ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saipallavi: ಮದ್ವೆ ಆಗಿ, ಮಕ್ಕಳು ಇರೋ ನಟನ ಜತೆ ಸಾಯಿ ಪಲ್ಲವಿ ಡೇಟಿಂಗ್?

Saipallavi: ಸೌತ್ ಇಂಡಿಯಾದ ಸ್ಟಾರ್ ಹಿರೋಯಿನ್ ಸಾಯಿ ಪಲ್ಲವಿ. ಇವರು ಯಾವಾಗಲೂ ವಿವಾದಗಳಿಂದ ದೂರ ಇರೋರು. ಹಾಗಿದ್ದರೂ ಸಾಯಿ ಪಲ್ಲವಿ ಬಗ್ಗೆ ಕಿಡಿಗೇಡಿಗಳು ಗಾಸಿಪ್ ಹಬ್ಬಿಸುತ್ತಾರೆ. ಈ ಅಂಥದ್ದೇ ರೂಮರ್ ಒಂದು ಸಾಯಿ ಪಲ್ಲವಿ ಬಗ್ಗೆ ಕೇಳಿ ಬಂದಿದೆ. ಅವರು ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಅನ್ನೋ ಸುದ್ದಿಯನ್ನು ಯಾರೋ ಹಬ್ಬಿಸಿಬಿಟ್ಟಿದ್ದಾರೆ.

ಖ್ಯಾತ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್!?‌ ಅಷ್ಟಕ್ಕೂ ಯಾರು ಆತ?

ಸಾಯಿ ಪಲ್ಲವಿ

Profile Sushmitha Jain Apr 9, 2025 10:58 PM

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಜನಪ್ರಿಯರ ನಟಿ. ಈ ನಟಿಯ ಸಿನಿಮಾಗಳಿಗಾಗಿಯೇ ಕಾದು ಕೂರುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ನಟನೆಯಲ್ಲೂ, ಸೌಂದರ್ಯದಲ್ಲೂ ಗಮನ ಸೆಳೆದಿರುವ ಕೆಲವೇ ಕೆಲವು ನಟಿಯರಲ್ಲಿ ಈಕೆ ಕೂಡ ಒಬ್ಬರು. ಅದರಲ್ಲೂ ಮಲಯಾಳಂನ ಜನಪ್ರಿಯ ಸಿನಿಮಾ 'ಪ್ರೇಮಂ' ಮೂಲಕ ಹುಡುಗರ ಪಾಲಿಗೆ ಡ್ರೀಮ್ ಗರ್ಲ್ ಆಗಿರುವ ಸಾಯಿಪಲ್ಲವಿ ಈಗ ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ.

ಹೌದು, ದಕ್ಷಿಣ ಭಾರತದ ಈ ಚೆಲುವೆ ಸ್ಟಾರ್ ನಟಿಯರ ಪಟ್ಟಿಯಲ್ಲಿ ಸದ್ಯ ಮುಂಚೂಣಿಯಲ್ಲಿ ಇದ್ದಾರೆ. ಹೆಚ್ಚು ಮೇಕಪ್ ಇಲ್ಲದೇ ತೀರಾ ಸಿಂಪಲ್‌ ಆಗಿಕಾಣಿಸಿಕೊಳ್ಳುವ ಸಾಯಿ ಪಲ್ಲವಿ ಅಂದ್ರೆ ಬಹಳಷ್ಟು ಜನರಿಗೆ ತುಂಬಾ ಇಷ್ಟ. ಆದರೆ ಸಾಕಷ್ಟು ಸೈಲೆಂಟ್ ಆಗಿದ್ರೂ ಈ ಸುಂದರಿ ಆಗಾಗ ವಿವಾದಕ್ಕೆ ಗುರಿಯಾಗ್ತಾನೇ ಇರ್ತಾರೆ.

ಇದೀಗ ಮತ್ತೆ ಡೇಟಿಂಗ್ ವಿಚಾರಕ್ಕೆ ಸಖತ್ ಸಾಯಿ ಪಲ್ಲವಿ ಸುದ್ದಿಯಾಗಿದ್ದಾರೆ. ವಿವಾದಗಳಿಂದ ಸದಾ ದೂರ ಇರುವ ಸಾಯಿ ಪಲ್ಲವಿಯನ್ನು ಈ ಗಾಸಿಪ್ ಅನ್ನೋದು ಬಿಟ್ಟಿಲ್ಲ. ಈಗ ಇವರ ಬಗ್ಗೆ ಹೊಸದೊಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ. ಹೌದು ʼರಾಮಾಯಣʼ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿರುವ ಸಾಯಿ ಪಲ್ಲವಿ ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಅನ್ನೋ ಸುದ್ದಿಯನ್ನು ಯಾರೋ ಹಬ್ಬಿಸಿಬಿಟ್ಟಿದ್ದಾರೆ. ಆದರೆ ಈ ಸುದ್ದಿಯನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ. ನಟಿ ಸಾಯಿ ಪಲ್ಲವಿ ಅವರು ಯಾವಾಗಲೂ ವಿವಾದಗಳಿಂದ ದೂರ ಇರೋರು. ತಾವಾಯ್ತು, ತಮ್ಮ ಕೆಲಸವಾಯ್ತು ಎಂಬಂತಿರುವ ಈ ನಟಿಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎನ್ನಲಾಗುತ್ತಿದೆ.

ತೆಲುಗು, ತಮಿಳು ಸೇರಿದಂತೆ ಮಲಯಾಳಂನಲ್ಲೂ ಬ್ಯುಸಿಯಾಗಿರೋ ಸಾಯಿ ಪಲ್ಲವಿ ಈಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಯಶ್‌-ರಣಬೀರ್‌ ಜತೆಗೆ ಬಾಲಿವುಡ್‌ನ ʼರಾಮಾಯಣʼದಲ್ಲಿ ನಟಿಸುತ್ತಿರುವ ಅವರ ಬಗ್ಗೆ ಕೆಲವರು ಬೇಕಂತಲೇ ಗಾಸಿಪ್ ಹರಡಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಹಾಗಾಗಿ ಸಾಯಿ ಪಲ್ಲವಿಯ ಬಗ್ಗೆ ಅಪಪ್ರಚಾರ ಮಾಡುವ ಹುನ್ನಾರ ನಡೆದಿದೆ ಎಂದು ಫ್ಯಾನ್ಸ್ ವಾದಿಸುತ್ತಿದ್ದು, ಬಿಟೌನ್‌ನ ಕೆಲ ನಟಿಯರು ತಮ್ಮ ಪಿ.ಆರ್. ಗಿಮಿಕ್ ಬಳಸಿ ಇಂಥ ಗಾಸಿಪ್ ಹಬ್ಬಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವ ವ್ಯಕ್ತಿಯ ಜತೆ ಸಾಯಿ ಪಲ್ಲವಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಎಲ್ಲಿಯೂ ಬಹಿರಂಗ ಆಗಿಲ್ಲ.

ಈ ಸುದ್ದಿಯನ್ನು ಓದಿ: Viral Video: ಇನ್‌ಸ್ಟಾಗ್ರಾಂ ಸ್ನೇಹಿತನನ್ನು ಮದುವೆಯಾಗಲು ಅಮೆರಿಕದಿಂದ ಬಂದ ಮಹಿಳೆ; ಅದ್ಭುತ ಲವ್‌ಸ್ಟೋರಿ ಇಲ್ಲಿದೆ

ಈ ಹಿಂದೆ ಅಮಲಾ ಪೌಲ್‌ ಅವರ ಮಾಜಿ ಗಂಡ ವಿಜಯ್ ಅವರ ಜತೆ ಸಾಯಿ ಪಲ್ಲವಿ ತಳುಕಿ ಹಾಕಿಕೊಂಡಿತ್ತು. 2014ರಲ್ಲಿ ಅಮಲಾ ಪೌಲ್‌ ಅವರನ್ನು ವಿಜಯ್ ಮದುವೆಯಾಗಿದ್ದರು. ಆ ಬಳಿಕ ಭಿನ್ನಾಭಿಪ್ರಾಯಗಳ ಕಾರಣ ಇವರ ದಾಂಪತ್ಯ ಜೀವನ ಮುರಿದು ಬಿತ್ತು. ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ 2017ರಲ್ಲಿ ವಿಚ್ಛೇದನ ಪಡೆದರು. ಇದೇ ವೇಳೆ ಸಾಯಿ ಪಲ್ಲವಿ ಅಭಿನಯದ 'ದಿಯಾ' ಎಂಬ ಸಿನಿಮಾವನ್ನು ವಿಜಯ್ ನಿರ್ದೇಶಿಸಿದ್ದರು. ಇದೇ ಚಿತ್ರ ತೆಲುಗಿನಲ್ಲಿ 'ಕಣಂ' ಹೆಸರಿನಲ್ಲಿ ರಿಲೀಸ್ ಆಗಿತ್ತು.

ಈ ಚಿತ್ರದ ಚಿತ್ರೀಕರಣ ಸಮಯದಲ್ಲೇ ಇಬ್ಬರ ನಡುವೆ ಪ್ರೇಮ ಚಿಗುರಿದೆ ಎನ್ನಲಾಗಿತ್ತು. ಅವರ ಪ್ರೇಮ ಕಹಾನಿ ಮದುವೆ ತನಕ ಬಂದು ನಿಂತಿದ್ದು, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ನನಗೆ ಈಗಲೇ ಮದುವೆಯಾಗುವ ಆಲೋಚನೆ ಇಲ್ಲ. ನಮ್ಮ ತಂದೆತಾಯಿಯನ್ನು ನೋಡಿಕೊಳ್ಳಬೇಕಾಗಿದೆ ಎಂದಿದ್ದರು ಸಾಯಿ ಪಲ್ಲವಿ. ಇದೀಗ ಡೇಟಿಂಗ್ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಸಾಯಿ ಪಲ್ಲವಿ ಏನೆಂದು ಹೇಳುತ್ತಾರೋ ನೋಡಬೇಕಾಗಿದೆ.