Akon: ಬೆಂಗಳೂರಿನಲ್ಲಿ ಕಾರ್ಯಕ್ರಮದ ವೇಳೆ ಖ್ಯಾತ ಸಿಂಗರ್ ಪ್ಯಾಂಟ್ ಎಳೆದ ಫ್ಯಾನ್ಸ್; ವಿಡಿಯೊ ವೈರಲ್!
American singer Akon: ಅಮೆರಿಕನ್ ಗಾಯಕ ಅಕಾನ್ ತಮ್ಮ 2025ರ ಪ್ರವಾಸಕ್ಕಾಗಿ ಭಾರತದಲ್ಲಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ಬೆಂಗಳೂರಿಗೂ ಬಂದಿರುವ ಗಾಯಕ ಅಕಾನ್ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಅಭಿಮಾನಿಗಳು ಅಕಾನ್ ಪ್ಯಾಂಟ್ ಅನ್ನು ವೇದಿಕೆಯ ಮೇಲೆ ಎಳೆದಿದ್ದಾರೆ. ನೆಟ್ಟಿಗರು ಈ ನಡವಳಿಕೆಯನ್ನು ಟೀಕಿಸಿದ್ದಾರೆ. ಮತ್ತು ಅಗೌರವ ಮತ್ತು ಸಂಪೂರ್ಣ ಕಿರುಕುಳ ಇದು ಎಂದು ಕಮೆಂಟ್ ಮಾಡಿದ್ದಾರೆ.
ಅಮೆರಿಕನ್ ಗಾಯಕ ಅಕಾನ್ -
ಸೆನೆಗಲೀಸ್-ಅಮೆರಿಕನ್ ಗಾಯಕ ಅಕಾನ್ ( Senegalese-American singer Akon ) ತಮ್ಮ 2025ರ ಪ್ರವಾಸಕ್ಕಾಗಿ ಭಾರತದಲ್ಲಿದ್ದಾರೆ. ನವೆಂಬರ್ 16 ರಂದು ಮುಂಬೈನಲ್ಲಿ ತಮ್ಮ ಅಂತಿಮ ಪ್ರದರ್ಶನವನ್ನು ಮುಗಿಸಿದ್ದಾರೆ. ಅಕಾನ್ ಪ್ರವಾಸವು ನವೆಂಬರ್ 9 ರಂದು ದೆಹಲಿಯಲ್ಲಿ ಪ್ರಾರಂಭವಾಯಿತು. ನವೆಂಬರ್ 14 ರಂದು ಬೆಂಗಳೂರಿಗೆ (Banglore) ಬಂದಿದ್ದರು. ಬೆಂಗಳೂರಿಗೂ ಬಂದಿರುವ ಗಾಯಕ ಅಕಾನ್ ತೀವ್ರ ಮುಜುಗರಕ್ಕೀಡಾಗಿದ್ದಾರೆ.
ಅಭಿಮಾನಿಗಳು ಅಕಾನ್ ಪ್ಯಾಂಟ್ (Pant) ಅನ್ನು ವೇದಿಕೆಯ ಮೇಲೆ ಎಳೆದಿದ್ದಾರೆ. ಸಂಪೂರ್ಣ ಬಿಳಿ ಉಡುಪನ್ನು (White Dress) ಧರಿಸಿದ್ದ ಗಾಯಕ ಅಕಾನ್ ವೇದಿಕೆಯಲ್ಲೇ ಈ ಮುಜುಗರಕ್ಕೀಡಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
ವಿಡಿಯೊ ವೈರಲ್
ಜುಮೇರ್ ಖಾಜಾ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಗಾಯಕ ಅಕಾನ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿ ಅಕಾನ್ ತಮ್ಮ ಹಿಟ್ ಹಾಡು 'ಸೆ ಕ್ಸಿ ಬಿಚ್' ಹಾಡುತ್ತಿರುವಾಗ ವಿಐಪಿ ವಿಭಾಗದ ಬಳಿ ಬ್ಯಾರಿಕೇಡ್ ಹತ್ತಿ ಹ್ಯಾಂಡ್‌ಶೇಕ್ ಮಾಡಲು ಹೋದ ವೇಳೆ ಮುಂದಿನ ಸಾಲಿನಲ್ಲಿದ್ದ ಅಭಿಮಾನಿಗಳು ವೇದಿಕೆಯ ಮೇಲೆ ನಿಂತಿದ್ದ ಅಕಾನ್‌ರ ಪ್ಯಾಂಟ್ ಅನ್ನು ಎಳೆದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಅತ್ಯಂತ ಕಠಿಣ ಶಿಕ್ಷೆ ಕೊಡಿಸಿದ ಗಿಲ್ಲಿ; ಬಸ್ಕಿ ಹೊಡೆದ ಅಶ್ವಿನಿ ಗೌಡ
ಪದೇ ಪದೇ ಪ್ಯಾಂಟ್‌ವನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಅಹಿತಕರ ಕ್ಷಣದ ಹೊರತಾಗಿಯೂ, ಅಕಾನ್ ತನ್ನ ಶಾಂತತೆಯನ್ನು ಕಾಯ್ದುಕೊಂಡು ಪ್ರದರ್ಶನವನ್ನು ಮುಂದುವರಿಸಿದರು.
ನೆಟ್ಟಿಗರು ಗರಂ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ಅನೇಕ ಬಳಕೆದಾರರು ಈ ನಡವಳಿಕೆಯನ್ನು ಟೀಕಿಸಿದರು ಮತ್ತು ಅದನ್ನು ಅಗೌರವ ಮತ್ತು ಸಂಪೂರ್ಣ ಕಿರುಕುಳ ಎಂದು ಕರೆದರು. ಗಾಯಕನನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದರ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದರು.
ಒಬ್ಬ ಬಳಕೆದಾರರು, "ಭಾರತದಲ್ಲಿ ಎಲ್ಲರೂ ಪರಸ್ಪರರ ಪ್ಯಾಂಟ್‌ಗಳನ್ನು ಎಳೆಯುತ್ತಿದ್ದಾರೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಇದು ದುಃಖಕರ, ವೇದಿಕೆಯಲ್ಲಿ ನೇರಪ್ರಸಾರದಲ್ಲಿ ಇರೋ ಗಾಯಕನಿಗೆ ಕಿರುಕುಳ ನೀಡೋದು ಎಷ್ಟು ಸರಿ? ಎಂದು ಬರೆದುಕೊಂಡಿದ್ದಾರೆ.
ಜನರು ಅತಿಥಿಗಳನ್ನು ಹೀಗೆ ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಅಭಿಮಾನಿಗಳು ಎಂದು ಇಂಥವರಿಗೆ ಕರೆಯುತ್ತೀರಾ?ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕಾವ್ಯ ಆದ ಗಿಲ್ಲಿ, ಗಿಲ್ಲಿ ಆದ ಕಾವ್ಯ ! ಬಿಗ್ಬಾಸ್ ಮನೆಯಲ್ಲಿ ನಗುವಿನ ಹಬ್ಬ
ಇದಕ್ಕೂ ಮುನ್ನ ಸಿಂಗರ್ ಭಾರತಕ್ಕೆ ಮರಳುವ ಬಗ್ಗೆ ಆತ್ಮೀಯವಾಗಿ ಮಾತನಾಡಿದ್ದರು. ಭಾರತ ಯಾವಾಗಲೂ ನನಗೆ ತುಂಬಾ ಪ್ರೀತಿಯನ್ನು ತೋರಿಸಿದೆ. ಇದು ನನಗೆ ಎರಡನೇ ಮನೆ ಇದ್ದಂತೆ. ಈ ಪ್ರವಾಸವು ವಿಶೇಷವಾದದ್ದು, ಒಟ್ಟಿಗೆ ಇತಿಹಾಸ ನಿರ್ಮಿಸೋಣ ಎಂದಿದ್ದರು. ಆದರೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯು ಸಂಚಲನ ಸೃಷ್ಟಿಸಿದೆ.