ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಮಗಳೆಂಬ ಮುಗಿಲು ಈಗ ಮಡಿಲು ಸೇರೋ ಹೊತ್ತು; ಅಡೆತಡೆಗಳನ್ನು ದಾಟಿ ದಿವಾನ್ ಮನೆ ಸೇರಲಿದ್ದಾಳೆ ಮಿಂಚು!

Amruthadhaare Serial: ಈಗ ಹೊಸ ಪ್ರೋಮೋ ಔಟ್‌ ಆಗಿದೆ. ರೌಡಿಗಳನ್ನು ಸೆದೆಬಡಿದು ಮಗಳನ್ನು ಭೂಮಿ ಮಡಿಲಿಗೆ ಹಾಕಿದ್ದಾನೆ ಗೌತಮ್‌. ಜೈದೇವ್‌ಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ. ಆದರೆ ಈ ಬಾರಿಯಾದರೂ ಈ ಹಿನ್ನೆಡೆ ಕಥೆಯ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಾ..? ಅಥವಾ ಬೇರೆ ಯಾವುದಾದರೂ ಐಡಿಯಾ ನಿರ್ದೇಶಕರಿಗೆ ಹೊಳೆದು ಧಾರಾವಾಹಿಯ ಕಥೆ ಮತ್ತೆ ಮುಂದುವರೆಯುತ್ತಾ..?ಅನ್ನೋದು ವೀಕ್ಷಕಕರ ಪ್ರಶ್ನೆ.

Amruthadhaare Serial: ಮಗಳೆಂಬ ಮುಗಿಲು ಈಗ ಮಡಿಲು ಸೇರೋ ಹೊತ್ತು!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jun 17, 2026 10:16 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amrithadhaare serial ) ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಪ್ರೋಮೋ ನೋಡಿ ವೀಕ್ಷಕರು ಮುಕ್ತಾಯ ಆಗೋದು ಕನ್‌ಫರ್ಮ್‌ ಅಂತಿದ್ದಾರೆ. ಮಿಂಚು (Minchu) ಈಗ ಅಮ್ಮನ ಮಡಿಲು ಸೇರಿದ್ದಾಳೆ. ಗೌತಮ್‌ (Gowtham) ಮಗಳನ್ನು ಕಾಪಾಡಿದ್ದಾನೆ.

ರಿಪೋರ್ಟ್‌ ಅದಲು ಬದಲು

ಕಡೆ ಜೈದೇವ್ ಕಪಿಮುಷ್ಠಿಯಲ್ಲಿ ಸಿಲುಕಿ, ಮಾವ ಲಕ್ಷ್ಮೀಕಾಂತ ವಿಲವಿಲ ಒದ್ದಾ ಅಂತೂ ತಪ್ಪಿಸಿಕೊಂಡು ಬಂದಿದ್ದ, ಮಿಂಚುಳ ಸತ್ಯವನ್ನು ರಿವೀಲ್‌ ಮಾಡಿದ್ದಾರೆ. ಇದರ ಜೊತೆಗೆ ''ಅಣ್ಣಯ್ಯ'' ಶಿವು.. ಪಾರು ಮತ್ತು ಕರ್ಣನ ಪುನರಾಗಮನ ಆಗಿತ್ತು.

ಮಿಂಚುನ ನಕಲಿ ಅಪ್ಪ-ಅಮ್ಮ ಬಂದ ಹಿನ್ನೆಲೆ ಗೌತಮ್‌ ಕೆಲ ಕಾಲ ಪೊಲೀಸರ ಅತಿಥಿಯಾಗಿದ್ದ. ಆಗ ಡಿಎನ್ಎ ಪರೀಕ್ಷೆಯ ಬೇಡಿಕೆ ಇಟ್ಟಿದ್ದ. ಇದರಿಂದ ನಕಲಿ ಅಪ್ಪ ಅಮ್ಮನಿಗೆ ನಡುಕ ಶುರುವಾಗಿತ್ತು. ಕೊನೆಗೂ ಅದೇಗೋ ರಿಪೋರ್ಟ್‌ ಅದಲು ಬದಲು ಮಾಡಿದ್ದಾರೆ.

ಇದನ್ನೂ ಓದಿ: Actor Doddanna: ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೊಡ್ಡಣ್ಣ ದೂರು

ಈ ವಿಚಾರ ಕರ್ಣ ಗೌತಮ್‌ಗೆ ಹೇಳಿದ್ದಾನೆ. ಲಕ್ಷ್ಮೀಕಾಂತ್‌ ಕೂಡ ಬಂದು ಹೇಳಿದ ಮೇಲೆ ತಮ್ಮ ಮಗಳು ಅನ್ನೋದು ಗೌತಮ್‌ಗೆ ಗೊತ್ತಾಗಿದೆ. ಕೈಮೇಲಿನ ಮಚ್ಚೆಯ ಕುರಿತು ಕೂಡ ಕರ್ಣ ವಿಚಾರಿಸಿದ್ದು ಗೌತಮ್ ತ್ರಿಶೂಲ ಇರುವುದಾಗಿ ಹೇಳುತ್ತಾನೆ.

ಆಗ ನೂರಕ್ಕೆ ನುರು % ಅವಳೇ ನಿಮ್ಮ ಮಗಳು ಎಂದು ಕರ್ಣ ಹೇಳುತ್ತಾನೆ. ಆದರೆ ಅದಕ್ಕೂ ಮುಂಚೆ ಪರಿಸ್ಥಿತಿ ಕೈ ಮೀರಿ ಹೋಗಿದೆ. ಮಿಂಚುಳನ್ನು ನಕಲಿ ತಂದೆ ತಾಯಿ ಜೊತೆ ಕಳಿಸಿಕೊಟ್ಟಿದ್ದಾರೆ ಭೂಮಿ ಹಾಗೂ ಗೌತಮ್‌.



ಜೈದೇವ್‌ ಕಥೆ ಏನು?

ಈಗ ಹೊಸ ಪ್ರೋಮೋ ಔಟ್‌ ಆಗಿದೆ. ರೌಡಿಗಳನ್ನು ಸೆದೆಬಡಿದು ಮಗಳನ್ನು ಭೂಮಿ ಮಡಿಲಿಗೆ ಹಾಕಿದ್ದಾನೆ ಗೌತಮ್‌. ಜೈದೇವ್‌ಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ. ಆದರೆ ಈ ಬಾರಿಯಾದರೂ ಈ ಹಿನ್ನೆಡೆ ಕಥೆಯ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಾ..? ಅಥವಾ ಬೇರೆ ಯಾವುದಾದರೂ ಐಡಿಯಾ ನಿರ್ದೇಶಕರಿಗೆ ಹೊಳೆದು ಧಾರಾವಾಹಿಯ ಕಥೆ ಮತ್ತೆ ಮುಂದುವರೆಯುತ್ತಾ..?ಅನ್ನೋದು ವೀಕ್ಷಕಕರ ಪ್ರಶ್ನೆ.

ದಿಯಾ ಕೊಲೆ ಕೇಸ್‌ನಲ್ಲಿ ಜೈದೇವ್ ಜೈಲು ಪಾಲಾಗಲು ಇನ್ನೆಷ್ಟು ದಿನ ಬೇಕು ಎನ್ನುವುದನ್ನು ಕೂಡ ನೋಡಬೇಕಿದೆ.ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Amruthadhaare Serial: ಜೆಡಿ ಜೈದೇವ್‌ ಸಂಚುಗಳಿಗೆ ಕೊನೆ ಯಾವಾಗ? ಅಮೃತಧಾರೆ ಧಾರವಾಹಿಯಲ್ಲಿ ರೋಚಕ ಟ್ವಿಸ್ಟ್

ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ