ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻರಾಕಾʼ ಸಿನಿಮಾ ಶೂಟಿಂಗ್‌ಗಾಗಿ ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್? ತಂದೆಯಿಂದಲೇ ಸಿಕ್ತು ಸ್ಪಷ್ಟನೆ

ಟಾಲಿವುಡ್‌ ನಟ ಅಲ್ಲು ಅರ್ಜುನ್ ಮುಂಬೈಗೆ ತಮ್ಮ ವಾಸ್ತವ್ಯ ಬದಲಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಅವರ ತಂದೆ ಅಲ್ಲು ಅರವಿಂದ್ ನಿರಾಕರಿಸಿದ್ದಾರೆ. 600 ಕೋಟಿ ಬಜೆಟ್‌ನ 'ರಾಕಾ' ಚಿತ್ರದ ಕೆಲಸಗಳು ಮುಂಬೈನಲ್ಲಿ ನಡೆಯುತ್ತಿರುವುದರಿಂದ ಅಲ್ಲು ಅರ್ಜುನ್‌ ಮುಂಬೈಗೆ ಶಿಫ್ಟ್‌ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್? ತಂದೆ ಹೇಳಿದ್ದೇನು?

-

Avinash GR
Avinash GR Apr 22, 2026 5:17 PM

ʻಪುಷ್ಪʼ ಸರಣಿಯ ಸಿನಿಮಾಗಳಿಂದ ಭರ್ಜರಿ ಸಕ್ಸಸ್‌ ಪಡೆದುಕೊಂಡಿರುವ ನಟ ಅಲ್ಲು ಅರ್ಜುನ್‌ ಅವರು ಸದ್ಯ ʻರಾಕಾʼ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. 600 ಕೋಟಿ ರೂ.ಗಳಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಬಹುತೇಕ ಕೆಲಸಗಳು ಮುಂಬೈನಲ್ಲೇ ನಡೆಯುತ್ತಿವೆ. ಆ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಅವರು ಮುಂಬೈಗೆ ಶಿಫ್ಟ್‌ ಆಗಲಿದ್ದಾರೆ. ಇನ್ಮುಂದೆ ಹೈದರಾಬಾದ್‌ನಲ್ಲಿ ಇರೋದಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ತಂದೆ ಅಲ್ಲು ಅರವಿಂದ್‌ ಹೇಳಿದ್ದೇನು?

ಮುಂಬೈನಲ್ಲಿ ವಾಸ ಮಾಡಲು ನಿರ್ಧರಿಸಿರುವ ಅಲ್ಲು ಅರ್ಜುನ್‌ ಅಲ್ಲಿಯೇ ಒಂದು ಹೊಸ ಐಷಾರಾಮಿ ಮನೆಯನ್ನ ಕೂಡ ಖರೀದಿ ಮಾಡುತ್ತಿದ್ದಾರಂತೆ ಎಂಬ ಮಾತು ಕೇಳಿಬಂದಿತ್ತು. ಅದೆಲ್ಲದಕ್ಕೂ ಈಗ ತೆರೆಬಿದ್ದಿದೆ. ಈ ಊಹಾಪೋಹಗಳಿಗೆ ಸ್ವತಃ ಅಲ್ಲು ಅರ್ಜುನ್‌ ಅವರ ತಂದೆ, ನಿರ್ಮಾಪಕ ಅಲ್ಲು ಅರವಿಂದ್‌ ಸ್ಪಷ್ಟನೆ ನೀಡಿದ್ದು, ತಮ್ಮ ಮಗ ಮುಂಬೈಗೆ ಶಿಫ್ಟ್‌ ಆಗುವ ಸುದ್ದಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

Allu Arjun: ಅಲ್ಲು ಅರ್ಜುನ್ ಬರ್ತ್‌ಡೇ ; ಮನೆ ಎದುರು ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು

"ಖಂಡಿತವಾಗಿಯೂ ನನ್ನ ಮಗ ಎಲ್ಲಿಯೂ ಶಿಫ್ಟ್‌ ಆಗುತ್ತಿಲ್ಲ. ಪ್ರಸ್ತುತ ರಾಕಾ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿರುವುದರಿಂದ ಹಾಗೆ ಅನಿಸಿರಬಹುದು. ಆದರೆ ಅಲ್ಲು ಅರ್ಜುನ್ ಅವರ ಹೃದಯ ಮತ್ತು ಮನೆ ಇರುವ ಸ್ಥಳ ಹೈದರಾಬಾದ್. ಅವರ ಮಕ್ಕಳು ಇಲ್ಲಿಯೇ ಓದುತ್ತಿದ್ದಾರೆ, ಅಲ್ಲು ಅರ್ಜುನ್‌ ಅವರ ಎಲ್ಲಾ ಪ್ರೀತಿಪಾತ್ರರು ಹೈದರಾಬಾದ್‌ನಲ್ಲಿದ್ದಾರೆ. ಹೀಗಿರುವಾಗ ಅವರೇಕೆ ಮುಂಬೈಗೆ ಶಿಫ್ಟ್ ಆಗುತ್ತಾರೆ?" ಎಂದು ಪ್ರಶ್ನೆ ಮಾಡಿದ್ದಾರೆ.

Allu Arjun: ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ ದುಬಾರಿ ಕಾರು ಗಿಫ್ಟ್‌ ಕೊಟ್ಟ ಅಲ್ಲು ಅರ್ಜುನ್

ಮುಂಬೈನಲ್ಲಿ ತಂಗಲು ಐಷಾರಾಮಿ ಫ್ಲಾಟ್‌

ಈ ನಡುವೆ ಅಲ್ಲು ಅರ್ಜುನ್‌ ಅವರು ರಾಕಾ ಶೂಟಿಂಗ್‌ಗಾಗಿ ಮುಂಬೈಗೆ ಹೋದಾಗೆಲ್ಲಾ, ಅಲ್ಲಿ ತಂಗುವುದಕ್ಕೆಂದೇ ಒಂದು ಐಷಾರಾಮಿ ಫ್ಲಾಟ್‌ ಅನ್ನು ಬಾಡಿಗೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅದರ ತಿಂಗಳ ಬಾಡಿಗೆಯೇ 16 ಲಕ್ಷ ರೂ.ಗಳಂತೆ! ಜುಹು ತಾರಾ ರೋಡ್ ಜಂಕ್ಷನ್‌ನಲ್ಲಿ ಸಮುದ್ರಕ್ಕೆ ಮುಖಮಾಡಿರುವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಅನ್ನು ಮೂರು ವರ್ಷಗಳ ಅವಧಿಗೆ ಅಗ್ರಿಮೆಂಟ್‌ ಮಾಡಿಕೊಳ್ಳಲಾಗಿದೆಯಂತೆ. ಒಟ್ಟು 25 ಕೋಟಿ ರೂಪಾಯಿ ಹಣ ಇದಕ್ಕಾಗಿ ವ್ಯಯವಾಗಲಿದೆ ಎಂಬ ಮತ್ತೊಂದು ಮಾಹಿತಿಯು ಹರಿದಾಡುತ್ತಿದೆ.

6,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಸಣ್ಣ ಈಜುಕೊಳ ಮತ್ತು ನಾಲ್ಕು ಕಾರು ಪಾರ್ಕಿಂಗ್‌ ಸೌಲಭ್ಯವಿದೆಯಂತೆ. ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ಅವರು ಈ ಮನೆಯ ಒಳಾಂಗಣ ವಿನ್ಯಾಸದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮಕ್ಕಳ ಶಾಲಾ ರಜೆಯ ಸಮಯದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲು, ನಿರ್ದೇಶಕ ಅಟ್ಲಿ ಹಾಗೂ ಲೋಕೇಶ್ ಕನಕರಾಜ್ ಅವರಂತಹ ನಿರ್ದೇಶಕರ ಮುಂದಿನ ಚಿತ್ರಗಳ ಸ್ಕ್ರಿಪ್ಟ್‌ ಡಿಸ್ಕಷನ್‌ಗಾಗಿ ಈ ಮನೆಯನ್ನು ಬಳಸಿಕೊಳ್ಳಲಿದ್ದಾರಂತಗೆ. ಅಂದಹಾಗೆ, ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮತ್ತು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರಂತಹ ಸ್ಟಾರ್ ಜೋಡಿಗಳು ಅಲ್ಲು ಅರ್ಜುನ್ ಅವರ ಹೊಸ ಮನೆಯ ನೆರೆಹೊರೆಯವರಾಗಿದ್ದಾರೆ