ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಕೆಡಿ ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌; ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ!

Amruthadhaare Serial: ಮಿಂಚು ಕಥೆಯಲ್ಲಿ ಬಹುದೊಡ್ಡ ಟ್ವಿಸ್ಟ್‌ ಪಡೆದುಕೊಂಡಿದೆ. ಜೈದೇವ್‌ ಆಟಕ್ಕೆ ಭೂಮಿ ಹಾಗೂ ಗೌತಮ್‌ ಬಲಿಯಾಗುತ್ತಿದ್ದಾರೆ. ಮಿಂಚು ತಮ್ಮ ಮಗಳು ಎಂದು ತಿಳಿದ ಭೂಮಿಕಾ-ಗೌತಮ್ ಆಕೆಯನ್ನು ದತ್ತು ನೀಡಲು ಮುಂದಾಗಿದ್ದಾರೆ. ಆದರೆ, ಜೈದೇವ್‌ನ (Jaidev) ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮುಂದೆನಾಗತ್ತೆ?

ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌; ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jun 3, 2026 10:10 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಮಿಂಚು ಕಥೆಯಲ್ಲಿ ಬಹುದೊಡ್ಡ ಟ್ವಿಸ್ಟ್‌ ಪಡೆದುಕೊಂಡಿದೆ. ಜೈದೇವ್‌ ಆಟಕ್ಕೆ ಭೂಮಿ ಹಾಗೂ ಗೌತಮ್‌ (Gowtham Bhoomika) ಬಲಿಯಾಗುತ್ತಿದ್ದಾರೆ. ಮಿಂಚು ತಮ್ಮ ಮಗಳು ಎಂದು ತಿಳಿದ ಭೂಮಿಕಾ-ಗೌತಮ್ ಆಕೆಯನ್ನು ದತ್ತು ನೀಡಲು ಮುಂದಾಗಿದ್ದಾರೆ. ಆದರೆ, ಜೈದೇವ್‌ನ (Jaidev) ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮುಂದೆನಾಗತ್ತೆ?

ಮಿಂಚು ಕಾಣೆ

ಜೈದೇವ್‌ ಬಳಿ ಮಿಂಚು ಇದ್ದಾಳೆ. ಮಿಂಚು ಸ್ಕೂಲ್‌ನಿಂದ ನೇರವಾಗಿ ಮನೆಯಿಂದ ಆಚೆ ಹೋಗಲು ನಿರ್ಧಾರ ಮಾಡಿದ್ದಾಳೆ. ಮಹಿಮಾ ಜೊತೆ ಇರಲು ಇಷ್ಟ ಪಡದ ಮಿಂಚು ಮನೆಯನ್ನೇ ಬಿಟ್ಟು ಹೋಗಿದ್ದಾಳೆ. ಈಗ ಸ್ಕೂಲ್‌ನಿಂದ ಮಿಂಚು ಕಾಣೆಯಾಗಿದ್ದಾಳೆ ಎಂದು ಕಾಲ್‌ ಬಂದಿದೆ.

ಅಷ್ಟೊತ್ತಿಗೆ ಗೌತಮ್‌ ಮನೆಗೆ ಅಪರಚಿತ ದಂಪತಿ ಬಂದಿದ್ದಾರೆ. ಮಿಂಚು ದತ್ತು ಕೊಡುತ್ತಿರುವ ಸಂದರ್ಭದಲ್ಲಿ ದಿವಾನ್ ಮನೆಗೆ ಇಬ್ಬರ ಆಗಮನವಾಗಿದೆ. ಈ ಇಬ್ಬರು ಮಿಂಚು ನಮ್ಮ ಮಗಳು ಎಂದು ಹೇಳಿದ್ದಾರೆ. ನಾವು ಮಗುವನ್ನು ಬಿಟ್ಟು ಹೋಗಿದ್ದೀವಿ.

ಯಾರೋ ಆಕೆಯನ್ನು ಸಾಕಿದ್ದರು. ನಂತರ ಅವರು ವಿದೇಶಕ್ಕೆ ತೆರಳುವಾಗ ಮಗಳನ್ನು ಬಿಟ್ಟು ಹೋಗಿದ್ದರು. ಆನಂತರ ಯಾರೋ ಡ್ರೈವರ್ ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಜೈದೇವ್ ಹೇಳಿಕೊಟ್ಟಂತೆ ಹೇಳಿದ್ದಾರೆ.

ಇದನ್ನೂ ಓದಿ: Ranveer Singh: 'ಡಾನ್ 3' ವಿವಾದ: ರಣ್​​ವೀರ್‌ ಸಿಂಗ್‌ಗೆ ಕಂಗನಾ ಬೆಂಬಲ

ಭೂಮಿಕಾ-ಗೌತಮ್ ಬೇಡ ಅಂದ್ರೂ ಮಿಂಚು ಶಾಲೆಗೆ ಹೋಗಿದ್ದಳು. ಈ ವೇಳೆ ಮಿಂಚುಳನ್ನು ಜೈದೇವ್‌ ಕರೆದುಕೊಂಡು ಹೋಗಿದ್ದಾನೆ. ಮಿಂಚು ಜನ್ಮರಹಸ್ಯ ತಿಳಿದ್ರೆ ಮಾತ್ರ ಕತೆ ಕೊನೆಯಾಗಬಹುದು.

ಮತ್ತೊಂದು ಕಡೆ ಮಿಂಚು ಹಿನ್ನೆಲೆ ಜೈದೇವ್‌ಗೆ ಗೊತ್ತಾಗಬಾರದೆಂದು ಲಕ್ಷ್ಮೀಕಾಂತ್ ಪಡಬಾರದ ಕಷ್ಟವನ್ನೆಲ್ಲಾ ಪಡುತ್ತಿದ್ದಾನೆ. ಆದರೆ, ಸುಮ್ಮನೆ ಇರದ ಪಾರ್ಥ ನೇರಾ ಜೈದೇವ್ ಬಳಿ ಮಹಿಮಾ ಅನುಭವಿಸುತ್ತಿರುವ ನೋವಿನ ವಿಚಾರ ಪ್ರಸ್ತಾಪಿಸಿದ್ದಾನೆ. ಜೈದೇವ್‌ಗೆ ಇದರಿಂದ ಹಾಲು ಕುಡಿದಷ್ಟೇ ಸಂತೋಷವಾಗಿದ್ದು ಮಾವ ಲಕ್ಷ್ಮೀಕಾಂತ್ ಎದುರು ಗಹಗಹಿಸಿದ್ದಾನೆ.



ಲಕ್ಷ್ಮೀಕಾಂತ್ ಮನದಲ್ಲಿಯೇ ನೊಂದುಕೊಂಡು ಅಯ್ಯೋ ಇದೇನಾಗೋಯ್ತು, ಸ್ವಂತ ಮಗು ಮತ್ತೆ ದೂರವಾಗ್ತಾಳಾ ಎಂದು ಗೊಣಗುತ್ತಾನೆ. ಲಕ್ಷ್ಮೀಕಾಂತ್ ಆಡಿದ ಈ ಮಾತು ಜೈದೇವ್ ಕಿವಿಗೆ ಬಿದ್ದಿದ್ದು ಲಕ್ಷ್ಮೀಕಾಂತನ ಕೊರಳ ಪಟ್ಟಿ ಹಿಡಿದು ಕೇಳಿದ್ದಾನೆ. ಮಿಂಚು ರಹಸ್ಯ ಭೇದಿಸುವಲ್ಲಿ ಜೈದೇವ್ ಕೊನೆಗೂ ಯಶಸ್ವಿಯಾಗಿದ್ದಾನೆ.

ಸದ್ಯ ಜೈದೇವ್‌ಗೆ ಮಿಂಚುನೇ ಗೌತಮ್ ಮತ್ತು ಭೂಮಿಕಾ ಮಗಳೆನ್ನುವ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆ ಮಿಂಚು ಪ್ರಾಣಕ್ಕೆ ಕುತ್ತು ಎದುರಾಗುವ ಸಾಧ್ಯತೆ ಇದೆ. ಇನ್ನು ಲಕ್ಷ್ಮೀಕಾಂತ್ ಕಥೆ ಗೌತಮ್‌ಗೆ ಇಲ್ಲಿಯವರೆಗೆ ಗೊತ್ತಾಗಿಲ್ಲ. ಗೌತಮ್‌ ಕೈಗೆ ಲಕ್ಷ್ಮೀಕಾಂತ್ ಸಿಕ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Amruthadhaare Serial: ಅಪ್ಪನಾಗಿ ಸೋತೆ ಎಂದು ಭಾವುಕನಾದ ಗೌತಮ್‌; ಮತ್ತೆ ಜೆಡಿ ಅಟ್ಟಹಾಸ ಶುರು!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ