ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Actor Doddanna: ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೊಡ್ಡಣ್ಣ ದೂರು

Actor Doddanna: ಬದುಕಿರುವಾಗಲೇ ಸತ್ತಿದ್ದಾರೆ ಎಂದು ಪೋಸ್ಟ್ ಹಂಚಲಾಗಿದೆ. ಎಐ ಮೂಲಕ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದರಿಂದ ನನಗೆ ಮಾನಸಿಕ ನೋವು ಹಾಗೂ ಅತೀವ ಆಘಾತ ಉಂಟಾಗಿದೆ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ವದಂತಿ ಹರಡಿದವರ ಮೇಲೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ ನಟ ದೊಡ್ಡಣ್ಣ.

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೊಡ್ಡಣ್ಣ ದೂರು

ನಟ ದೊಡ್ಡಣ್ಣ -

Yashaswi Devadiga
Yashaswi Devadiga Jun 17, 2026 9:34 AM

ಹಿರಿಯ ನಟ ದೊಡ್ಡಣ್ಣ (doddanna) ನಿಧನ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಸೈಬರ್ ಠಾಣೆ (Cyber station) ಮೆಟ್ಟಿಲೇರಿದ್ದಾರೆ ನಟ ದೊಡ್ಡಣ್ಣ. ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ ದೊಡ್ಡಣ್ಣ .

ತನಿಖೆ ಶುರು

ಬದುಕಿರುವಾಗಲೇ ಸತ್ತಿದ್ದಾರೆ ಎಂದು ಪೋಸ್ಟ್ ಹಂಚಲಾಗಿದೆ. ಎಐ ಮೂಲಕ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದರಿಂದ ನನಗೆ ಮಾನಸಿಕ ನೋವು ಹಾಗೂ ಅತೀವ ಆಘಾತ ಉಂಟಾಗಿದೆ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ವದಂತಿ ಹರಡಿದವರ ಮೇಲೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಇದನ್ನೂ ಓದಿ: Samantha Ruth Prabhu: ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’!

ಜೂನ್ 15 ನೇ ತಾರೀಕು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿ ಅಪರಿಚಿತ ಆರೋಪಿಗಳ ಮೇಲೆ ಸೈಬರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ, ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಉತ್ತರ ವಿಭಾಗದ ಸೈಬರ್ ಪೊಲೀಸರಿಂದ ತನಿಖೆ ಶುರು ಆಗಿದೆ.

ಇದಕ್ಕೂ ಮುಂಚೆ ವಿಡಿಯೋ ಮೂಲಕ ನಟ ಹೇಳಿದ್ದೇನು?

“ಅನ್ನದಾತರು, ಆಶ್ರಯದಾತರಾದ ಕನ್ನಡ ನಾಡಿನ ಎಲ್ಲಾ ನನ್ನ ತಂದೆ-ತಾಯಂದಿರಿಗೆ ನಿಮ್ಮ ದೊಡ್ಡಣ್ಣನ ಭಕ್ತಪೂರ್ವಕವಾದಂತಹ ನಮಸ್ಕಾರಗಳು. ನಿಮಗೆ ಒಂದು ವಿಷಯವನ್ನ ನಾನು ತಿಳಿಸಲೇಬೇಕು. ಏನು ಅಂದ್ರೆ, ಇವತ್ತು ಬೆಳ ಬೆಳಗ್ಗೆನೇ ನಾನು ಎದ್ದೇಳೋಕು ಮುಂಚೆಯೇ ಯಾರೋ ಅವಿವೇಕಿಗಳು ನಾನು ನಿಧನವಾಗಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ. ಅದು ಶುದ್ದ ಸುಳ್ಳು, ನಾನು ಆರೋಗ್ಯವಾಗಿದ್ದೇನೆ, ನೆಮ್ಮದಿಯಾಗಿದ್ದೇನೆ.

ಹಾಗಾಗಿ, ಈ ವಿಷಯವನ್ನ ತಮಗೆಲ್ಲಾ ತಿಳಿಸಬೇಕು. ನನಗೆ ಬೆಳಗ್ಗೆಯಿಂದ ಎಲ್ಲರೂ ಕರೆ ಮಾಡ್ತಿದ್ರು, ಅದಕ್ಕೋಸ್ಕರ ಈ ವಿಡಿಯೋ ಮಾಡ್ತಿದ್ದೇನೆ. ನಾನು ಆರೋಗ್ಯವಾಗಿದ್ದೇನೆ. ಎಲ್ಲಿಯವರೆಗೂ ನಿಮ್ಮ ಆಶೀರ್ವಾದ ಚೆನ್ನಾಗಿರುತ್ತೋ, ನಾನು ನೂರ್ಕಾಲ ಚೆನ್ನಾಗಿರ್ತೇನೆ. ನನ್ನ ಮೇಲೆ ಈ ರೀತಿ ಪ್ರೀತಿ-ವಿಶ್ವಾಸ ಇಟ್ಟಿದ್ದಕ್ಕೆ ಎಲ್ಲರಿಗೂ ವಂದನೆ. ಆ ಕಿಡಿಗೇಡಿಗಳನ್ನಂತೂ ಬಿಡಲ್ಲ, ಬೆನ್ನತ್ತಿ ಅವರಿಗೆ ಒಂದು ಪನೀಷ್‌ಮೆಂಟ್‌ ಮಾಡಿಸ್ತೇನೆ” ಎಂದಿದ್ದರು ದೊಡ್ಡಣ್ಣ.

ಇದನ್ನೂ ಓದಿ: Darshan Movie: ಈ ವಾರ ದರ್ಶನ್ ನಟನೆಯ ಈ ಹಿಟ್‌ ಮೂವಿ ರೀ-ರಿಲೀಸ್!

ಫೇಸ್‌ಬುಕ್‌ನ ಪೇಜ್‌ವೊಂದರಲ್ಲಿ ಈ ಸುಳ್ಳು ಸುದ್ದಿಯನ್ನ ಹರಿಬಿಡಲಾಗಿತ್ತು. ಇದು ಸಂಪೂರ್ಣ ನಕಲಿ ಮತ್ತು ಎಡಿಟೆಡ್‌ ಪೋಸ್ಟರ್‌ ಆಗಿದ್ದು, ಸಾರ್ವಜನಿಕರು ಇಂತಹ ಯಾವುದೇ ಸುಳ್ಳು ಸುದ್ದಿಯನ್ನ ನಂಬಬಾರದು ಎಂದು ದೊಡ್ಡಣ್ಣ ಮನವಿ ಮಾಡಿದ್ದರು.