ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಜನ ನಾಯಗನ್‌ʼ ಸಿನಿಮಾ ನೋಡಲು ಇನ್ನೂ 4 ತಿಂಗಳು ಕಾಯಬೇಕು? ಇದು ಸುದ್ದಿ ʻದಳಪತಿʼ ವಿಜಯ್‌ ಫ್ಯಾನ್ಸ್‌ಗೆ ಖುಷಿ ನೀಡುತ್ತಾ?

Jana Nayagan Movie: ತಮಿಳಿನ ಜನ ನಾಯಗನ್‌ ಸಿನಿಮಾದ ಬಿಡುಗಡೆಗೆ ತಡವಾಗುತ್ತಿರುವುದರಿಂದ ದಳಪತಿ ವಿಜಯ್ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಜನವರಿಯಲ್ಲಿ ಬರಬೇಕಿದ್ದ ವಿಜಯ್ ಅವರ ಈ ಕೊನೆಯ ಸಿನಿಮಾ ಇದೀಗ ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದ ರಿಲೀಸ್ ಆಗುವ ಸಾಧ್ಯತೆಯಿದೆ.

ʻಜನ ನಾಯಗನ್‌ʼ ಸದ್ಯಕ್ಕೆ ರಿಲೀಸ್‌ ಆಗೋದಿಲ್ವಾ? ಚಿತ್ರತಂಡದ ಪ್ಲ್ಯಾನ್‌ ಏನು?

-

Avinash GR
Avinash GR Feb 22, 2026 7:15 PM

ʻದಳಪತಿʼ ವಿಜಯ್‌ ಅಭಿನಯದ ʻಜನ ನಾಯಗನ್ʼ‌ ಸಿನಿಮಾವು ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜನವರಿ 9ರಂದೇ ರಿಲೀಸ್‌ ಆಗಬೇಕಿತ್ತು. ಆದರೆ ಸೆನ್ಸಾರ್‌ ಸಮಸ್ಯೆ, ಕೋರ್ಟ್-ಕೇಸ್‌ ಅಂತ ಚಿತ್ರದ ಬಿಡುಗಡೆ ತಡವಾಗುತ್ತಿದೆ. ಇದು ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದೆ. ಯಾಕೆಂದರೆ, ಇದು ವಿಜಯ್‌ ಅವರ ಕೊನೇ ಸಿನಿಮಾ. ಹಾಗಾಗಿ, ಫ್ಯಾನ್ಸ್‌ ಸಾಕಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಈ ಮಧ್ಯೆ ರಿಲೀಸ್‌ ಡೇಟ್‌ ಬಗ್ಗೆ ಹೊಸ ಅಪ್ಡೇಟ್‌ ಸಿಕ್ಕಿದೆ.

ಜನ ನಾಯಗನ್‌ ಬರೋದ್ಯಾವಾಗ?

'ಜನ ನಾಯಗನ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎದುರಾಗಿರುವ ಅಡೆತಡೆಗಳು ದೊಡ್ಡ ಮಟ್ಟದ ಹೊಡೆತ ನೀಡಿವೆ. ಈ ಚಿತ್ರವು ಸಂಕ್ರಾಂತಿ ಹಬ್ಬದ ರಜಾದಿನಗಳಲ್ಲಿ ಬಿಡುಗಡೆಯಾಗಬೇಕಿತ್ತು ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ತೆರೆಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಅದು ನಡೆಯಲಿಲ್ಲ.

ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಚಿತ್ರತಂಡ ಹೊಸದೊಂದು‌ ರಿಲೀಸ್ ಡೇಟ್‌ ಮೇಲೆ ಕಣ್ಣಿಟ್ಟಿದೆಯಂತೆ. ಆದರೆ ಇದು ವಿಜಯ್‌ ಫ್ಯಾನ್ಸ್‌ಗೆ ಖುಷಿ ನೀಡುತ್ತೋ, ದುಃಖ ನೀಡುತ್ತೋ ಗೊತ್ತಿಲ್ಲ! ಯಾಕೆಂದರೆ, ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ʻಜನ ನಾಯಗನ್ʼ‌ ಸಿನಿಮಾ ತೆರೆಕಾಣುವುದು ಇನ್ನೂ ನಾಲ್ಕು ತಿಂಗಳ ನಂತರವಂತೆ!

ಜೂನ್‌ನಲ್ಲಿ ಬರಲಿದೆಯಾ ಜನ ನಾಯಗನ್?‌

ಇತ್ತೀಚಿನ ಮಾಹಿತಿ ಪ್ರಕಾರ, ಜೂನ್ 18 ರಂದು ಅಂದರೆ ನಟ ವಿಜಯ್ ಅವರ 52ನೇ ಹುಟ್ಟುಹಬ್ಬದ (ಜೂನ್‌ 22) ಪ್ರಯುಕ್ತ 'ಜನ ನಾಯಕನ್' ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡವು ಚಿಂತಿಸುತ್ತಿದೆಯಂತೆ. ಆ ಹೊತ್ತಿಗೆ ಚುನಾವಣೆಗಳು ಮುಗಿದಿರುತ್ತವೆ ಮತ್ತು ಪ್ರೇಕ್ಷಕರು ಸಿನಿಮಾ ನೋಡಲು ಆಸಕ್ತಿ ತೋರಿಸುತ್ತಾರೆ ಎಂಬುದು ಚಿತ್ರತಂಡದ ನಂಬಿಕೆ. ಅಷ್ಟೇ ಅಲ್ಲದೆ, ಜೂನ್ 18 ವಾರಾಂತ್ಯದ ರಜಾದಿನಗಳಲ್ಲಿ ಬರುವುದರಿಂದ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂಬುದು ಲೆಕ್ಕಾಚಾರ. ಅಂದರೆ, ಭರ್ತಿ 4 ತಿಂಗಳು ಅಭಿಮಾನಿಗಳು ಈ ಸಿನಿಮಾಕ್ಕಾಗಿ ಕಾಯಬೇಕು.

Jana Nayagan postponed: 'ಜನ ನಾಯಗನ್‌' ಸಿನಿಮಾ ರಿಲೀಸ್‌ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್‌ ಬೇಸರ

ಎಲೆಕ್ಷನ್‌ನಲ್ಲಿ ಫಲಿತಾಂಶ

ಒಂದುವೇಳೆ, ಮೇ ತಿಂಗಳಲ್ಲಿ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ಅವರ ಟಿವಿಕೆ ಪಕ್ಷ ಏನಾದರೂ ಕಮಾಲ್‌ ಮಾಡಿಬಿಟ್ಟರೆ, ಅಭಿಮಾನಿಗಳಿಗೆ ಅದು ಸಖತ್‌ ಖುಷಿಯ ವಿಷಯ. ಆ ಖುಷಿಯಲ್ಲೇ ಜೂನ್‌ 18ರಂದು ತೆರೆಕಾಣಲಿದೆ ಎನ್ನಲಾಗುತ್ತಿರುವ ಜನ ನಾಯಗನ್‌ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿ, ವಿಜಯ್‌ಗೂ ಅದ್ದೂರಿಯಾಗಿಯೇ ಚಿತ್ರರಂಗದಿಂದ ಬೀಳ್ಕೊಡುಗೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.