ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya Rai: ಅಭಿಷೇಕ್ ಬಚ್ಚನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಬೆನ್ನಲ್ಲೆ ಪತ್ನಿ ಐಶ್ವರ್ಯ ರೈ ವಿಶೇಷ ಪೋಸ್ಟ್ ವೈರಲ್

Aishwarya Rai Viral Post : ಇತ್ತೀಚೆಗಷ್ಟೇ ನಟ ಅಭಿಷೇಕ್ ಬಚ್ಚನ್ ಅವರು ಕೂಡ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು ತಮ್ಮ ಪತ್ನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇದೀಗ ಅವರ ಪತ್ನಿ ಐಶ್ವರ್ಯ ಕೂಡ ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಭಿಷೇಕ್‌ಗೆ ಅತ್ಯುತ್ತಮ ನಟ ಪ್ರಶಸ್ತಿ: ಪತ್ನಿ ಐಶ್ವರ್ಯ ರೈ ಫೋಸ್ಟ್ ವೈರಲ್!

-

Profile Pushpa Kumari Oct 14, 2025 12:38 PM

ನವದೆಹಲಿ: ಬಾಲಿವುಡ್ ಫೇಮಸ್ ಸೆಲೆಬ್ರಿಟಿ ಕಪಲ್ ನಲ್ಲಿ ನಟಿ ಐಶ್ವರ್ಯ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ಪೇರ್ ಯಾವಾಗಲೂ ಮುಂಚುಣಿಯಲ್ಲಿ ರುತ್ತದೆ. ಪ್ರೀತಿಸಿ ಮದುವೆಯಾದ ಈ ಕಪಲ್ ಬಗ್ಗೆ ಇತ್ತೀಚಿನ ಕೆಲ ವರ್ಷದಲ್ಲಿ ಅನೇಕ ವದಂತಿಗಳು ಕೇಳಿ ಬರುತ್ತಲೇ ಇದೆ‌. ನಟ ಅಭಿಷೇಕ್ ಬಚ್ಚನ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರೆ ಅವರ ಪತ್ನಿ ಐಶ್ವರ್ಯ ರೈ ತಮ್ಮ ತವರು ಮನೆಯಲ್ಲಿ ಪ್ರತ್ಯೇಕ ವಾಸಿಸುತ್ತಿದ್ದಾರೆ. ಅವರಿಬ್ಬರ ನಡುವೆ ವೈಮನಸ್ಸು ಬಂದಿದ್ದು ಇಬ್ಬರು ಶೀಘ್ರವೇ ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಕಳೆದ ಅನೇಕ ವರ್ಷದಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಇವರಿಬ್ಬರು ಈ ಹಿಂದಿನಿಂದಲೂ ಅನೇಕ ಸಲ ಸ್ಪಷ್ಟನೆ ನೀಡಿದ್ದರು. ಇತ್ತೀಚೆಗಷ್ಟೇ ನಟ ಅಭಿಷೇಕ್ ಬಚ್ಚನ್ ಅವರು ಕೂಡ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು ತಮ್ಮ ಪತ್ನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇದೀಗ ಅವರ ಪತ್ನಿ ಐಶ್ವರ್ಯ ಕೂಡ ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

2024 ರಲ್ಲಿ ತೆರೆಕಂಡ ಐ ವಾಂಟ್ ಟು ಟಾಕ್‌ (I Want to Talk) ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಅವರು ಅತ್ಯದ್ಭುತವಾಗಿ ನಟಿಸಿದ್ದು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. 70 ನೇ ಫಿಲ್ಮ್‌ ಫೇರ್ ನಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ತಮ್ಮ ಪತ್ನಿ ಐಶ್ವರ್ಯ ಹಾಗೂ ಮಗಳನ್ನು ನೆನೆದು ಅಭಿಷೇಕ್ ಭಾವನಾತ್ಮಕವಾಗಿ ಮಾತನಾಡಿದ್ದು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ನಟಿ ಐಶ್ವರ್ಯ ರೈ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ನಟಿ ಐಶ್ವರ್ಯ ರೈ ಅವರು ಪೋಸ್ಟ್ ಇಲ್ಲಿದೆ:

70ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಅವರು ಪ್ರಶಸ್ತಿ ಸ್ವೀಕರಿಸಿ, ಇದನ್ನು ಗೆಲ್ಲಲು ನನ್ನ ಕುಟುಂಬ ಹಾಗೂ ನನ್ನ ಪತ್ನಿಯೇ ಮುಖ್ಯ ಕಾರಣ.. ಅವರ ತ್ಯಾಗ ಗಳಿಂದಲೇ ನಾನು ಇಂದು ಇಲ್ಲಿ ನಿಲ್ಲಲು ಸಾಧ್ಯವಾಯಿತು. ಅವರ ಬಗ್ಗೆ ನನಗೆ ಹೆಮ್ಮೆ ಪ್ರೀತಿ ಇದೆ.. ಥ್ಯಾಂಕ್ಯು ಆಲ್ ಎಂದು ಅವರು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಅವರಿಗೆ ತಮ್ಮ 83 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ಕೂಡ ನೆರವೇರಿತ್ತು.

ಇದನ್ನೂ ಓದಿ:Aishwarya-Shishir: ಕೊನೆಗೂ ಗುಡ್ ನ್ಯೂಸ್ ಕೊಟ್ಟ ಐಶ್ವರ್ಯಾ-ಶಿಶಿರ್: ಪಾರ್ಟ್ನರ್ಸ್ ಆಗಲಿದ್ದಾರೆ ಬಿಗ್ ಬಾಸ್ ಜೋಡಿ

ಪತಿ ಪ್ರಶಸ್ತಿ ಗೆದ್ದು ಧನ್ಯವಾದ ಹೇಳಿದ ನಂತರ ಐಶ್ವರ್ಯಾ ರೈ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ಯಾರಿಸ್ ಫ್ಯಾಷನ್ ವೀಕ್ 2025ರಲ್ಲಿ ನಡೆದ ಕಾರ್ಯಕ್ರಮ ದಲ್ಲಿ ನಟಿ ಐಶ್ವರ್ಯ ಅವರು ಭಾಗಿಯಾಗಿದ್ದಾರೆ. ಲೋರಿಯಲ್ ಬ್ರ್ಯಾಂಡಿನ ಅಂಬಾಸಿಡರ್ ಆಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಮನೀಶ್ ಮಲ್ಹೋತ್ರಾ (Manish Malhotra) ವಿನ್ಯಾಸಗೊಳಿಸಿದ ಕಪ್ಪು ಬಣ್ಣದ ಶೆರ್ವಾನಿ ವಿನ್ಯಾಸದ ಉಡುಪಿನಲ್ಲಿ ಅವರು ಕಂಗೊಳಿಸಿದ್ದರು. ಇದೇ ಫೋಟೋಸ್ ಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಮನೀಶ್ ಮಲ್ಹೋತ್ರಾ ಅವರನ್ನು ಟ್ಯಾಗ್ ಕೂಡ ಮಾಡಿದ್ದಾರೆ. ಇದಕ್ಕೆ ನಟಿ ಭೂಮಿ ಪೆಡ್ನೇಕರ್ 'ಕ್ವೀನ್'ಎಂದು ಪ್ರತಿಕ್ರಿಯಿಸಿದ್ದಾರೆ.

ನಟಿ ಐಶ್ವರ್ಯಾ ರೈ ಅವರು ಕಪ್ಪು ಬಣ್ಣದ ಶೆರ್ವಾನಿ ಧರಿಸಿ ಗ್ಲಾಮರಸ್ ಆಗಿ ಕಂಡಿದ್ದಾರೆ. ಬಂಧ್‌ಗಲಾ ವಿನ್ಯಾಸದ ಕಾಲರ್ ಇದ್ದು, ಕ್ರಿಸ್ಟಲ್ ಹಾಗೂ ಡೈಮಂಡ್ ಸ್ಟೋನ್ಸ್ ನಲ್ಲಿ ಡಿಸೈನ್ ಅತ್ಯದ್ಭುತವಾಗಿ ಮಾಡಲಾಗಿದೆ. ಆದರೆ ಅವರ ಈ ಪೋಸ್ಟ್ ನಲ್ಲಿ ನಟ ಅಭಿಷೇಕ್ ಬಚ್ಚನ್ ಅವರ ಬಗ್ಗೆ ಎಲ್ಲೂ ಉಲ್ಲೇಖ ಮಾಡದೇ ಇದ್ದರೂ ಕೂಡ ಅವರು ಪ್ಯಾರಿಸ್ ಫ್ಯಾಷನ್ ವೀಕ್ ಕಾರ್ಯ ಕ್ರಮದಲ್ಲಿ ಸದ್ಯ ಬ್ಯುಸಿ ಇದ್ದೇನೆ ಎಂಬುದನ್ನು ಈ ಪೋಸ್ಟ್ ಮೂಲಕವೇ ಅಭಿಮಾನಿಗಳಿಗೆ ತಿಳಿಸಿದ್ದಾರೆ.