ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shubha Poonja: ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ವಿಚ್ಛೇದನಕ್ಕೆ ಮೊರೆ ಹೋದ್ರಾ ದಂಪತಿ?

Shubha Poonja: ಪರಸ್ಪರ ಒಪ್ಪಿಗೆ ಮೇರೆಗೆ ಕೋರ್ಟ್​ಗೆ ದಂಪತಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸುಮಂತ್​ ಬಿಲ್ಲವ ಎಂಬುವವರನ್ನ ಮದುವೆಯಾಗಿದ್ದ ಶುಭಾ ಪೂಂಜಾ. ಉಡುಪಿ ಮೂಲದ ಉದ್ಯಮಿ​​ ಸುಮಂತ್ ಅವರನ್ನು ಶುಭಾ​​ ಕೈಹಿಡಿದಿದ್ದರು. 2022 ಜನವರಿಯಲ್ಲಿ ಶುಭಾ ಪೂಂಜಾ ಮತ್ತು ಸುಮಂತ್ ಮದುವೆಯಾಗಿದ್ದರು.​​ ನಾಲ್ಕೇ ವರ್ಷದಲ್ಲಿ ವಿಚ್ಛೇದನ ಪಡೆಯಲು ದಂಪತಿ ಮುಂದಾಗಿದೆ.

Shubha Poonja: ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು?

ನಟಿ ಶುಭಾ ಪೂಂಜಾ -

Yashaswi Devadiga
Yashaswi Devadiga Jun 4, 2026 10:07 AM

ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿ ಶುಭಾ ಪೂಂಜಾ (Shubha Poonja) ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಲು ದಂಪತಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ವಿಚ್ಛೇದನ ಕೋರಿ ಕೋರ್ಟ್​​ ಮೆಟ್ಟಿಲೇರಿದೆ ಜೋಡಿ ಎನ್ನಲಾಗಿದೆ.

ಪರಸ್ಪರ ಒಪ್ಪಿಗೆ ಮೇರೆಗೆ ಕೋರ್ಟ್​ಗೆ ದಂಪತಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸುಮಂತ್​ ಬಿಲ್ಲವ ಎಂಬುವವರನ್ನ ಮದುವೆಯಾಗಿದ್ದ ಶುಭಾ ಪೂಂಜಾ. ಉಡುಪಿ ಮೂಲದ ಉದ್ಯಮಿ​​ ಸುಮಂತ್ ಅವರನ್ನು ಶುಭಾ​​ ಕೈಹಿಡಿದಿದ್ದರು. 2022 ಜನವರಿಯಲ್ಲಿ ಶುಭಾ ಪೂಂಜಾ ಮತ್ತು ಸುಮಂತ್ ಮದುವೆಯಾಗಿದ್ದರು.​​

ಇದನ್ನೂ ಓದಿ: Peddi Movie Twitter Review: ರಾಮ್‌ಚರಣ್‌ ʻಪೆದ್ದಿʼ ಸಿನಿಮಾಗೆ ಫ್ಯಾನ್ಸ್‌ ಬಹುಪರಾಕ್‌! ಶಿವಣ್ಣ ಪಾತ್ರಕ್ಕೂ ಮೆಚ್ಚುಗೆ

ನಾಲ್ಕೇ ವರ್ಷದಲ್ಲಿ ವಿಚ್ಛೇದನ ಪಡೆಯಲು ದಂಪತಿ ಮುಂದಾಗಿದೆ. ವಿಚ್ಛೇದನಕ್ಕೆ ಕಾರಣ ಬಹಿರಂಗ ಪಡಿಸಲು ಸುಮಂತ್​​ ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ ವಿಚಾರಣೆ ವೇಳೆ ಇಬ್ಬರೂ ಕೋರ್ಟ್​​ಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕನ್ನಡಪರ ಹೋರಾಟಗಾರ ಹಾಗೂ ಉದ್ಯಮಿಯಾಗಿರುವ ಉಡುಪಿ (Udupi) ಮೂಲದ ಸುಮಂತ್ ಬಿಲ್ಲವ ಮತ್ತು ನಟಿ ಶುಭಾ ಪೂಂಜಾ ಅವರು ಕೆಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ನಂತರ 2022ರ ಜನವರಿ 5 ರಂದು ಶುಭಾ ಪೂಂಜಾ ಅವರ ಸ್ವಂತ ಊರಿನಲ್ಲಿ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮೊಗ್ಗಿನ ಮನಸ್ಸು, ಚಂಡ ಸೇರಿದಂತೆ ಹಲವು ಯಶಸ್ವಿ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಬಿಗ್ ಬಾಸ್ ಸೀಸನ್ 8 ರಲ್ಲೂ ಸಖತ್ ಮನರಂಜನೆ ನೀಡಿದ್ದ ಶುಭಾ ಪೂಂಜಾ ಅವರ ಈ ನಿರ್ಧಾರ ಅವರ ಫ್ಯಾನ್ಸ್‌ಗೆ ಶಾಕ್‌ ತಂದಿದೆ.

ನಟಿ ಶುಭಾ ಪೂಂಜಾ ʻಕಲರ್ಸ್‌ ಕನ್ನಡʼ ವಾಹಿನಿಯ ʻಬಾಯ್ಸ್‌ ವರ್ಸಸ್‌ ಗರ್ಲ್ಸ್‌ʼ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Ram Charan: ʻಪೆದ್ದಿʼ ಸಿನಿಮಾ ನೋಡಿ ರಾಮ್‌ಚರಣ್‌ ಪತ್ನಿ ಹರ್ಷೋದ್ಗಾರ! ವಿಡಿಯೋ ವೈರಲ್‌

ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಶುಭಾ ಪೂಂಜಾ ಅವರು ಆಗಾಗ ಒಂದಲ್ಲ ಒಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಾರ್ಚ್‌ 6ರಂದು ಶುಭಾ ಪೂಂಜಾ ಅವರು ತಮ್ಮ ತಾಯಿ ನಿಧನರಾಗಿದ್ದಾರೆ ಎಂದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದರು.