ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇನ್‌ಸ್ಟಾಗ್ರಾಂ ಸ್ನೇಹಿತನನ್ನು ಮದುವೆಯಾಗಲು ಅಮೆರಿಕದಿಂದ ಬಂದ ಮಹಿಳೆ; ಅದ್ಭುತ ಲವ್‌ಸ್ಟೋರಿ ಇಲ್ಲಿದೆ

ಸೋಶಿಯಲ್ ಮೀಡಿಯಾದಲ್ಲಿ ಪರಿಚಿತನಾದ ಆಂಧ್ರ ಪ್ರದೇಶದ ಹಳ್ಳಿಯೊಂದರ ವ್ಯಕ್ತಿಯೊಬ್ಬನನ್ನು ಪ್ರೀತಿಸಿ ಆತನನ್ನು ಮದುವೆಯಾಗಲು ಮಹಿಳೆಯೊಬ್ಬಳು ಅಮೆರಿಕದಿಂದ ಬಂದಿದ್ದಾಳೆ. ಅವರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರಿಂದ ಬೆಂಬಲ, ಮೆಚ್ಚುಗೆ ವ್ಯಕ್ತವಾಗಿದೆ. ಇವರ ಲವ್‌ ಸ್ಟೋರಿ ಹೇಗೆ ಆರಂಭವಾಯ್ತು ಎನ್ನುವ ವಿವರ ಇಲ್ಲಿದೆ.

ಆಂಧ್ರ ಹುಡುಗ-ಅಮೆರಿಕದ ಹುಡುಗಿ; ಗಡಿ ಮೀರಿದ ಲವ್‌ ಸ್ಟೋರಿ

Profile pavithra Apr 9, 2025 7:46 PM

ಸೋಶಿಯಲ್ ಮಿಡಿಯಾ ಕೆಲವೊಬ್ಬರ ಪಾಲಿಗೆ ಕಹಿ ಅನುಭವ ನೀಡಿದರೆ, ಇನ್ನು ಕೆಲವರ ಬದುಕಿನ ದಾರಿಯನ್ನೇ ಬದಲಾಯಿಸುತ್ತದೆ. ಸೋಶಿಯಲ್‌ ಮೀಡಿಯಾದಲ್ಲಿ ಪರಿಚಯವಾಗಿ ಅದು ಪ್ರೀತಿಗೆ ತಿರುಗಿ ನಂತರ ಮೋಸ ಮಾಡಿದವರು ತುಂಬಾ ಜನರಿರಬಹುದು. ಹಾಗೇ ಕೆಲವರಿಗೆ ಇಲ್ಲಿ ಜೀವನದ ಉತ್ತಮ ಸಂಗಾತಿಯೊಬ್ಬರು ಸಿಕ್ಕಿರಬಹುದು. ಇಲ್ಲೊಂದು ಅಂಥದ್ದೇ ಸ್ಟೋರಿ ಇದೆ. ಸೋಶಿಯಲ್ ಮಿಡಿಯಾದಲ್ಲಿ ಪರಿಚಯವಾದ ಆಂಧ್ರ ಪ್ರದೇಶದ ಹಳ್ಳಿಯೊಂದರ ವ್ಯಕ್ತಿಯೊಬ್ಬನನ್ನು ಪ್ರೀತಿಸಿ ಆತನನ್ನು ಮದುವೆಯಾಗಲು ಮಹಿಳೆಯೊಬ್ಬಳು ಅಮೆರಿಕದಿಂದ ಬಂದಿದ್ದಾಳೆ. ಅವರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ನೆಟ್ಟಿಗರು ಫುಲ್‌ ಖುಷ್‌ ಆಗಿದ್ದಾರೆ.

ಛಾಯಾಗ್ರಾಹಕಿ ಜಾಕ್ಲಿನ್ ಫೋರೆರೊ ಚಂದನ್ ಎಂಬಾತನ ಇನ್‌ಸ್ಟಾಗ್ರಾಂ ಪ್ರೊಫೈಲ್ ನೋಡಿ ನಂತರ ಅತನನ್ನು ಪ್ರೀತಿಸಲು ಶುರು ಮಾಡಿದ್ದಾಳಂತೆ. ಹಾಯ್ ಎನ್ನುವ ಮೂಲಕ ಶುರುವಾದ ಅವರ ಪರಿಚಯ ಮಾತುಕತೆಯ ಮೂಲಕ ಮುಂದುವರಿದಿದೆ. ಅವರು ಪರಸ್ಪರ ಮಾತನಾಡುತ್ತಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಜೋಡಿ ಈಗ ಮದುವೆಯಾಗಲು ಸಜ್ಜಾಗಿದೆಯಂತೆ.

ವಿಡಿಯೊ ಇಲ್ಲಿದೆ ನೋಡಿ...

ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯ ಕುರಿತಾದ 45 ಸೆಕೆಂಡುಗಳ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದು ನೆಟ್ಟಿಗರ ಗಮನಸೆಳೆದು ವೈರಲ್ ಆಗಿದೆ. ಅದರಲ್ಲಿ ಅವರು ಒಟ್ಟಿಗೆ ಇರುವ ಹಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅವರು, ಸಾಮಾನ್ಯ ಪರಿಚಯವು ಪ್ರೀತಿಯಾಗಿ ಹೇಗೆ ಬದಲಾಯಿತು ಎಂಬುದನ್ನು ಈ ವಿಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 8 ತಿಂಗಳಗಳ ಕಾಲ ಡೇಟಿಂಗ್ ಮಾಡಿ ನಂತರ ತನ್ನ ತಾಯಿಯ ಒಪ್ಪಿಗೆ ಪಡೆದು ಅವಳು ತನ್ನ ಪ್ರೇಮಿಯನ್ನು ಸೇರಲು ಭಾರತಕ್ಕೆ ಬಂದಿದ್ದಾಳೆ. ಈಕೆ ಅವನಿಗಿಂತ ಒಂಬತ್ತು ವರ್ಷ ದೊಡ್ಡವಳಂತೆ.

ಅವರ ಪ್ರೇಮಕಥೆಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಬೆಂಬಲ ಸಿಕ್ಕಿದೆ. ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳ ಮೂಲಕ ಬೆಂಬಲವನ್ನು ಸೂಚಿಸಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ, "9 ವರ್ಷಗಳು ಏನೂ ಅಲ್ಲ. ನನ್ನ ಪತಿ ಮತ್ತು ನಾನು 10.7 ವಯಸ್ಸಿನ ಅಂತರವನ್ನು ಹೊಂದಿದ್ದೇವೆ. ಇಲ್ಲಿ ವಯಸ್ಸು ಮುಖ್ಯವಲ್ಲ, ಪ್ರೀತಿ ಮುಖ್ಯ” ಎಂದು ಹೇಳಿದ್ದಾರೆ. ಇನ್ನೊಬ್ಬರು "ನೀವಿಬ್ಬರೂ ಒಟ್ಟಿಗೆ ಅದ್ಭುತವಾಗಿ ಕಾಣುತ್ತೀರಿ, ಸೂಪರ್ ಜೋಡಿ " ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮೀರತ್ ಕೊಲೆ ಪ್ರಕರಣ: ಭೋಜ್ಪುರಿ ಹಾಡಿನಲ್ಲಿ ಭೀಕರ ಘಟನೆ ಅನಾವರಣ; ವಿಡಿಯೊ ನೋಡಿ

ಕೆಲವರು ತಮ್ಮ ಪ್ರೀತಿ ಕಥೆಯನ್ನು ಹಂಚಿಕೊಂಡಿದ್ದಾರೆ. ಒಬ್ಬರು "ನಾನು ಮತ್ತು ನನ್ನ ಪತಿ ಕೂಡ ಬೇರೆ ಬೇರೆ ದೇಶದವರು. ನಾವು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದೆವು. ಪ್ಯಾರಿಸ್‍ನಲ್ಲಿ ಮೊದಲ ಬಾರಿಗೆ ಭೇಟಿಯಾದೆವು. ಒಂದು ವರ್ಷದ ನಂತರ ವಿವಾಹವಾದೆವು. ಆದ್ದರಿಂದ ನಾವು ಒಟ್ಟಿಗೆ ಇರಲು ಸಾಧ್ಯವಾಯಿತು. ಈಗಾಗಲೇ 9 ವರ್ಷಗಳು ಕಳೆದಿವೆ. ನಿಮ್ಮ ರೊಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ” ಎಂದು ಹಾರೈಸಿದ್ದಾರೆ.