Bigg Boss Kannada 13: ಯಾರಿಗೆ ಸಿಕ್ತು ಸೀಸನ್ 13ರ ಮೊದಲ ಕಿಚ್ಚನ ಚಪ್ಪಾಳೆ?
Bigg Boss Kannada 13: ಬಿಗ್‌ಬಾಸ್ ಮನೆಯಲ್ಲಿ (Bigg Boss Kannada 13) ಕಿಚ್ಚನ ಚಪ್ಪಾಳೆಗೆ (Kichchana Chappale) ವಿಶೇಷವಾದ ಗೌರವ ಇದೆ. ಮನಗೆದ್ದ ಒಬ್ಬ ಸ್ಪರ್ಧಿಗೆ ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಈ ವಾರ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಯಾರೂ ಊಹಿಸದ ಅಚ್ಚರಿ ನಡೆಯಿತು. ಅಂದ್ಹಾಗೆ ಸುದೀಪ್ ಯಾವ ಸ್ಪರ್ಧಿಗೂ ಚಪ್ಪಾಳೆಯನ್ನ ನೀಡಿಲ್ಲ. ಬದಲಾಗಿ ಸೀಸನ್‌ನ ಮೊದಲ ಚಪ್ಪಾಳೆಯನ್ನ ಕರ್ನಾಟಕದ ಸಮಸ್ತ ಜನತೆಗೆ ಮತ್ತು ಬಿಗ್ ಬಾಸ್ ವೀಕ್ಷಕರಿಗೆ ನೀಡಿದರು.
ಬಿಗ್ ಬಾಸ್ ಕನ್ನಡ -
ಬಿಗ್‌ಬಾಸ್ ಮನೆಯಲ್ಲಿ (Bigg Boss Kannada 13) ಕಿಚ್ಚನ ಚಪ್ಪಾಳೆಗೆ (Kichchana Chappale) ವಿಶೇಷವಾದ ಗೌರವ ಇದೆ. ಮನಗೆದ್ದ ಒಬ್ಬ ಸ್ಪರ್ಧಿಗೆ ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಈ ವಾರ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಯಾರೂ ಊಹಿಸದ ಅಚ್ಚರಿ ನಡೆಯಿತು. ಅಂದ್ಹಾಗೆ ಸುದೀಪ್ ಯಾವ ಸ್ಪರ್ಧಿಗೂ ಚಪ್ಪಾಳೆಯನ್ನ ನೀಡಿಲ್ಲ. ಬದಲಾಗಿ ಸೀಸನ್‌ನ ಮೊದಲ ಚಪ್ಪಾಳೆಯನ್ನ ಕರ್ನಾಟಕದ ಸಮಸ್ತ ಜನತೆಗೆ ಮತ್ತು ಬಿಗ್ ಬಾಸ್ (Bigg Boss) ವೀಕ್ಷಕರಿಗೆ ನೀಡಿದರು.
ಈ ವಾರದ ಕಿಚ್ಚನ ಚಪ್ಪಾಳೆ ಕರ್ನಾಟಕದ ಜನತೆಗೆ, ಬಿಗ್ ಬಾಸ್ ವೀಕ್ಷಕರಿಗೆ, ಕೆಲವು ನಾವು ಆಗೋಕೆ ಬಿಡಲ್ಲ” ಎಂದಿದ್ದಾರೆ ಕಿಚ್ಚ ಸುದೀಪ್. ವಾರಪೂರ್ತಿ ಕೆಟ್ಟ ಕೆಟ್ಟ ಪದಗಳು ಬಿಗ್ ಬಾಸ್ ಮನೆಯಲ್ಲಿ ಬಳಕೆಯಾಗಿದ್ದವು. ಕಿರಣ್ ಶಾಸ್ತ್ರಿ ಅವರು ನಾಲಾಯಕ್, ದಂಡಪಿಂಡ, ಬಳೆ ಹೀಗೆ ಸಾಕಷ್ಟು ಪದಗಳಿಗೆ ಎಗ್ಗಿಲ್ಲದೇ ನಾಲಿಗೆ ಹರಿಬಿಟ್ಟಿದ್ದರು. ಮಾಡ್ರನ್ ಮಹಾಕವಿ ಮಂಜ ಅವರ ಅತಿರೇಕದ ವರ್ತನೆ, ಅವಿನಾಶ್‌ಗೆ ಬಳಸಿದ ಪದಗಳು, ಲಿಖಿತ್ ಊಟದ ವಿಚಾರದಲ್ಲಿ ನಡೆದುಕೊಂಡ ರೀತಿ, ಈ ಎಲ್ಲದರ ಬಗ್ಗೆ ಧ್ವನಿ ಎತ್ತಿದ್ದರು.
ಇದನ್ನೂ ಓದಿ: Bigg Boss Kannada 13: ಕಿಚ್ಚನ ಮುಂದೆ ಥಂಡಾ ಹೊಡೆದ ಮಂಜ; ಸುದೀಪ್ ಉಗ್ರರೂಪಕ್ಕೆ ಮಂಕಾದ ಮಹಾಕವಿ!
ಈ ವಾರದ ಕೆಟ್ಟ ವಾತಾವರಣವನ್ನ “ಸಹಿಸಿಕೊಂಡು ನೋಡಿದ್ದಕ್ಕೆ ಮನಸಾರೆ ಕಿಚ್ಚನ ಚಪ್ಪಾಳೆ ಕೊಡ್ತಾಯಿದ್ದೀನಿ. ನಾನು ನಿಮಗೆ ಚಪ್ಪಾಳೆ ಕೊಡುವಷ್ಟು ದೊಡ್ಡವನಲ್ಲ. ಆದರೂ ಸಣ್ಣ ಗೌರವ ಸಮರ್ಪಣೆ ಎನ್ನುತ್ತಾ, ಬಿಗ್ ಬಾಸ್ ವೀಕ್ಷಕರಿಗೂ ಚಾಪ್ಪಾಳೆ” ನೀಡಿದ್ರು ಕಿಚ್ಚ ಸುದೀಪ್.
ಹಾಗೆಯೇ ವೇದಿಕೆ ಪ್ರವೇಶಿಸುತ್ತಿದ್ದಂತೆ ಸುದೀಪ್ ಅವರು ಗರಂ ಆಗಿದ್ದರು. ಈ ಮನೆಯಲ್ಲಿ ಕೆಲವರು ಅವಕಾಶ ಕೊಟ್ಟ ವೇದಿಕೆಗೆ ಗೌರವ ಕೊಡುತ್ತಿಲ್ಲ. ಮಾನವೀಯತೆಯೇ ಮರೆತುಹೋಗಿದೆ. ಇಷ್ಟು ಜನ ಈ ಶೋ ನೋಡ್ತಾ ಇದ್ದಾರೆ ಅಂತ ತಾನೇ ನೀವೆಲ್ಲ ಬಂದಿರೋದು? ಆ ಜನ ಕಳೆದ 12 ಸೀಸನ್‌ಗಳಿಂದ ನಾವು ಸಂಪಾದಿಸಿರೋ ಆಸ್ತಿ.
ಇದನ್ನೂ ಓದಿ: Bigg Boss Kannada 13: ಕಾಮನರ್ಸ್ ಈ ಶೋಗೆ ಬೇಡ; ಸ್ಪರ್ಧಿಗಳ ವರ್ತನೆಗೆ ಬೇಸತ್ತ ಕಿಚ್ಚ
ಯಾವುದೋ ನಾಲ್ಕು ಜನರ ಕೆಟ್ಟ ನಡವಳಿಕೆಗಾಗಿ ಅಷ್ಟು ಕೋಟಿ ಪ್ರೇಕ್ಷಕರನ್ನು ಕಳೆದುಕೊಳ್ಳಲು ಯಾರೂ ಸಿದ್ಧರಿಲ್ಲ ಎಂದರು.