ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya-Shishir: ಕೊನೆಗೂ ಗುಡ್ ನ್ಯೂಸ್ ಕೊಟ್ಟ ಐಶ್ವರ್ಯಾ-ಶಿಶಿರ್: ಪಾರ್ಟ್ನರ್ಸ್ ಆಗಲಿದ್ದಾರೆ ಬಿಗ್ ಬಾಸ್ ಜೋಡಿ

ಇಷ್ಟದಿನ ಒಳ್ಳೆಯ ಸ್ನೇಹಿತರು ಎಂದೇ ಹೇಳಿಕೊಂಡು ಬಂದಿದ್ದ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರೀ ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಒಳ್ಳೆಯ ಪಾರ್ಟ್ನರ್ಸ್ ಆಗಬೇಕು ಎಂದು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಇವರಿಬ್ಬರು ಏನು ಹೇಳಿದ್ದಾರೆ ನೋಡಿ

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಐಶ್ವರ್ಯಾ-ಶಿಶಿರ್

Aishwarya and Shishir

Profile Vinay Bhat Mar 26, 2025 4:17 PM

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ ಎಷ್ಟು ಕ್ಲೋಸ್ ಎಂಬುದು ಇಡೀ ಕರ್ನಾಟಕ ಜನತೆಗೆ ತಿಳಿದಿದೆ. ದೊಡ್ಮನೆಯಲ್ಲಿದ್ದಾಗ ಇವರಿಬ್ಬರು ತುಂಬಾ ಆತ್ಮೀಯತೆಯಲ್ಲಿದ್ದರು. ಎಷ್ಟರ ಮಟ್ಟಿಗೆ ಎಂದರೆ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿದ್ದರು. ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೆ ಹೋಳಿ ಹಬ್ಬದ ಸಂದರ್ಭ ಇಬ್ಬರೂ ಜೊತೆಯಾಗಿ ವಿಡಿಯೋ ಶೂಟ್- ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದರು. ವಿಡಿಯೋದಲ್ಲಿ ಐಶ್ವರ್ಯಾ ಅವರು ಶಿಶಿರ್​ಗೆ ಕಿಸ್ ಕೊಟ್ಟಿದ್ದರು. ಈ ವಿಡಿಯೋ ಭರ್ಜರಿ ವೈರಲ್ ಆಗಿತ್ತು.

ಕೆಲ ಸಂದರ್ಶನದಲ್ಲಿ ಐಶ್ವರ್ಯಾ ಬಳಿ ಶಿಶಿರ್ ಬಗ್ಗೆ ಕೇಳಿದಾಗ ನಾಚಿ ನೀರಾಗಿದ್ದೂ ಉಂಟು. ಆದ್ರೆ ಇಬ್ಬರೂ ನಾವಿಬ್ರು ಒಳ್ಳೆಯ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹದ ಬಾಂಧವ್ಯ ಇದೆ ಎಂದಷ್ಟೆ ಹೇಳಿಕೊಂಡು ಬಂದಿದ್ದಾರೆ. ಮದುವೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ, ಸದ್ಯಕ್ಕಂತೂ ಮದುವೆಯಾಗುವ ಯೋಚನೆ ಇಲ್ಲ. ಆದರೆ, ಒಳ್ಳೆಯ ಗುಣಗಳಿರುವ ಹುಡುಗ ಹಾಗೂ ತನ್ನನ್ನು ಕಾಳಜಿ ಮಾಡುವವ ಸಿಗಬೇಕು. ಅಲ್ಲದೇ, ಗೌರವ ಕೊಡುವವನಾಗಿರಬೇಕು. ಅಂತಹ ಹುಡುಗ ಸಿಕ್ಕರೆ ಮದುವೆಯಾಗುವೆ ಎಂದು ಹೇಳಿದ್ದರು.

ಇಷ್ಟದಿನ ಒಳ್ಳೆಯ ಸ್ನೇಹಿತರು ಎಂದೇ ಹೇಳಿಕೊಂಡು ಬಂದಿದ್ದ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರೀ ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಒಳ್ಳೆಯ ಪಾರ್ಟ್ನರ್ಸ್ ಆಗಬೇಕು ಎಂದು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಐಶ್ವರ್ಯಾ ಮತ್ತು ಶಿಶಿರ್‌, ‘‘ನಾವು ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಬಳಿಕವೇ ಆ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ವಿ. ನಮ್ಮ ಫ್ಯಾನ್ಸ್‌ ಮತ್ತು ಫ್ರೆಂಡ್ಸ್‌ಗಳಿಗೆ ಆ ವಿಚಾರದಿಂದ ಬೇಸರವೂ ಆಗಿದೆ. ಆದರೆ ನಾವಿಬ್ಬರೂ ಒಳ್ಳೆ ಫ್ರೆಂಡ್ಸ್‌ ಅಷ್ಟೇ. ಬಿಗ್‌ ಬಾಸ್‌ ಮನೆಯಲ್ಲೂ ಒಳ್ಳೆ ಬಾಂಡ್‌ ಇತ್ತು ಈಗಲೂ ಇದೆ. ಯೆಸ್.. ನೀವು ಖಂಡಿತವಾಗಲೂ ನಮ್ಮಿಂದ ಗುಡ್‌ ನ್ಯೂಸ್‌ ನಿರೀಕ್ಷಿಸಬಹುದು. ನಾವು ಪಾರ್ಟ್ನರ್ಸ್ ಆಗಬಹುದು. ಆದರೆ ಅದು ಬ್ಯುಸಿನೆಸ್‌ ಪಾರ್ಟ್ನರ್ಸ್‌ಗಳಾಗಿ’’ ಎಂದು ಹೇಳಿರುವ ಮೂಲಕ ಐಶ್ವರ್ಯಾ ಮತ್ತು ಶಿಶಿರ್‌ ಚಮಕ್ ಕೊಟ್ಟಿದ್ದಾರೆ.

ಬಿಗ್ ​ಬಾಸ್​ಗೆ ಬರುವ ಮುನ್ನ ಶಿಶಿರ್ ಹಾಗೂ ಐಶ್ವರ್ಯಾ ​ಸ್ನೇಹಿತರಾಗಿದ್ದರು. ಈ ಇಬ್ಬರು ಒಟ್ಟಿಗೆ ಒಂದು ಸಿನಿಮಾ ಕೂಡ ಮಾಡಿದ್ದರು. ಹೀಗಾಗಿ ದೊಡ್ಮನೆಯೊಳಗೆ ಕೂಡ ಇವರು ತುಂಬಾ ಕ್ಲೋಸ್ ಇದ್ದರು. ಒಂದು ಹಂತದಲ್ಲಿ ಒಬ್ಬರ ಮೇಲೆ ಒಬ್ಬರು ತೋರುವ ಪ್ರೀತಿ ನೋಡಿ, ಇವರಿಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಈ ಬಗ್ಗೆ ಬಿಗ್ ​ಬಾಸ್​​ನಿಂದ ಆಚೆ ಬಂದ ಮೇಲೆ ನಾವಿಬ್ಬರು ಸ್ನೇಹಿತರಷ್ಟೆ ಎಂಬ ಕ್ಲಾರಿಟಿ ಕೊಟ್ಟರು.

Bhagya Lakshmi Serial: ಭಾಗ್ಯ ದಾರಿಗೆ ಮತ್ತೆ ಎದುರಾದ ಕನ್ನಿಕಾ: ಕೈ ತುತ್ತಿಗೂ ಬೀಳುತ್ತ ಕಲ್ಲು?