೆವಿಲ್ ಟ್ರೈಲರ್ ರಿಲೀಸ್‌ ಆಗುತ್ತಿದೆ. ಡಿಸೆಂಬರ್ 11 ರಂದು ಸಿನಿಮಾ ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ.

ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್‌ ಮನೆಯಿಂದ ಜಾಹ್ನವಿ ಔಟ್! ಕಣ್ಣೀರಿಟ್ಟ ಅಶ್ವಿನಿ ಗೌಡ

ಸ್ವತಃ ದರ್ಶನ್‌ ಇನ್‌ಸ್ಟಾ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ದರ್ಶನ್ ತಮ್ಮ ಸೂಪರ್​ ಹಿಟ್ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ. ಹೀಗಿರುವಾಗ ದರ್ಶನ್‌ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.

ದರ್ಶನ್‌ ಪೋಸ್ಟ್‌



ಪ್ರಚಾರ ಹೊಣೆ ಹೊತ್ತುಕೊಂಡ ಪತ್ನಿ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್‌ ಮಾಡಲಾಗುತ್ತಿದೆ. ಹಾಗಾಗಿ, ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡು ಈಗಾಗಲೇ ದರ್ಶನ್‌ ಅವರ ಅಭಿಮಾನಿಗಳ ಜೊತೆಗೆ ಸಭೆ ಮಾಡಿದ್ದಾರೆ. "ನನ್ನ ಅಭಿಮಾನಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ.. ನನ್ನ ಉಳಿದ ಸಿನಿಮಾಗಳಿಗೆ ಅಪಾರ ಪ್ರೀತಿ ನೀಡಿದ್ದೀರಿ. ಆದರೆ, ಡೆವಿಲ್‌ಗೆ ಹೆಚ್ಚು ಪ್ರೀತಿ ಕೊಡಿ ಅಂತ ಅಭಿಮಾನಿಗಳಲ್ಲಿ ದರ್ಶನ್‌ ಕೇಳಿಕೊಂಡಿದ್ದಾರೆ" ಎಂದು ವಿಜಯಲಕ್ಷ್ಮಿ ಹೇಳಿದ್ದರು.‌

ಇದನ್ನೂ ಓದಿ: Bigg Boss Kannada 12: ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ ಧ್ರುವಂತ್‌

ದರ್ಶನ್‌ ತೂಗುದೀಪ ಅವರಿಗೆ ನಾಯಕಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದು, ಮಹೇಶ್‌ ಮಾಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶೋಭರಾಜ್‌, ಗಿಲ್ಲಿ ನಟ, ಹುಲಿ ಕಾರ್ತಿಕ್‌, ಶರ್ಮಿಳಾ ಮಾಂಡ್ರೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಅವರು ಈ ಸಿನಿಮಾಕ್ಕೆ‌ ಸಂಗೀತ ನಿರ್ದೇಶನ ಇದೆ.

Yashaswi Devadiga

View all posts by this author