ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kiccha Sudeep: ʻದೇವತೆʼ ಎನಿಸಿಕೊಂಡು 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ನಟಿ ಸಂಗೀತಾ ಭಟ್; ನಾಮಿನೇಟ್‌ ಆಗಿದ್ದವರು ನಿರಾಳ!

Sangeetha Bhat Exit: ಬಿಗ್ ಬಾಸ್ ಮನೆಯಿಂದ ಸಂಗೀತಾ ಭಟ್‌ ಅವರು ಹೊರಬಂದಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಆಟವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರನಡೆರುವ ಸಂಗೀತಾ ಅವರ ನಿರ್ಧಾರದಿಂದ ಈ ವಾರದ ಎಲಿಮಿನೇಷನ್ ರದ್ದಾಗಿದ್ದು, ನಾಮಿನೇಟ್ ಆಗಿದ್ದ ಎಲ್ಲಾ ಸ್ಪರ್ಧಿಗಳು ನಿರಾಳರಾಗಿದ್ದಾರೆ.

ʻಬಿಗ್ ಬಾಸ್ʼ ಮನೆಯಿಂದ ಹೊರಬಂದ ಸಂಗೀತಾ ಭಟ್; ಸ್ಪರ್ಧಿಗಳ ಪಾಲಿಗೆ ದೇವತೆ!

-

Avinash GR
Avinash GR Oct 11, 2026 11:13 PM

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಹಲವು ಅನಿರೀಕ್ಷಿತ ತಿರುವುಗಳು, ರೋಚಕ ಬೆಳವಣಿಗೆಗಳು ನಡೆದಿವೆ. ನಿಯಮ ಉಲ್ಲಂಘನೆ ಮತ್ತು ಅವಾಚ್ಯ ಶಬ್ದಗಳ ಬಳಕೆಯ ಕಾರಣಕ್ಕೆ ಮಾಡರ್ನ್ ಮಹಾಕವಿ ಮಂಜ ನೇರವಾಗಿ ರೆಡ್ ಕಾರ್ಡ್ ಪಡೆದು ಮನೆಯಿಂದ ಹೊರಬಿದ್ದ ಬೆನ್ನಲ್ಲೇ, ಇದೀಗ ಮತ್ತೊಂದು ಅನಿರೀಕ್ಷಿತ ತಿರುವು ನಡೆದಿದೆ. ತೀವ್ರ ಅನಾರೋಗ್ಯದ ಕಾರಣದಿಂದಾಗಿ ನಟಿ ಸಂಗೀತಾ ಭಟ್ ಬಿಗ್ ಬಾಸ್ ಪಯಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರನಡೆದಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ರದ್ದಾಗಿದ್ದು, ನಾಮಿನೇಟ್ ಆಗಿದ್ದ ಸ್ಪರ್ಧಿಗಳು ನಿರಾಳರಾಗಿದ್ದಾರೆ.

ಟಾಸ್ಕ್ ವೇಳೆ ಕಾಣಿಸಿಕೊಂಡಿದ್ದ ಆರೋಗ್ಯ ಸಮಸ್ಯೆ

ದೊಡ್ಮನೆಯಲ್ಲಿ ಈ ವಾರ ‘ಗಂಧರ್ವರು ವರ್ಸಸ್ ರಾಕ್ಷಸರು’ ಎಂಬ ಮಹತ್ವದ ಟಾಸ್ಕ್ ನೀಡಲಾಗಿತ್ತು. ರಾಕ್ಷಸರ ತಂಡದಲ್ಲಿದ್ದ ಸಂಗೀತಾ ಭಟ್ ಅವರು ಟಾಸ್ಕ್‌ನಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಏಕಾಏಕಿ ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ತಕ್ಷಣವೇ ಅವರನ್ನು ಕನ್‌ಫೆಶನ್ ರೂಮ್‌ಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಕಳೆದ ವಾರವೇ ಬಾಟಮ್ 3 ಹಂತ ತಲುಪಿದ್ದ ಸಂಗೀತಾ, ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅಂತಿಮ ಕ್ಷಣದಲ್ಲಿ ಸೇಫ್‌ ಆಗಿದ್ದರು. ಆಗಲೇ ಅವರು, "ನನ್ನನ್ನು ಹಾಗೆಯೇ ಕಳುಹಿಸಿಬಿಟ್ಟಿದ್ದರೆ ಸಾಕಾಗಿತ್ತು, ಇಲ್ಲಿದ್ದುಕೊಂಡು ನೋವು ಅನುಭವಿಸಲು ಸಾಧ್ಯವಾಗುತ್ತಿಲ್ಲ" ಎಂದು ಭಾವುಕರಾಗಿ ನುಡಿದಿದ್ದರು. ಇದೀಗ ವೈದ್ಯರ ಸಲಹೆಯಂತೆ ಆಟದಿಂದ ಹೊರಗುಳಿಯುವ ಅನಿವಾರ್ಯತೆ ಅವರಿಗೆ ಎದುರಾಗಿದೆ.

Bigg Boss 13: ಬೆಂಕಿ ಹಚ್ಚಿದ ‘ಡೋಲು ಬೋಲು’ ಮಾತು! ʻಎಲ್ಲಿಂದ ಬರ್ತಾರೋ ಚೈಲ್ಡ್‌ ಚಪಾತಿಗಳು..ʼ ಎಂದು ಗುಡುಗಿದ ಗಗನ್‌ ಚಿನ್ನಪ್ಪ!

ಎಲಿಮಿನೇಷನ್ ರದ್ದು, ದೇವತೆಯಾದ ಸಂಗೀತಾ ಭಟ್

ಈ ವಾರ ಎಲಿಮಿನೇಷನ್ ಪಟ್ಟಿಯಲ್ಲಿ ಗಾನವಿ ಗೌಡ, ಮಂಜ, ಸೋನಿಕಾ, ತಾಂಡವ್ ರಾಮ್, ಧನುಷ್, ಗಗನ್ ಹಾಗೂ ಯಶಸ್‌ ನಾಮಿನೇಟ್ ಆಗಿದ್ದರು. ಮಂಜಗೆ ಆಗಲೇ ರೆಡ್ ಕಾರ್ಡ್ ನೀಡಿ ಹೊರಕಳುಹಿಸಿದ್ದರಿಂದ, ಉಳಿದ ಆರು ಮಂದಿಯಲ್ಲಿ ಯಾರು ಔಟ್ ಆಗಲಿದ್ದಾರೆ ಎಂಬ ಲೆಕ್ಕಾಚಾರ ಗರಿಗೆದರಿತ್ತು. ಆದರೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸಂಗೀತಾ ಭಟ್ ಆರೋಗ್ಯದ ಕಾರಣದಿಂದಾಗಿ ಶೋನಿಂದ ಹೊರನಡೆಯುತ್ತಿದ್ದಾರೆ ಎಂಬ ಅಚ್ಚರಿಯ ಸಂಗತಿಯನ್ನು ಪ್ರಕಟಿಸಿದರು.

ಒಬ್ಬ ಸ್ಪರ್ಧಿ ಅನಾರೋಗ್ಯದಿಂದ ಸ್ವಯಂಪ್ರೇರಿತರಾಗಿ ಹೊರನಡೆಯುತ್ತಿರುವುದರಿಂದ ಈ ವಾರದ ಎಲಿಮಿನೇಷನ್ ರದ್ದುಪಡಿಸಲಾಗಿದ್ದು, ನಾಮಿನೇಟ್ ಆಗಿದ್ದ ಎಲ್ಲ ಸ್ಪರ್ಧಿಗಳು ಸುರಕ್ಷಿತರಾಗಿದ್ದಾರೆ ಎಂದು ಸುದೀಪ್ ತಿಳಿಸಿದರು. ಇದೇ ಸಂದರ್ಭದಲ್ಲಿ ಸುದೀಪ್ ಅವರು, "ಉಳಿದ ಸ್ಪರ್ಧಿಗಳ ಪಾಲಿಗೆ ಸಂಗೀತಾ ಭಟ್ ಈ ವಾರ ನಿಜಕ್ಕೂ ದೇವತೆಯಾಗಿದ್ದಾರೆ" ಎಂದು ಬಣ್ಣಿಸಿದರು.

ವೇದಿಕೆಗೆ ಆಗಮಿಸಿದ ಸಂಗೀತಾ ಭಟ್ ಅವರಿಗೆ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ತಂಡದ ವತಿಯಿಂದ ಗೌರವಪೂರ್ವಕವಾಗಿ 3.50 ಲಕ್ಷ ನಗದು ಬಹುಮಾನ ನೀಡಿ ಬೀಳ್ಕೊಟ್ಟರು.