ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇವಲ 4 ದಿನಗಳಲ್ಲಿ 80 ಕೋಟಿಗೂ ಅಧಿಕ ವೀಕ್ಷಣೆ ಪಡೆದ 'ರಾಮಾಯಣ' ಟ್ರೇಲರ್‌; ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಕೇವಲ 4 ದಿನಗಳಲ್ಲಿ 80 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ಹಾಲಿವುಡ್‌ ಸಿನಿಮಾಗಳ ಸಾಲಿನಲ್ಲಿ ಜಾಗತಿಕ ದಾಖಲೆ ಬರೆದಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ನಟಿಸುತ್ತಿರುವ ಈ ಸಿನಿಮಾವು 2026ರ ದೀಪಾವಳಿ ಹಬ್ಬದಂದು ಅದ್ಧೂರಿಯಾಗಿ ತೆರೆಕಾಣಲಿದೆ.

4 ದಿನಗಳಲ್ಲಿ 800 ಮಿಲಿಯನ್‌ ವೀಕ್ಷಣೆ ಪಡೆದ 'ರಾಮಾಯಣ' ಟ್ರೇಲರ್!‌

-

Avinash GR
Avinash GR Aug 4, 2026 7:57 PM

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ಎನಿಸಿರುವ 'ರಾಮಾಯಣ', ತನ್ನ ಮೊದಲ ಅಧಿಕೃತ ಟ್ರೇಲರ್‌ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ವಿಶ್ವದಾದ್ಯಂತ ಅಪಾರ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದ ಟ್ರೇಲರ್, ಬಿಡುಗಡೆಯಾದ ಕೇವಲ 4 ದಿನಗಳಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ 800 ಮಿಲಿಯನ್‌ಗೂ (80 ಕೋಟಿ) ಅಧಿಕ ವೀಕ್ಷಣೆಗಳನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಹಾಲಿವುಡ್‌ ಸಿನಿಮಾಗಳ ಸಾಲಿನಲ್ಲಿ 'ರಾಮಾಯಣ'

ಹಾಲಿವುಡ್‌ನ ಪ್ರಸಿದ್ಧ ಚಿತ್ರಗಳಾದ ಮಾರ್ವೆಲ್‌ನ 'ಅವೆಂಜರ್ಸ್: ಡೂಮ್ಸ್‌ಡೇ' (936 ಮಿಲಿಯನ್) ಮತ್ತು 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' (1.1 ಬಿಲಿಯನ್) ಟ್ರೇಲರ್‌ಗಳ ವೀಕ್ಷಣೆಯ ಸಾಲಿನಲ್ಲಿ 'ರಾಮಾಯಣ' ಚಿತ್ರವೂ ಬಂದು ನಿಂತಿದ್ದು, ಭಾರತೀಯ ಸಿನಿಮಾದ ಶಕ್ತಿಯನ್ನು ವಿಶ್ವಮಟ್ಟಕ್ಕೇರಿಸಿದೆ. ಈ ಜಾಗತಿಕ ಯಶಸ್ಸು ಭಾರತೀಯ ಸಿನಿಮಾದ ಗುಣಮಟ್ಟವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎನ್ನಬಹುದು.

ರಾವಣನಾಗಿ ಅಬ್ಬರಿಸಲಿರುವ ನಟ ಯಶ್‌

ಈ ಮಹಾಕಾವ್ಯ ಆಧಾರಿತ ಚಿತ್ರದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ನಟಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ, ರಾವಣನ ಪಾತ್ರದಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿದ್ದು, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

Ramayana Movie: ಬರ್ತಿದೆ ರಾಮಾಯಣ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ! ವಿಶೇಷತೆ ಏನು?

ನಿರ್ಮಾಣದಲ್ಲೂ ಯಶ್‌ ಸಾಥ್‌

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು, ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ನಮಿತ್ ಮಲ್ಹೋತ್ರಾ, ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ DNEG ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ. ಅತ್ಯಾಧುನಿಕ ದೃಶ್ಯ ವೈಭವ ಮತ್ತು ವಿಶ್ವ ದರ್ಜೆಯ ಕಥೆಗಾರಿಕೆಯೊಂದಿಗೆ ಈ ಸಿನಿಮಾ ರೂಪುಗೊಳ್ಳುತ್ತಿದ್ದು, ಎರಡು ಭಾಗಗಳ ಈ ಮಹಾಕಾವ್ಯವು ಐಮ್ಯಾಕ್ಸ್ ತಂತ್ರಜ್ಞಾನದೊಂದಿಗೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.

Ramayana Movie: ರಣಬೀರ್ ʻರಾಮʼನ ಪಾತ್ರದಲ್ಲಿ ಅತ್ಯಂತ ವೀಕ್‌! ರಾಮಲೀಲಾ ಸಂಘದಿಂದ ಬಂತು ಈ ಎಚ್ಚರಿಕೆ

ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ 'ರಾಮಾಯಣ'

ಚಿತ್ರದ ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿ ಹಬ್ಬದ ಪ್ರಯುಕ್ತ ಅದ್ದೂರಿಯಾಗಿ ತೆರೆಕಾಣಲಿದೆ. ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ವಿಶ್ವದ ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿರುವ 'ರಾಮಾಯಣ' ಚಿತ್ರವು ಅಂತಾರಾಷ್ಟ್ರೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ.