Amruthadhaare serial: ಹಳ್ಳಕ್ಕೆ ಬಿದ್ದ ಕೇಡಿ ಜೇಡಿ! ಪ್ಲ್ಯಾನ್ ಫ್ಲಾಪ್ ಮಾಡ್ತಾನಾ ಶಕುನಿ ಮಾವ?
Amruthadhaare: ಅಮೃತಧಾರೆ ಸೀರಿಯಲ್ ಸಂಚಿಕೆಯಿಂದ ಸಂಚಿಕೆಗೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೀರಿಯಲ್ ವೀಕ್ಷಕರೆಲ್ಲಾ ಕಾಯುತ್ತಿದ್ದ ಸಮಯ ಬಂದಿದ್ದು, ಕೆಡಿ ಜೈದೇವ್ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಜೈದೇವ್‌ನ ದಿಯಾ ಬೇಬಿ ಮತ್ತು ಹಾಲಿ ಗೆಳತಿ ದಿಢೀರ್ ನಾಪತ್ತೆಯಾಗಿದ್ದು, ಇಬ್ಬರ ಹುಡುಕಲು ಜೀವಾ ಮುಂದಾಗಿದ್ದಾನೆ. ಹಳ್ಳಕ್ಕೆ ಕೇಡಿ ಜೆಡಿ ಬಿದ್ದಾಗಿದೆ. ಮಣ್ಣು ಮುಕ್ಕಿಸೋಕೆ ಭೂಮಿ ರೆಡಿಯಾಗಿದ್ದಾಳೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡದ ಅಮೃತಧಾರೆ ಸೀರಿಯಲ್ (Amruthadhaare Serial) ಸಂಚಿಕೆಯಿಂದ ಸಂಚಿಕೆಗೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೀರಿಯಲ್ ವೀಕ್ಷಕರೆಲ್ಲಾ ಕಾಯುತ್ತಿದ್ದ ಸಮಯ ಬಂದಿದ್ದು, ಕೆಡಿ ಜೈದೇವ್ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಜೈದೇವ್‌ನ (Jaidev Diya) ದಿಯಾ ಬೇಬಿ ಮತ್ತು ಹಾಲಿ ಗೆಳತಿ ದಿಢೀರ್ ನಾಪತ್ತೆಯಾಗಿದ್ದು, ಇಬ್ಬರ ಹುಡುಕಲು ಜೀವಾ ಮುಂದಾಗಿದ್ದಾನೆ. ಹಳ್ಳಕ್ಕೆ ಕೇಡಿ ಜೆಡಿ ಬಿದ್ದಾಗಿದೆ. ಮಣ್ಣು ಮುಕ್ಕಿಸೋಕೆ ಭೂಮಿ ರೆಡಿಯಾಗಿದ್ದಾಳೆ.
ಧಾರಾವಾಹಿಯಲ್ಲಿ ಭೂಮಿ-ಮಲ್ಲಿ ಬೇಹುಗಾರಿಕೆ ಭರ್ಜರಿಯಾಗಿಯೇ ನಡೆಯುತ್ತಿದೆ. ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ವೋಟಿಂಗ್ ಪ್ರಕ್ರಿಯೆ ಆರಂಭ! ಮತ್ತೆ ಸ್ಪರ್ಧಿ ಮೇಲೆ ವಿನಯ್ ಗರಂ
ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸ
ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಾಳೆ. ಈಗ ಜೈದೇವ್ ನಂಬರ್ ಸಿಕ್ಕಿದೆ. ಅತ್ತ ಶಕುಂತಲಾಗೆ ಭಯ ಶುರುವಾಗಿದೆ. ತನ್ನ ಬೆನ್ನ ಹಿಂದೆ ಏನೋ ನಡೆಯುತ್ತಿದೆ ಅಂತ ಅನುಮಾನ ಶುರು ಆಗಿದೆ. ತನ್ನ ತಮ್ಮನ ಬಳಿ ಈ ಬಗ್ಗೆ ಕೇಳಿದ್ದಾಳೆ. ಶಕುನಿ ಮಾಮ ಎಲ್ಲ ವಿಚಾರ ಹೇಳಿ ಬಿಡ್ತನಾ ಅನ್ನೋದು ವೀಕ್ಷರಲ್ಲಿ ಇರೋ ಕುತೂಹಲ.
ಭೂಮಿಕಾ ಮತ್ತು ಮಲ್ಲಿಯ ಮುಂದಿನ ಯೋಜನೆಯನ್ನು ಶಕುಂತಲಾ ಕೇಳಿಸಿಕೊಂಡಿದ್ದು, ಜೈದೇವ್‌ನನ್ನು ಎಚ್ಚರಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದೆ ಜೈದೇವ್ ಕೂಡ ಅಲರ್ಟ್ ಆಗಿರಬಹುದು. ಗೌತಮ್ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಜೈದೇವ್ ಮತ್ತು ಶಕುಂತಲಾ ನಿರಂತರವಾಗಿ ಕುತಂತ್ರ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಹಲವು ಬಾರಿ ತಮ್ಮ ತಪ್ಪುಗಳಿಂದ ತಪ್ಪಿಸಿಕೊಂಡಿರುವ ಇವರಿಬ್ಬರ ನಿಜ ಬಣ್ಣ ಯಾವಾಗ ಬಯಲಾಗುತ್ತದೆ ಎಂಬುದೇ ಈಗ ಕುತೂಹಲ.
ಇದನ್ನೂ ಓದಿ: Amruthadhaare Serial: ಭೂಮಿ ಬೇಹುಗಾರಿಕೆಯ ವಿಷಯ ಶಕುಂತಲಾನ ತಲುಪಲಿದ್ಯಾ ? ಇದು ʻಆಪರೇಷನ್ ಮಧುರ ವ್ಯೂಹʼ!
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ