ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2027ರ ಏಕದಿನ ವಿಶ್ವಕಪ್‌ ಭಾರತ ತಂಡದ ಯೋಜನೆಯಲ್ಲಿ ರವೀಂದ್ರ ಜಡೇಜಾ ಇಲ್ಲ?

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಯೋಜನೆಗಳಿಂದ ರವೀಂದ್ರ ಜಡೇಜಾ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಕೈ ಬಿಟ್ಟಿದೆ ಎಂದು ಹೇಳಾಗುತ್ತಿದೆ. ಜಡೇಜಾ ಬದಲು ಸ್ಪಿನ್‌ ಆಲ್‌ರೌಂಡರ್‌ ಆಗಿ ಅಕ್ಷರ್‌ ಪಟೇಲ್‌ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿರುವುದನ್ನು ಟೈಮ್ಸ್‌ ಆಫ್‌ ಇಂಡಿಯಾ ವರೆದಿ ಮಾಡಿದೆ.

2027ರ ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಜಡೇಜಾಗಿಲ್ಲ ಸ್ಥಾನ?

2027ರ ಏಕದಿನ ವಿಶ್ವಕಪ್‌ ಟೂರ್ನಿಯ ಯೋಜನೆಗಳಲ್ಲಿ ರವೀಂದ್ರ ಜಡೇಜಾ ಇಲ್ಲ? -

Profile
Ramesh Kote Jul 17, 2026 12:01 AM

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ (Axar Patel) ಅವರು ತಮ್ಮ ಆಲ್‌ರೌಂಡ್ ಪ್ರದರ್ಶನದಿಂದ ಭಾರತ ತಂಡವನ್ನು ಗೆಲ್ಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆ ಮೂಲಕ 2027ರ ಏಕದಿನ ವಿಶ್ವಕಪ್‌ (ODI World Cup 2026) ಟೂರ್ನಿಗೂ ಮುನ್ನ ಅವರು ತಂಡದಲ್ಲಿ ಸ್ಪಿನ್ ಆಲ್‌ರೌಂಡರ್ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆಂದು ವರದಿ ತಿಳಿಸಿದೆ. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಇದೀಗ ಏಕದಿನ ವಿಶ್ವಕಪ್‌ ಟೂರ್ನಿಯ ನಿಮಿತ್ತ ಆಯ್ಕೆ ಸಮಿತಿಯ ಯೋಜನೆಗಳಲ್ಲಿ ಮುಂಚೂಣಿಗೆ ಬಂದಿದ್ದಾರೆ. ಹಾಗಾಗಿ ಅನುಭವಿ ರವೀಂದ್ರ ಜಡೇಜಾ (Ravindra Jadeja) ಅವರನ್ನು 50 ಓವರ್‌ಗಳ ಸ್ವರೂಪದಿಂದ ಕೈ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಭಾರತದ 6 ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೌಲಿಂಗ್‌ನಲ್ಲಿ 4 ವಿಕೆಟ್‌ಗಳಿಗೆ 62 ರನ್ ನೀಡಿದ ಅವರು, ಬಳಿಕ ಚೇಸಿಂಗ್ ವೇಳೆ ಅಜೇಯ 52 ಎಸೆತಗಳಲ್ಲಿ 57 ರನ್ ಗಳಿಸಿ ಮಿಂಚಿದ್ದರು. ಅವರ ಈ ಆಲ್‌ರೌಂಡರ್‌ ಪ್ರದರ್ಶನದಿಂದ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.

IND vs ENG: ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ರಾಹುಲ್‌ ದ್ರಾವಿಡ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, 2027ರ ವಿಶ್ವಕಪ್‌ ಟೂರ್ನಿಯ ತಂಡದ ರೂಪುರೇಷೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಮೊದನೇ ಪಂದ್ಯದಲ್ಲಿ ಅಕ್ಷರ್ ಪಟೇಲ್‌ ನೀಡಿದಂತಹ ಪ್ರದರ್ಶನವನ್ನೇ ಬಿಸಿಸಿಐ ಆಯ್ಕೆ ಸಮಿತಿ ಮತ್ತು ಟೀಮ್‌ ಮ್ಯಾನೇಜ್‌ಮೆಂಟ್‌ ನಿರೀಕ್ಷಿಸುತ್ತಿತ್ತು ಎನ್ನಲಾಗಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್‌ ಟೂರ್ನಿಗೆ ಭಾರತದ ದೀರ್ಘಾವಧಿಯ ಯೋಜನೆಗಳಿಗೆ ಅಕ್ಷರ್‌ ಅವರ ಈ ಆಲ್‌ರೌಂಡ್‌ ಪ್ರದರ್ಶನ ಮತ್ತಷ್ಟು ಬಲ ತಂದುಕೊಟ್ಟಿದೆ.

ಏಕದಿನ ಮಾದರಿಯಲ್ಲಿ ಭಾರತದ ಸ್ಪಿನ್ ಆಲ್‌ರೌಂಡರ್ ವಿಭಾಗವನ್ನು ಮುನ್ನಡೆಸುವ ಪ್ರಮುಖ ಅಭ್ಯರ್ಥಿಯಾಗಿ ಅಕ್ಷರ್ ಪಟೇಲ್ ಈಗ ಪರಿಗಣಿಸಲ್ಪಡುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಇತ್ತೀಚಿನ ಪಂದ್ಯದಲ್ಲಿನ ಅವರ ಅದ್ಭುತ ಪ್ರದರ್ಶನವು ಅವರ ಮೇಲಿಟ್ಟಿರುವ ನಂಬಿಕೆಯನ್ನು ಮತ್ತಷ್ಟು ದೃಢಪಡಿಸಿದೆ ಎನ್ನಲಾಗಿದೆ.

IND vs ENG: ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ರಾಹುಲ್‌ ದ್ರಾವಿಡ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಇದೇ ವೇಳೆ, ರವೀಂದ್ರ ಜಡೇಜಾ ಅವರನ್ನು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಆಯ್ಕೆಯ ಸ್ಪಿನ್ ಆಲ್‌ರೌಂಡರ್ ಆಗಿ ಇನ್ನು ಸಕ್ರಿಯವಾಗಿ ಪರಿಗಣಿಸಲಾಗುತ್ತಿಲ್ಲ ಎಂದು ವರದಿ ತಿಳಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಜಡೇಜಾ ಅವರ ವೈಟ್-ಬಾಲ್ ಬೌಲಿಂಗ್ ಪರಿಣಾಮಕಾರಿಯಾಗಿಲ್ಲ ಎಂದು ಆಯ್ಕೆ ಸಮಿತಿ ಭಾವಿಸಿದೆ ಹಾಗೂ ಬ್ಯಾಟಿಂಗ್‌ನಲ್ಲಿಯೂ ಅವರಲ್ಲಿನ ಮ್ಯಾಚ್‌ ಫಿನಿಷರ್ ಸಾಮರ್ಥ್ಯ ಕುಸಿದಿರುವುದೇ ಇದಕ್ಕೆ ಕಾರಣ ಎಂದು ಹೇಳಬಹುದು.

“ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಜಡೇಜಾ ಅವರ ಬೌಲಿಂಗ್ ಪ್ರದರ್ಶನವು ಕೆಲ ಅವಧಿಯಿಂದ ನಿರೀಕ್ಷಿತ ಮಟ್ಟದಲ್ಲಿಲ್ಲ. ದುಬೈನಲ್ಲಿ ಸ್ಪಿನ್‌ಗೆ ನೆರವಾಗುವ ಪಿಚ್‌ಗಳು ಇರಲಿವೆ ಎಂಬ ನಿರೀಕ್ಷೆಯಿಂದಲೇ ಅವರನ್ನು 2025ರ ಮಾರ್ಚ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗಿತ್ತು. ಬ್ಯಾಟಿಂಗ್‌ನಲ್ಲಿನ ಅವರ ಸ್ಫೋಟಕ ಹೊಡೆತಗಳ ಸಾಮರ್ಥ್ಯ 2019ರ ವಿಶ್ವಕಪ್ ಸಮಯದಲ್ಲಿದ್ದ ರೀತಿ ಈಗ ಇಲ್ಲ," ಎಂದು ಬಿಸಿಸಿಐ ಮೂಲವೊಂದನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

IND vs ENG: ರೋಹಿತ್‌ ಶರ್ಮಾ ಪಾಲಿಗೆ ಮೂರನೇ ಒಡಿಐ ಭಾರತದ ಪರ ಕೊನೆಯ ಪಂದ್ಯ?

ಜಡೇಜಾರ ಏಕದಿನ ವೃತ್ತಿ ಜೀವನದ ಅಂಕಿಅಂಶಗಳು

ಅನುಭವಿ ಆಲ್‌ರೌಂಡರ್ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ವೃತ್ತಿಜೀವನ ಹೊಂದಿದ್ದಾರೆ. ಅವರು 210 ಪಂದ್ಯಗಳಲ್ಲಿ 32.28ರ ಸರಾಸರಿಯಲ್ಲಿ 2,905 ರನ್‌ಗಳು ಹಾಗೂ 232 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಆಯ್ಕೆ ಸಮಿತಿಯು ಭವಿಷ್ಯದ ಯೋಜನೆಗಳತ್ತ ಗಮನ ಹರಿಸುತ್ತಿದೆ ಎನ್ನಲಾಗಿದ್ದು, 2027ರ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆಗಳ ಸಂದರ್ಭದಲ್ಲಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಸಮಿತಿ ಪರಿಗಣಿಸುತ್ತಿದೆ.