ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ 'ಬಿಂಟಾಂಗ್ ಆದಿಪೂರ್ಣ' ನಾಗರಿಕ ಗೌರವ
Narendra Modi: ಪ್ರಧಾನಿ ಮೋದಿ ಇಂಡೋನೇಷ್ಯಾ ಪ್ರವಾಸ ಕೈಗೊಂಡಿದ್ದು, ಮೋದಿಯನ್ನು ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸ್ವತಃ ಜಕಾರ್ತ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬರಮಾಡಿಕೊಂಡಿದ್ದಾರೆ. ಇದಾದ ಬಳಿಕ ಇಂಡೊನೇಷ್ಯಾದಲ್ಲಿ ಅದ್ದೂರಿ ಕಾರ್ಯಕ್ರಮಗಳ ಜೊತೆಗೆ ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯವನ್ನು ಭೇಟಿಯಾಗಿದ್ದಾರೆ.
ಸಂಗ್ರಹ ಚಿತ್ರ -
ಜಕಾರ್ತಾ: ಪ್ರಧಾನಿ ಮೋದಿ (Narendra Modi) ಇಂಡೋನೇಷ್ಯಾ (Indonesia) ಪ್ರವಾಸ ಕೈಗೊಂಡಿದ್ದು, ಮೋದಿಯನ್ನು ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸ್ವತಃ ಜಕಾರ್ತ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬರಮಾಡಿಕೊಂಡಿದ್ದಾರೆ. ಇದಾದ ಬಳಿಕ ಇಂಡೊನೇಷ್ಯಾದಲ್ಲಿ ಅದ್ದೂರಿ ಕಾರ್ಯಕ್ರಮಗಳ ಜೊತೆಗೆ ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯವನ್ನು ಭೇಟಿಯಾಗಿದ್ದಾರೆ. ಇಂದು ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ಗೌರವವಾದ 'ಇಂಡೋನೇಷ್ಯಾ ಗಣರಾಜ್ಯದ ಬಿಂಟಾಂಗ್ ಆದಿಪೂರ್ಣ' (Bintang Adipurna) ಪದಕ ಗೌರವವನ್ನು ನೀಡಲಾಗಿದೆ ಎಂದು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಮಂಗಳವಾರ ಘೋಷಿಸಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳು ಮತ್ತು ಸಹಕಾರವನ್ನು ಬಲಪಡಿಸುವಲ್ಲಿ ಪ್ರಧಾನ ಮಂತ್ರಿಯವರ ಕೊಡುಗೆಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ ಎಂದು ಪ್ರಬೋವೊ ಹೇಳಿದ್ದಾರೆ. "ಇದು ನಮ್ಮ ಗಣರಾಜ್ಯವು ನೀಡಬಹುದಾದ ಅತ್ಯುನ್ನತ ಪ್ರಶಸ್ತಿಯಾಗಿದೆ ಮತ್ತು ಇದು ಇಂಡೋನೇಷ್ಯಾ ಮತ್ತು ಭಾರತದ ನಡುವಿನ ಆಳವಾದ ನಾಗರಿಕ ಬಂಧಗಳು ಮತ್ತು ಮುರಿಯಲಾಗದ ಕಾರ್ಯತಂತ್ರದ ನಂಬಿಕೆಗೆ ಸಾಕ್ಷಿಯಾಗಿದೆ" ಎಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅಧ್ಯಕ್ಷ ಪ್ರಬೋವೊ ಮಾತನಾಡಿದರು.
ಇಂಡೋನೇಷ್ಯಾ ಗಣರಾಜ್ಯದ ಬಿಂಟಾಂಗ್ ಆದಿಪೂರ್ಣ ಪ್ರಶಸ್ತಿಯು ದೇಶದ ಅತ್ಯುನ್ನತ ಗೌರವವಾಗಿದೆ. ಇಂಡೋನೇಷ್ಯಾ ಗಣರಾಜ್ಯದ ಏಕತೆ, ನಿರಂತರತೆ ಮತ್ತು ಸಮೃದ್ಧಿಗೆ ಅಸಾಧಾರಣ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ. ಪ್ರಧಾನಿ ಮೋದಿಯವರ ಇಂಡೊನೇಷ್ಯಾ ಭೇಟಿ ದ್ವಿಪಕ್ಷೀಯ ಸಂಬಂಧದ ಜೊತೆಗೆ ರಕ್ಷಣಾ ಸಂಬಂಧಗಳನ್ನು ಹೊಸ ಉತ್ತೇಜನ ನೀಡುವ ನಿರೀಕ್ಷೆಯಿದ್ದು, ಈಗಾಗಲೇ ಮಾತುಕತೆಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ಒಪ್ಪಂದವು ಗಮನಾರ್ಹ ಪ್ರಗತಿಯನ್ನು ಕಾಣುವ ಸಾಧ್ಯತೆಯಿದೆ. ಈ ಕುರಿತಂತೆ ಇಂಡೋನೇಷ್ಯಾದ ಭಾರತದ ರಾಯಭಾರಿ ಸಂದೀಪ್ ಚಕ್ರವರ್ತಿ ಮಾಧ್ಯಮದೊಂದಿಗೆ ಮಾತನಾಡಿದ್ದು, "ಇಂಡೊನೇಷ್ಯಾದಲ್ಲಿ ಪ್ರಧಾನಿ ಮೋದಿ 2ದಿನಗಳು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ಉಭಯದೇಶಗಳ ಅಧ್ಯಕ್ಷರು ರಕ್ಷಣಾ ಸಹಕಾರ ಮತ್ತು ಕಡಲ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ನಿರ್ಣಾಯಕ ಖನಿಜಗಳು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ವಲಯಗಳ ಮೇಲೆ ಕೇಂದ್ರಿಕರಿಸಿ ಮಾತುಕತೆ ನಡೆಸಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿಗೆ ಜೀವ ಬೆದರಿಕೆ; ತನಿಖೆ ಚುರುಕು
ಇಂಡೋನೇಷ್ಯಾದಲ್ಲಿ ಜುಲೈ 6ರಿಂದ 8ರವರೆಗೆ ಇಂಡೋನೇಷ್ಯಾದಲ್ಲಿರುವ ಪ್ರಧಾನಿ, ಜುಲೈ 8ರಿಂದ 10ರವರೆಗೆ ಆಸ್ಪ್ರೇಲಿಯಾ ಪ್ರವಾಸ ಮಾಡಲಿದ್ದು, ಜುಲೈ 10-11ರಂದು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿ ‘‘ಮೂರು ದೇಶಗಳ ಪ್ರಧಾನಿ ಪ್ರವಾಸ ಭಾರತದ ಜಾಗತಿಕ ದೃಷ್ಟಿಕೋನಕ್ಕೆ ಹೊಸ ವೇಗ ನೀಡಲಿದೆ,’’ ಎಂದು ತಿಳಿಸಲಾಗಿದೆ.