ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Dhruva Sarja: ಪುಟಾಣಿ ಬಾಲಕನ ನೆರವಿಗೆ ಧಾವಿಸಿದ ಧ್ರುವ ಸರ್ಜಾ; ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವು

ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದ ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಇದೀಗ ಪುಟ್ಟ ಮಗುವಿನ ಬಾಳಿಗೆ ಬೆಳಕಾಗಿದ್ದಾರೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ಸಹಾಯಹಸ್ತ ಚಾಚುವ ಮೂಲಕ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ತಾವೊಬ್ಬ ಹೀರೋ ಎನಿಸಿಕೊಂಡಿದ್ದಾರೆ.

ಪುಟಾಣಿ ಬಾಲಕನ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವು ನೀಡಿದ ಧ್ರುವ ಸರ್ಜಾ

Profile Ramesh B Apr 1, 2025 5:14 PM

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಲವು ಸ್ಟಾರ್‌ಗಳು ಸಿನಿಮಾಗಳಲ್ಲಿ ನಟಿಸುವುದಷ್ಟೇ ಅಲ್ಲದೆ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಾರೆ. ಇದೇ ಸಾಲಿಗೆ ಆ್ಯಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಕೂಡ ಸೇರುತ್ತಾರೆ. ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದ ಧ್ರುವ ಸರ್ಜಾ ಇದೀಗ ಪುಟ್ಟ ಮಗುವಿನ ಬಾಳಿಗೆ ಬೆಳಕಾಗಿದ್ದಾರೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ಸಹಾಯಹಸ್ತ ಚಾಚುವ ಮೂಲಕ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ತಾವೊಬ್ಬ ಹೀರೋ ಎನಿಸಿಕೊಂಡಿದ್ದಾರೆ.

ಕಣ್ಣಿನಲ್ಲಿ ಪೊರೆ ಬೆಳೆದು ಸಂಕಷ್ಟಕ್ಕೀಡಾಗಿದ್ದ ಗಾರೆ ಕೆಲಸ ಮಾಡುವವರೊಬ್ಬರ ಮಗನ ಶಸ್ತ್ರಚಿಕಿತ್ಸೆಗೆ ಧ್ರುವ ಸರ್ಜಾ ನೆರವಾಗಿದ್ದಾರೆ.



ಗಾರೆ ಕೆಲಸ ಮಾಡುವ ತಂದೆಯ ಮಗುವಿನ ಸಹಾಯಕ್ಕೆ ಧ್ರುವ ಸರ್ಜಾ ಧಾವಿಸಿದ್ದಾರೆ. ಕಣ್ಣಿನಲ್ಲಿ ಪೊರೆ ಬೆಳೆದ ಬಾಲಕನ ಟ್ರೀಟ್‌ಮೆಂಟ್‌ಗೆ ಸಹಕರಿಸಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಪುಟ್ಟ ಬಾಲಕ ಖುಷಿಯಿಂದ ಓಡಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Kichcha Sudeepa: ಮುದ್ದು ಮಗುವಿನ ಚಿಕಿತ್ಸೆಗೆ ಸುದೀಪ್‌ ಸಹಾಯಹಸ್ತ; ನೆರವು ನೀಡಲು ಅಭಿಮಾನಿಗಳಲ್ಲೂ ಮನವಿ

ಬಾಲಕನ ತಂದೆ ಹೇಳಿದ್ದೇನು?

ಈ ಬಗ್ಗೆ ಬಾಲಕನ ತಂದೆ ಮಾತನಾಡಿದ್ದು, ʼʼನಾನು ಗಾರೆ ಕೆಲಸ ಮಾಡುವವನು. ನನ್ನ ಮಗ ಚಿರಂಜೀವಿಯ ಕಣ್ಣಿನಲ್ಲಿ ಪೊರೆ ಬೆಳೆದಿದೆ ಎಂದು ಧ್ರುವ ಅಣ್ಣನ ಬಳಿ ಹೇಳಿದೆ. ಈ ಆಸ್ಪತ್ರೆಗೆ ಹೋಗು. ಸರಿ ಮಾಡ್ತಾರೆ ಎಂದು ಹೇಳಿ ಕಳುಹಿಸಿದರು. ಇವತ್ತು ಧ್ರುವ ಅಣ್ಣನ ದೆಸೆಯಿಂದ ನನ್ನ ಮಗ ಪ್ರಪಂಚವನ್ನು ನೋಡ್ತಾ ಇದ್ದಾನೆ. ನಿಮ್ಮ ಈ ಸಹಾಯಕ್ಕೆ ನಾನು ಸಾಯುವವರೆಗೂ ಚಿರಋಣಿ ಆಗಿರುತ್ತೇನೆ. ಇದರ ಬಗ್ಗೆ ನಾನು ಹೊರಗೆ ಹೇಳಿದರೆ ನೀವು ಬೈಯ್ಯುತ್ತೀರಿ ಅಂತ ಗೊತ್ತಿದೆ. ಆದರೂ ನಾನು ಇದನ್ನು ಎಲ್ಲರಿಗೂ ಹೇಳಬೇಕು" ಎಂದು ಧನ್ಯವಾದ ಅರ್ಪಿಸಿದ್ದಾರೆ.

ವೈದ್ಯರ ಮಾತು

ʼʼಈ ಮಗವನ್ನು ಧ್ರುವ ಸರ್ಜಾ ರೆಫರ್ ಮಾಡಿದರು. ನಾವು ನೋಡಿದಾಗ ಮಗುವಿನ ಎರಡೂ ಕಣ್ಣುಗಳಿಗೆ ಪೊರೆ ಬಂದಿತ್ತು. ನಾವೀಗ ಎರಡೂ ಕಣ್ಣುಗಳಿಗು ಯಶಸ್ವಿಯಾಗಿ ಆಪರೇಷನ್ ಮಾಡಿದ್ದೇವೆ. ಧ್ರುವ ಎಲ್ಲೂ ತಮ್ಮ ಹೆಸರು ಹೇಳಬೇಡಿ ಎಂದಿದ್ದರು. ಅವರು ಮಾಡಿರುವುದು ಉತ್ತಮ ಕೆಲಸ. ಅವರಿಗೆ ಇನ್ನಷ್ಟು ಒಳ್ಳೆಯದಾಗಲಿ. ಇಂತಹ ಸಾಮಾಜಿಕ ಕೆಲಸಗಳನ್ನು ಇನ್ನೂ ಹೆಚ್ಚು ಮಾಡುವುದಕ್ಕೆ ದೇವರು ಅವರಿಗೆ ಇನ್ನಷ್ಟು ಶಕ್ತಿ ನೀಡಲಿ" ಎಂದು ಮಂಜುನಾಥ ಕಣ್ಣಿನ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಸದ್ಯ ಅವರು ಮಾಡಿರುವ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫ್ಯಾನ್ಸ್‌ ಅವರ ನೆರವನ್ನು ಕೊಂಡಾಡುತ್ತಿದ್ದಾರೆ.

ಕಂಬ್ಯಾಕ್‌ ಮಾಡಲು ಧ್ರುವ ರೆಡಿ

ಕಳೆದ ವರ್ಷ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಕಂಡ ಧ್ರುವ ಸರ್ಜಾ ನಟನೆಯ ʼಮಾರ್ಟಿನ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ಹೀಗಾಗಿ ಅವರು ಭರ್ಜರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಪ್ರೇಮ್‌ ನಿರ್ದೇಶನದ, ಧ್ರುವ ಅಭಿನಯದ ʼಕೆಡಿʼ ಚಿತ್ರ ಸದ್ಯ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕುತೂಹಲ ಕೆರಳಿಸಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದು, ಬಾಲಿವುಡ್‌ನ ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದಾರೆ.