Karikaada Kannada movie: ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ ಈ ಒಟಿಟಿಯಲ್ಲಿ ಪ್ರಸಾರ!
Karikaada Kannada movie: ಕರಿಕಾಡ ಚಿತ್ರದಲ್ಲಿ ಹಳ್ಳಿ ಯುವಕನಾಗಿ ನಟರಾಜ್ ಅದ್ಭುತ ನಟನೆ ನೀಡಿದ್ದರು. ಮೊದಲ ಚಿತ್ರದಲ್ಲೇ ನಟನೆಯೊಂದಿಗೆ ಸಾಹಸ ಸನ್ನಿವೇಶಗಳಲ್ಲಿ ಕೂಡ ಸ್ವತಃ ಭಾಗಿಯಾಗಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್ ಇಂಥದೊಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಸಹೋದ್ಯೋಗಿಗಳಿಂದ ಹಿಡಿದು ಪರಿಚಿತ ವಲಯದಲ್ಲಿ ಅಚ್ಚರಿ ಮೂಡಿಸಿತ್ತು.
ಕರಿಕಾಡ ಸಿನಿಮಾ -
ಹೊಸಬರ ಸಿನಿಮಾ 'ಕರಿಕಾಡ' (karikada Teaser) ಟೀಸರ್ ಹಾಗು ಟ್ರೈಲರ್‌ನಿಂದಲೇ ಗಮನ ಸೆಳೆದಿತ್ತು.ಕರಿಕಾಡ ಚಿತ್ರದ ನಟನೆಯಿಂದ ಜನಪ್ರಿಯರಾದವರು ಕಾಡ ನಟರಾಜ್ (Kada nataraja) . ಜೂನ್ 6ರಂದು ಸಂಭ್ರಮದ ಜನ್ಮದಿನ ಆಚರಿಸಿಕೊಂಡಿದ್ದಾರೆ. ಕಾಡ ನಟರಾಜ್ ತಾವೇ ನಿರ್ಮಾಣ ಮಾಡಿ, ಮುಖ್ಯ ಪಾತ್ರ ನಿಭಾಯಿಸಿರುವ ‘ಕರಿಕಾಡ’ ಸಿನಿಮಾ ಈಗ ಒಟಿಟಿಯಲ್ಲಿ (OTT) ಲಭ್ಯವಾಗಿದೆ. ಗಿಲ್ಲಿ ವೆಂಕಟೇಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಅದ್ಭುತ ನಟನೆ
ಕರಿಕಾಡ ಚಿತ್ರದಲ್ಲಿ ಹಳ್ಳಿ ಯುವಕನಾಗಿ ನಟರಾಜ್ ಅದ್ಭುತ ನಟನೆ ನೀಡಿದ್ದರು. ಮೊದಲ ಚಿತ್ರದಲ್ಲೇ ನಟನೆಯೊಂದಿಗೆ ಸಾಹಸ ಸನ್ನಿವೇಶಗಳಲ್ಲಿ ಕೂಡ ಸ್ವತಃ ಭಾಗಿಯಾಗಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್ ಇಂಥದೊಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಸಹೋದ್ಯೋಗಿಗಳಿಂದ ಹಿಡಿದು ಪರಿಚಿತ ವಲಯದಲ್ಲಿ ಅಚ್ಚರಿ ಮೂಡಿಸಿತ್ತು.
ಇದನ್ನೂ ಓದಿ: Bigg Boss: ‘ಬಿಗ್ ಬಾಸ್’ ಪ್ರೋಮೋ ಔಟ್; ಹೊಸ ನಿರೂಪಕ ನೋಡಿ ಫ್ಯಾನ್ಸ್ ಖುಷ್
'ಕರಿಕಾಡನಾಗಿ' ನಟರಾಜ್ ಪ್ರಮುಖ ಪಾತ್ರ
'ಕರಿಕಾಡ' ಸಿನಿಮಾವನ್ನು ಗಿಲ್ಲಿ ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ 'ಕರಿಕಾಡನಾಗಿ' ನಟರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರಮಂದಿರಗಳಲ್ಲಿ ಪ್ರಶಂಸೆ ಸಿಕ್ಕಿದ ಬೆನ್ನಲ್ಲೇ ಈ ಸಿನಿಮಾ ಈಗ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸದ್ದು ಮಾಡುತ್ತಿದೆ. ಹೌದು, 'ಕರಿಕಾಡ' ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಅಸಲಿಗೆ ಸಿನಿಮಾದಲ್ಲಿ ಕಾಡ ನಟರಾಜ್ ಅವರ ರಗಡ್, ಟಫ್ ಲುಕ್ ಅನ್ನು ನೋಡಿ ರಿಯಲ್ ಲೈಫ್‌ನಲ್ಲೂ ಹಾಗೆ ಇರಬಹುದು ಅನ್ನೋ ಅನುಮಾನ ಮೂಡುತ್ತೆ. ಆದರೆ, ಕಾಡ ನಟರಾಜ್ ರಿಯಲ್ ಲೈಫ್ ಬೇರೆನೇ ಇದೆ. ಅವರು ಕೇವಲ ನಟರಷ್ಟೇ ಅಲ್ಲ, ವೃತ್ತಿಯಿಂದ ಐಟಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಸಾಫ್ಟ್‌ವೇರ್ ಉದ್ಯೋಗಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿದ್ದ ನಟರಾಜ್, ಮೊದಲ ಸಿನಿಮಾದಲ್ಲೇ ಕಚ್ಚಾ ಹಳ್ಳಿಗನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇದನ್ನೂ ಓದಿ: Kangana Ranaut: ಸಿನಿಮಾ ರಂಗದಲ್ಲಿ ಈ ಮೊದಲು ಕಂಗನಾ ಇಮೇಜ್ ಹೇಗಿತ್ತು? ಸತ್ಯ ತೆರೆದಿಟ್ಟ ನಟಿ
ಇವರ ಜೊತೆಗೆ ಸ್ಯಾಂಡಲ್‌ವುಡ್‌ನ ಪ್ರಮುಖ ಪೋಷಕ ನಟರಾದ ಬಲರಾಜ್ ವಾಡಿ, ಯಶ್ ಶೆಟ್ಟಿ ಮತ್ತು ವಿಜಯ್ ಚೆಂಡೂರ್ ನಟಿಸಿರೋದು ಸಿನಿಮಾದ ಹೈಲೈಟ್. ಕಾಡ ನಟರಾಜ್ ನಟಿಸಿದ ಚೊಚ್ಚಲ ಸಿನಿಮಾ 'ಕರಿಕಾಡ' ಒಟಿಟಿ ವೇದಿಕೆಯಲ್ಲಿ ಯಶಸ್ಸು ಸಿಕ್ಕಿದೆ.