ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare serial: ಭೂಮಿಕಾ ಪ್ಲಾನ್ ಪ್ಲಾಪ್‌; ಶಕುಂತಲಾಗೆ ಗೊತ್ತಾಗೇ ಹೋಯ್ತು ಮಹಾಸತ್ಯ!

Amruthadhaare serial: ಅಮೃತಧಾರೆಯಲ್ಲಿ (Amruthdhaare Serial) ಟ್ವಿಸ್ಟ್‌ ಪಡೆದು ಸಾಗುತ್ತಿದೆ .ಜೈದೇವ್‌ ದಿಯಾಳನ್ನ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ಇದ್ದ. ಆದರೆ ಈಗ ಹಾಗಲ್ಲ. ಜೀವಾ ಈ ಬಗ್ಗೆ ಮಲ್ಲಿ ಮುಂದೆ ಹೇಳಿದ್ದಾನೆ. ಮಲ್ಲಿ ಈ ಬಗ್ಗೆ ಭೂಮಿಕಾ ಮುಂದೆ ಹೇಳಿದ್ದಾಳೆ. ದಿಯಾಳ ವಿಷಯ ತಿಳಿದುಕೊಂಡು ಬರಲು ಲಕ್ಷ್ಮೀಕಾಂತ್‌ನನ್ನು ಜೈದೇವ್ ಮನೆಗೆ ಕಳುಹಿಸಿದ ಭುಮಿಕಾ ಪ್ಲಾನ್ ಫೇಲ್‌ ಆಗಿದೆ.

ಭೂಮಿಕಾ ಪ್ಲಾನ್ ಪ್ಲಾಪ್‌; ಶಕುಂತಲಾಗೆ ಗೊತ್ತಾಗೇ ಹೋಯ್ತು ಮಹಾಸತ್ಯ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Aug 19, 2026 10:43 AM

ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthdhaare Serial) ಟ್ವಿಸ್ಟ್‌ ಪಡೆದು ಸಾಗುತ್ತಿದೆ .ಜೈದೇವ್‌ (Jaidev) ದಿಯಾಳನ್ನ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ಇದ್ದ. ಆದರೆ ಈಗ ಹಾಗಲ್ಲ. ಜೀವಾ ಈ ಬಗ್ಗೆ ಮಲ್ಲಿ ಮುಂದೆ ಹೇಳಿದ್ದಾನೆ. ಮಲ್ಲಿ ಈ ಬಗ್ಗೆ ಭೂಮಿಕಾ ಮುಂದೆ ಹೇಳಿದ್ದಾಳೆ. ದಿಯಾಳ (Diya) ವಿಷಯ ತಿಳಿದುಕೊಂಡು ಬರಲು ಲಕ್ಷ್ಮೀಕಾಂತ್‌ನನ್ನು ಜೈದೇವ್ ಮನೆಗೆ ಕಳುಹಿಸಿದ ಭುಮಿಕಾ ಪ್ಲಾನ್ ಫೇಲ್‌ ಆಗಿದೆ.

ಬರಿಗೈಯಲ್ಲಿ ಹಿಂತಿರುಗಿದ ಲಕ್ಷ್ಮೀಕಾಂತ್

ದಿಯಾಳ ರಹಸ್ಯವನ್ನು ತಿಳಿಯಲು ಭೂಮಿಕಾ ಕಳುಹಿಸಿದ ಲಕ್ಷ್ಮೀಕಾಂತ್, ಯಾವುದೇ ಮಾಹಿತಿ ಇಲ್ಲದೆ ಬರಿಗೈಯಲ್ಲಿ ಹಿಂತಿರುಗುತ್ತಾನೆ. ಈ ನಡುವೆ, ಭೂಮಿಕಾ ಮತ್ತು ಮಲ್ಲಿಯ ಮುಂದಿನ ಯೋಜನೆಯನ್ನು ಶಕುಂತಲಾ ಕೇಳಿಸಿಕೊಂಡಿದ್ದು, ಜೈದೇವ್‌ನನ್ನು ಎಚ್ಚರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Bigg boss Kannada 13: ಬಿಗ್‌ ಬಾಸ್‌ಗೆ ಸೆಲೆಕ್ಟ್‌ ಆಗಲು ಇದು ಲಾಸ್ಟ್‌ ಚಾನ್ಸ್‌; ಕಠಿಣವಾಯ್ತು ಟಾಸ್ಕ್‌!

ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಿದ್ದಾಗಿದೆ. ಭೂಮಿ ಬೇಹುಗಾರಿಕೆ ಇಲ್ಲಿಂದ ಶುರು ಆಗಿದೆ. ಮಲ್ಲಿ ದಿಯಾ ವಿಚಾರವಾಗಿ ಮಾತನಾಡಿದ್ದು ಭೂಮಿಗೆ ಅನುಮಾನ ಶುರು ಆಗಿದೆ. ಹೀಗಾಗಿ ಶಕುನಿ ಮಾಮನನ್ನು ಛೂ ಬಿಟ್ಟಿದ್ದಾಳೆ. ಶಕುನಿ ಮಾಮ ಕೂಡ ಜೈದೇವ್ಗೆ ಚೆನ್ನಾಗಿ ಕುಡಿಸಿ ದಿಯಾ ವಿಚಾರವಾಗಿ ಸತ್ಯ ತಿಳಿಯಲು ನೋಡಿದ್ದಾನೆ ಯಾವುದೇ ಮಾಹಿತಿ ತಿಳಿದುಕೊಳ್ಳಲಾಗದೇ ಜೈದೇವ್ ಮನೆಯಿಂದ ಲಕ್ಷ್ಮೀಕಾಂತ್ ಹೊರಗೆ ಬಂದಿದ್ದಾನೆ. ಮೊದಲ ಹಂತದಲ್ಲಿಯೇ ಭೂಮಿಕಾ ಮಾಡಿದ ಪ್ಲಾನ್ ಫೇಲ್ ಆಗಿದೆ.

ದಿಯಾಳ ಗೆಳೆಯ ಗೋಕುಲ್ ಜೈಲುಪಾಲಾಗಿದ್ದು, ಈತ ಭೂಮಿಕಾಳ ಸೋದರನ ಸ್ನೇಹಿತನಾಗಿದ್ದ. ಹಾಗಾಗಿ ಗೆಳೆಯನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಜೀವಾ, ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದನು.

ಶಕುಂತಲಾ ಮಗನಿಗೆ ಸಹಾಯ

ಇದಕ್ಕೆ ಐಪಿಎಸ್ ಆಗಿರೋ ಮಲ್ಲಿ ಸಹಾಯ ಸಹ ಕೇಳಿದ್ದನು. ಲಕ್ಷ್ಮೀಕಾಂತ್‌ಗೆ ಯಾವ ವಿಷಯ ಗೊತ್ತಾಗಲಿಲ್ಲ. ಆದ್ರೆ ದಿಯಾ ಹೆಸರು ಹೇಳುತ್ತಿದ್ದಂತೆ ಜೈದೇವ್ ಮುಖದಲ್ಲಾದ ಬದಲಾವಣೆಯ ಮಾಹಿತಿಯನ್ನು ಭೂಮಿಕಾ ಮುಂದೆ ಲಕ್ಷ್ಮೀಕಾಂತ್ ಹೇಳಿದ್ದನು. ಲಕ್ಷ್ಮೀಕಾಂತ್ ಜೊತೆ ಮಲ್ಲಿ ಮತ್ತು ಭೂಮಿಕಾ ಮಾತನಾಡಿದೆಲ್ಲವನ್ನು ಶಕುಂತಲಾ ಕೇಳಿಸಿಕೊಂಡಿದ್ದಾಳೆ.

ಇದರಿಂದ ಜೈದೇವ್ ಅಲರ್ಟ್ ಆಗದು ಪಕ್ಕಾ. ಇದೀಗ ತಾಯಿಂದ ವಿಷಯ ತಿಳಿದು ಲಕ್ಷ್ಮೀಕಾಂತ್ ಜೀವಕ್ಕೆ ಜೈದೇವ್ ಅಪಾಯವನ್ನುಂಟು ಮಾಡ್ತಾನಾ ಅನ್ನೋದು ವೀಕ್ಷರಲ್ಲಿ ಇರೋ ಕುತೂಹಲ.



ಗೌತಮ್‌ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಜೈದೇವ್‌ ಮತ್ತು ಶಕುಂತಲಾ ನಿರಂತರವಾಗಿ ಕುತಂತ್ರ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಹಲವು ಬಾರಿ ತಮ್ಮ ತಪ್ಪುಗಳಿಂದ ತಪ್ಪಿಸಿಕೊಂಡಿರುವ ಇವರಿಬ್ಬರ ನಿಜ ಬಣ್ಣ ಯಾವಾಗ ಬಯಲಾಗುತ್ತದೆ ಎಂಬುದೇ ಈಗ ಕುತೂಹಲ.

ಇದನ್ನೂ ಓದಿ: Amruthadhaare Serial: ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಾಯ್ತು!

`ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ