Amitabh Bachchan: ಕೆಬಿಸಿ ಶೋದಲ್ಲಿ ನಟ ಬಿಗ್ ಬಿಯನ್ನು ಅವಮಾನಿಸಿದ ಹುಡುಗ; ನೆಟ್ಟಿಗರಿಂದ ಕ್ಲಾಸ್
ಅಮಿತಾಭ್ ಬಚ್ಚನ್ ನಡೆಸಿ ಕೊಡುವ ಕೌನ್ ಬನೇಗಾ ಕರೋಡ್‌ಪತಿ ಶೋ ಭಾರತೀಯ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎನಿಸಿಕೊಂಡಿದೆ. ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳೂ ಈ ಕ್ವಿಜ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ, ಅತಿಥಿಗಳಾಗಿ ಭಾಗವಹಿಸುತ್ತಾರೆ. ಇದೇ ಕಾರ್ಯಕ್ರಮದ ಜೂನಿಯರ್ ಶೋ ವೇಳೆ ಬಾಲಕನೋರ್ವ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಅಗೌರವಯುತವಾಗಿ ವರ್ತಿಸಿದ್ದ ಈ ವಿಡಿಯೊ ವೈರಲ್ ಆಗಿದೆ.

Amitabh Bachchan -

ನವದೆಹಲಿ: ನಟ, ಬಾಲಿವುಡ್ ಕಲಾವಿದ ಅಮಿತಾಭ್ ಬಚ್ಚನ್ (Amitabh Bachchan) ಚಿತ್ರರಂಗ ಮಾತ್ರವಲ್ಲ ಕಿರುತೆರೆಯಲ್ಲಿಯೂ ಜನಪ್ರಿಯ ಮುಖ. ʼಕೌನ್ ಬನೇಗಾ ಕರೋಡ್‌ಪತಿʼ (Kaun Banega Crorepati) ರಿಯಾಲಿಟಿ ಶೋ ಮೂಲಕ ಮನೆ ಮನವನ್ನು ತಲುಪುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಈ ಕ್ವಿಝ್ ಕಾರ್ಯಕ್ರಮದಲ್ಲಿ ಭಾಗಿಸುವುದು ವಿಶೇಷ. ಇದೇ ಕಾರ್ಯಕ್ರಮದ ಜೂನಿಯರ್ ಶೋದಲ್ಲಿ ಬಾಲಕನೋರ್ವ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಅಗೌರವಯುತವಾಗಿ ವರ್ತಿಸಿದದಾನೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ. ಸದ್ಯ ಆ ಬಾಲಕನ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼಕೌನ್ ಬನೇಗಾ ಕರೋಡ್‌ಪತಿʼಯ ಪ್ರತಿ ಸೀಸನ್ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಇದಕ್ಕೆ ತನ್ನದೇ ಆದ ಅಭಿಮಾನಿ ಬಳಗ ಕೂಡ ಇದೆ. ತಮ್ಮ ವಿಭಿನ್ನ ಸ್ಟೈಲ್ ಹಾಗೂ ಆಕರ್ಷಕ ನಿರೂಪಣಾ ಶೈಲಿಯಿಂದ ಬಿಗ್ ಬಿ ಶೋವನ್ನು ಉನ್ನತ ಸ್ಥಾನಕ್ಕೆ ಕೊಂಡಿಯ್ದಿದ್ದಾರೆ. ಈ ಬಾರಿ ಕೆಬಿಸಿ (KBC)ಯ ಜೂನಿಯರ್ ಸಂಚಿಕೆ ಕೂಡ ಚೆನ್ನಾಗಿ ಮೂಡಿ ಬಂದಿದೆ. ಸದ್ಯ 5ನೇ ತರಗತಿ ವಿದ್ಯಾರ್ಥಿಯೊಬ್ಬನು ನಟ ಅಮಿತಾಭ್ ಬಚ್ಚನ್ ಜತೆಗೆ ಅಗೌರವಯುತವಾಗಿ ವರ್ತಿಸಿರುವುದಕ್ಕೆ ಹಲವರು ಕಂಡಾಮಂಡಲರಾಗಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
The boy Ishit Bhatt Interrupts Amitabh Bachchan on KBC, Exits with Zero.
— Mr.X (@X_fromIndia) October 12, 2025
While everyone is furiously reacting over this child's behaviour blaming his parents, let me tell you that generation by generation from bad to worse are being born! Analyse yourself with your parents!!! pic.twitter.com/xztIzF5Q1t
ಗುಜರಾತ್‌ನ ಗಾಂಧಿನಗರದ 5ನೇ ತರಗತಿ ವಿದ್ಯಾರ್ಥಿ ಇಶಿತ್ ಭಟ್ ʼʼಸಹನೆ ಇಲ್ಲದ ದೊಡ್ಡವರುʼʼ ಎಂದು ಹೇಳುವ ಮೂಲಕ ಅಮಿತಾಭ್ ಬಚ್ಚನ್ ಜತೆ ಅಗೌರವವಾಗಿ ವರ್ತಿಸಿದ್ದಾನೆ. ವೈರಲ್ ಆದ ವಿಡಿಯೊದಲ್ಲಿ ಬಾಲಕ ಕೆಬಿಸಿ ಶೋ ಚೇರ್‌ನಲ್ಲಿ ಕುಳಿತ ಕೂಡಲೇ, ʼʼನನಗೆ ಈ ಶೋ ನಿಯಮಗಳನ್ನೆಲ್ಲ ಹೇಳುವುದಕ್ಕೆ ಹೋಗಬೇಡಿ. ನನಗೆ ಎಲ್ಲವೂ ಗೊತ್ತಿದೆʼʼ ಎಂದು ಆರಂಭದಲ್ಲೇ ಅಗೌರವಯುತವಾಗಿ ಆದೇಶ ಮಾಡುವಂತೆ ಮಾತನಾಡುತ್ತಾನೆ. ಬಾಲಕನ ಈ ಮಾತಿಗೆ ಅಮಿತಾಭ್ ತಾಳ್ಮೆಯಿಂದಲೇ ಸರಿ ಎಂದು ಹೇಳಿದ್ದಾರೆ.
ಅನಂತರ ಅಮಿತಾಭ್ ಬಚ್ಚನ್ ಬಾಲಕನಿಗೆ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ. ಇವುಗಳಲ್ಲಿ ಯಾವುದನ್ನು ಬೆಳಗ್ಗೆ ತಿನ್ನಲಾಗುತ್ತದೆ ಎಂದು ಕೇಳುತ್ತಾರೆ. ಅದಕ್ಕೆ ಬಾಲಕ ಯಾವುದೇ ಆಯ್ಕೆಗಳು ಬೇಡ, ಬ್ರೇಕ್‌ಫಾಸ್ಟ್ ಎಂದು ಹೇಳುತ್ತಾನೆ. ನಂತರ 4 ಆಯ್ಕೆಗಳಲ್ಲಿ ಬಿ. ಬ್ರೇಕ್‌ಫಾಸ್ಟ್ ಆಪ್ಶನ್ ಲಾಕ್ ಮಾಡಿ ಎಂದು ಹೇಳುತ್ತಾನೆ. ಹಾಗೆಯೇ ಚೆಸ್‌ನಲ್ಲಿ ಎಷ್ಟು ರಾಜ ಇರುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಬಾಲಕ ಇದೊಂದು ಕೇಳುವಂತಹ ಪ್ರಶ್ನೆಯೇ ಕೇವಲ 2 ರಾಜರು ಇರುತ್ತಾರೆ ಎಂದು ಉತ್ತರಿಸುತ್ತಾನೆ. ರಾಮಾಯಣದಲ್ಲಿನ ಮೊದಲ ಕಾಂಡ ಯಾವುದು ಎಂದು 5ನೇ ಪ್ರಶ್ನೆ ಕೇಳಿದ್ದು ಆಗ ಹುಡುಗ ಆಪ್ಶನ್ ಹೇಳಿ ಎಂದು ಬೊಬ್ಬೆ ಹಾಕಿ ಹೇಳಿದ್ದಾನೆ. ಬಳಿಕ ಈ ಪ್ರಶ್ನೆಗೆ ಆತ ತಪ್ಪು ಉತ್ತರ ನೀಡಿದ್ದು, ʼʼಬಿಗ್ ಬಿ ಅಂಕಲ್, ನೀವು ಕೂಡ ತಪ್ಪುಗಳನ್ನು ಮಾಡುತ್ತೀರಿ, ಅಲ್ಲವೇ?" ಎಂದು ಕೂಡ ಶೋ ಮಧ್ಯದಲ್ಲಿ ಹೇಳಿದ್ದಾನೆ. ಐದನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದಕ್ಕೆ ಆತ ಅಲ್ಲಿಂದ ನಿರ್ಗಮಿಸಿದ್ದಾನೆ.
ಇದನ್ನು ಓದಿ:Chathushpatha Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದೆ ʼಚತುಷ್ಪಥʼ ಚಿತ್ರ
ಈ ಸಂಚಿಕೆಯ ಕೆಲವು ಕ್ಲಿಪ್ಸ್ ವೈರಲ್ ಆಗಿದ್ದು, ಇದನ್ನು ಕಂಡು ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮಕ್ಕಳನ್ನು ತುಂಬಾ ಮುದ್ದು ಮಾಡಿ ಬೆಳಸಿದರೆ ಹೀಗೆ ಆಗುತ್ತದೆ. ವಿನಯವಂತಿಕೆ ಇಲ್ಲದೇ ಮಗುವನ್ನು ಪೋಷಕರು ಬೆಳೆಸಿದ್ದಾರೆ. ನಯ ವಿನಯ ನಾಜೂಕು ಎಲ್ಲವೂ ಜೀವನದಲ್ಲಿ ಎಷ್ಟು ಅಮೂಲ್ಯ ಎಂಬುದನ್ನು ಕಲಿಸುವುದು ಪೋಷಕರ ಜವಾಬ್ದಾರಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಅವರು ದೊಡ್ಡ ಸ್ಟಾರ್ ನಟರೆಂದು ಅಂದುಕೊಂಡು ಬೆಲೆ ಕೊಡದಿದ್ದರೂ ಅವರ ವಯಸ್ಸು, ಅನುಭವ ಜ್ಞಾನಕ್ಕಾದರೂ ಆತ ಬೆಲೆ ಕೊಟ್ಟು ನಡೆದುಕೊಳ್ಳಬೇಕಿತ್ತು ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟೆಲ್ಲ ಆದರೂ ಕೂಡ ನಟ ಅಮಿತಾಭ್ ಬಚ್ಚನ್ ಮಾತ್ರ ಆ ಹುಡುಗನ ಜತೆಗೆ ತಾಳ್ಮೆಯಿಂದ ವರ್ತಿಸಿದ್ದಾರೆ. ಪರಿಸ್ಥಿತಿಯನ್ನು ಶಾಂತಯುತವಾಗಿ ನಿಭಾಯಿಸಿದ್ದು ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.