BBK 12: ಈ ವಾರ 13 ಮಂದಿ ನಾಮಿನೇಟ್, ಯಾವುದೇ ಸಮಯದಲ್ಲಿ ಎಲಿಮಿನೇಷನ್
ಶಾಕಿಂಗ್ ಎಂದರೆ ಈ ವಾರ ಮನೆಯಿಂದ ಹೊರಹೋಗಲು ಫಿನಾಲೆ ಕಂಟೆಸ್ಟೆಂಟ್ ಬಿಟ್ಟು ಉಳಿದ ಎಲ್ಲ 13 ಮಂದಿ ನಾಮಿನೇಟ್ ಆಗಿದ್ದಾರೆ. ನಾಲ್ಕು ಮಂದಿ ಫೈನಲಿಸ್ಟ್ ಆಗಿರುವುದರಿಂದ ಅವರಿಗೆ ಇಮ್ಯೂನಿಟಿ ಕೂಡ ಸಿಕ್ಕಿದೆ. ಆದ್ದರಿಂದ ಎಲ್ಲ ಅವರು ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ. 13 ಸ್ಪರ್ಧಿಗಳನ್ನು ನೇರವಾಗಿ ಸ್ವತಃ ಬಿಗ್ ಬಾಸ್ ಅವರೇ ನಾಮಿನೇಟ್ ಮಾಡಿದ್ದಾರೆ.

BBK 12 Nomination -

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಮೂರನೇ ವಾರ ಸಾಗುತ್ತಿದೆ. ದೊಡ್ಮನೆಯಲ್ಲಿರುವ ಸ್ಪರ್ಧಿಗಳಿಗೆ ಈ ವಾರ ಬಹುಮುಖ್ಯವಾಗಿದೆ. ಯಾಕೆಂದರೆ ಇದೇ ವಾರ ಬಿಬಿಕೆ 12ರ ಮೊದಲ ಫಿನಾಲೆ ನಡೆಯಲಿದೆ. ಇದೇ ಶನಿವಾರ ಹಾಗೂ ಭಾನುವಾರ ಮಿಡ್ ಸೀಸನ್ ಫಿನಾಲೆ ಆಯೋಜಿಸಲಾಗಿದೆ. ಇದರಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಇರಲಿದೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಹಾಗೂ ಮಾಲು ಫಿನಾಲೆ ಕಂಟೆಸ್ಟೆಂಟ್ ಆಗಿದ್ದಾರೆ. ಇನ್ನೋರ್ವ ಸ್ಪರ್ಧಿ ಯಾರು ಎಂಬುದು ನೋಡಬೇಕಿದೆ. ಇದರ ಮಧ್ಯೆ ವಾರದ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಶಾಕಿಂಗ್ ಎಂದರೆ ಈ ವಾರ ಮನೆಯಿಂದ ಹೊರಹೋಗಲು ಫಿನಾಲೆ ಕಂಟೆಸ್ಟೆಂಟ್ ಬಿಟ್ಟು ಉಳಿದ ಎಲ್ಲ 13 ಮಂದಿ ನಾಮಿನೇಟ್ ಆಗಿದ್ದಾರೆ. ನಾಲ್ಕು ಮಂದಿ ಫೈನಲಿಸ್ಟ್ ಆಗಿರುವುದರಿಂದ ಅವರಿಗೆ ಇಮ್ಯೂನಿಟಿ ಕೂಡ ಸಿಕ್ಕಿದೆ. ಆದ್ದರಿಂದ ಎಲ್ಲ ಅವರು ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ. 13 ಸ್ಪರ್ಧಿಗಳನ್ನು ನೇರವಾಗಿ ಸ್ವತಃ ಬಿಗ್ ಬಾಸ್ ಅವರೇ ನಾಮಿನೇಟ್ ಮಾಡಿದ್ದಾರೆ. ಸದ್ಯ 13 ಮಂದು ನಾಮಿನೇಟ್ ಆಗಿರುವುದರಿಂದ ಇದರಲ್ಲಿ ಎಷ್ಟು ಮಂದಿಗೆ ಗೇಟ್ ಪಾಸ್ ಸಿಗಲಿದೆಯೋ ಗೊತ್ತಿಲ್ಲ.
ಮೂರನೇ ವಾರ ಮಾಸ್ ಎಲಿಮಿನೇಶನ್ ನಡೆಯಲಿದೆ ಎಂದು ಮೊದಲೇ ಹೇಳಿದ್ದರು. ಅದರಂತೆ ದೊಡ್ಡ ಸಂಖ್ಯೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯೂ ಆಗಲಿದೆ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಮೂರನೇ ವಾರ ಫಿನಾಲೆ ನಡೆಯಲಿದೆ, ಡ್ಯಾನ್ಸ್, ಸ್ಕಿಟ್, ಕಾಮಿಡಿ ಇರುತ್ತದೆ ಎಂದು ಸ್ಪರ್ಧಿಗಳು ಭಾವಿಸಿದ್ದರು. ಇದರ ಜೊತೆಗೆ ಮಾಸ್ ಎಲಿಮಿನೇಶನ್ ಇರುತ್ತದೆ, ಯಾವಾಗ ಬೇಕಿದ್ರೂ ಎಲಿಮಿನೇಶನ್ ಆಗಬಹುದು ಎಂದು ಬಿಗ್ ಬಾಸ್ ಶಾಕ್ ನೀಡಿದ್ದಾರೆ.
ಬಿಗ್ ಬಾಸ್ಗೆ ಸಂಬಂಧಿಸಿದ ವಿಡಿಯೋ:
‘‘ಸ್ಪರ್ಧಿಗಳ ಸಹಕಾರಿಂದ ಫೈನಲಿಸ್ಟ್ ಆದ ಕಾಕ್ರೋಚ್ ಸುಧಿ, ಸ್ವಂತ ಶ್ರಮದಿಂದ ಅಶ್ವಿನಿ ಗೌಡ ಮತ್ತು ಜನರಿಂದ ಸೆಲೆಕ್ಟ್ ಆಗಿ ಫೈನಲಿಸ್ಟ್ ಆದ ಸ್ಪಂದನಾ - ಮಾಳುಗೆ ಶುಭಾಶಯಗಳು. ಈ ಮನೆಯಲ್ಲಿ 100 ದಿನ ಇದ್ದು, ಗೆಲ್ಲುವುದಕ್ಕೆ ವೈಯಕ್ತಿಕ ಸಾಮರ್ಥ್ಯ, ಮನೆಯವರ ಜೊತೆಗಿನ ಮೈತ್ರಿ ಹಾಗೂ ಜನರ ಪ್ರೀತಿ-ಅಭಿಮಾನ ಮುಖ್ಯ ಎಂದು ಫೈನಲಿಸ್ಟ್‌ಗಳು ಸಾಬೀತು ಪಡಿಸಿದ್ದಾರೆ. ಫಿನಾಲೆ ವಾರ ಅಂದ್ರೆ ಸಾಕಷ್ಟು ಫನ್ ಇರುತ್ತದೆ ಎಂದುಕೊಂಡಿದ್ದರೆ, ಅದನ್ನು ಇಲ್ಲಿಗೆ ಮರೆತುಬಿಡಿ. ಕಾರಣ, ಈಗಾಗಲೇ ಮನೆಯಲ್ಲಿರುವ ನಾಲ್ವರು ಫೈನಲಿಸ್ಟ್‌ಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸದಸ್ಯರು ಈ ಕ್ಷಣವೇ ನಾಮಿನೇಟ್ ಆಗಿದ್ದೀರಿ’’ ಎಂದು ಬಿಗ್ ಬಾಸ್ ಹೇಳಿದ್ದಾರೆ.
BBK 12: ಸ್ಪಂದನಾರಿಂದ ಮಾಸ್ಟರ್ ಸ್ಟ್ರೋಕ್: ಎಲ್ಲ ಟಾಸ್ಕ್ನಿಂದ ಧ್ರುವಂತ್ ಬ್ಲಾಕ್
‘‘ಯಾವಾಗ ಬೇಕಾದರೂ ನಡೆಯಲಿರುವ ಈ ಎಲಿಮಿನೇಷನ್‌ನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕಾದರೆ, ಈ ಮನೆಯಲ್ಲಿ ನಿಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಮುಂದಿನ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ತುಂಬಾ ಮುಖ್ಯ. ಈ ಕ್ಷಣದಿಂದ ನಿಮ್ಮೆಲ್ಲರ ಆಟದ ಲಗಾಮು ನಿಮ್ಮ ನಿಮ್ಮ ಕೈಯಲ್ಲೇ ಇದೆ. ಎಲ್ಲರಿಗೂ ಶುಭವಾಗಲಿ’’ ಎಂಬ ಸಂದೇಶವನ್ನು ಬಿಗ್ ಬಾಸ್ ನೀಡಿದ್ದಾರೆ.