ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhaare Serial : ಕಾಣೆಯಾದ ಗೌತಮ್‌ ಅಜ್ಜಿ! ಜಯದೇವ್‌ ಕುತಂತ್ರ, ದಿವಾನ್‌ ಕುಟುಂಬಕ್ಕೆ ಶಾಕಿಂಗ್‌ ಸುದ್ದಿ?

Amruthadhaare :ಭಾಗ್ಯಮ್ಮಗೆ ಮಾತು ಬಂದಾಯ್ತು. ಮಗ ಸೊಸೆಯ ಸಂಸಾರ ಸರಿ ಆಗಬೇಕು ಅನ್ನೋ ಪಣ ತೊಟ್ಟಿದ್ದಾಳೆ. ಜೈದೇವ್‌ಗೆ ಆಸ್ತಿಯದ್ದೇ ಚಿಂತೆ. 600 ಕೋಟಿ ರೂಪಾಯಿ ಸಾಲ ಇದೆ. ಹೀಗಾಗಿ ಜಯದೇವ್‌, ಶಕುಂತಲಾ ಎಲ್ಲ ಬ್ಯಾಂಕ್‌ ಅಕೌಂಟ್‌ ಆಸ್ತಿಯನ್ನು ಫ್ರೀಜ್‌ ಮಾಡಲಾಗಿದೆ. ಅಜ್ಜಿಯ ಆಸ್ತಿಯನ್ನು ಬಳಸಿಕೊಂಡು, ಸಾಲ ತೀರಿಸಬೇಕು ಎಂದು ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ. ಆದರೀಗ ಅಜ್ಜಿ ಏಕಾಏಕಿ ಎಲ್ಲಿಯೂ ಕಾಣಿಸುತ್ತಿಲ್ಲ. ಅಜ್ಜಿ ಕಥೆ ಏನಾಯ್ತು?

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ದಿನಕ್ಕೊಂದು ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ (Jaidev) ಕುತಂತ್ರ ಹೆಚ್ಚಾಗುತ್ತಿದೆ. ಭಾಗ್ಯಮ್ಮಗೆ ಮಾತು ಬಂದಾಯ್ತು. ಮಗ ಸೊಸೆಯ ಸಂಸಾರ ಸರಿ ಆಗಬೇಕು ಅನ್ನೋ ಪಣ ತೊಟ್ಟಿದ್ದಾಳೆ. ಜೈದೇವ್‌ಗೆ ಆಸ್ತಿಯದ್ದೇ ಚಿಂತೆ. 600 ಕೋಟಿ ರೂಪಾಯಿ ಸಾಲ ಇದೆ. ಹೀಗಾಗಿ ಜಯದೇವ್‌, ಶಕುಂತಲಾ ಎಲ್ಲ ಬ್ಯಾಂಕ್‌ ಅಕೌಂಟ್‌ (Bank account), ಆಸ್ತಿಯನ್ನು ಫ್ರೀಜ್‌ ಮಾಡಲಾಗಿದೆ. ಅಜ್ಜಿಯ ಆಸ್ತಿಯನ್ನು ಬಳಸಿಕೊಂಡು, ಸಾಲ ತೀರಿಸಬೇಕು ಎಂದು ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ. ಆದರೀಗ ಅಜ್ಜಿ ಏಕಾಏಕಿ ಎಲ್ಲಿಯೂ ಕಾಣಿಸುತ್ತಿಲ್ಲ. ಅಜ್ಜಿ ಕಥೆ ಏನಾಯ್ತು?

ಗೌತಮ್‌ ಮನೆಯಿಂದ ಆಚೆ ಬರುವಾಗ ಎಲ್ಲ ಆಸ್ತಿಯನ್ನೂ ಜಯದೇವ್‌ಗೆ ನೀಡಿದ್ದ. ಈಗ ಸಾಲ ಸಿಕ್ಕಾಪಟ್ಟೆ ಆಗಿದ್ದರಿಂದ ಸಾಲ ತೀರಿಸಬೇಕು ಎಂದು ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ. ವಕೀಲರ ಸಹಾಯ ಪಡೆದು ಫೇಕ್‌ ಅಜ್ಜಿಯನ್ನು ಕ್ರಿಯೇಟ್‌ ಮಾಡಲು ರೆಡಿ ಆಗಿದ್ದಾನೆ. ಅಷ್ಟೇ ಅಲ್ಲದೆ ಅಜ್ಜಿಗೆ ನಿದ್ದೆ ಮಾತ್ರೆ ಹಾಕಿ ಆಸ್ತಿ ಪೇಪರ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದಾನೆ. ಆದರೆ ಈಗ ಏಕಾ ಏಕಿ ಅಜ್ಜಿ ಮನೆಯಲ್ಲಿ ಕಾಣಿಸುತ್ತಿಲ್ಲ.

ಇದನ್ನೂ ಓದಿ: 'ಯಜಮಾನ' ಧಾರಾವಾಹಿಗೆ ಎಂಟ್ರಿ ಕೊಟ್ಟ ನಟಿ ಯಮುನಾ ಶ್ರೀನಿಧಿ; ಯಾವ ಪಾತ್ರ ಮಾಡ್ತಿದ್ದಾರೆ ಗೊತ್ತಾ?

ಅಜ್ಜಿ ಮನೆಯಲ್ಲಿ ಇಲ್ಲ

ಭಾಗ್ಯಮ್ಮಳಿಗೆ ಈಗ ಮಗ ಸೊಸೆ ದೂರ ಆಗಿರೋ ವಿಚಾರ ಗೊತ್ತಾಗಿದೆ. ಭಾಗ್ಯಮ್ಮ ಇವರಿಬ್ಬರ ಸಂಸಾರ ಸರಿ ಮಾಡಬೇಕೆಂಬ ಪಣ ತೊಟ್ಟಿದ್ದಾಳೆ. ಏಕಾಏಕಿ ಮಾಯವಾಗಿದ್ದ ಅಜ್ಜಿ ಎಂಟ್ರಿ ಕೊಟ್ಟಿದ್ದಾರೆ. ಶಕುನಿ ಮಾವ ಈ ವಿಚಾರವನ್ನ ಆನಂದ್‌ಗೆ ತಿಳಿಸಿದ್ದಾನೆ. ಭಾಗ್ಯಮ್ಮ ಈ ಸುದ್ದಿ ಕೇಳಿ ಖುಷಿ ಆಗಿದ್ದಾಳೆ.ಅತ್ತೆ ಬಂದಿದ್ದಾರೆ ಅಂದ್ರೆ ನಮಗೆಲ್ಲ ನೂರು ಆನೆ ಬಲ ಬಂದಗಾಯ್ತು ಎಂದಿದ್ದಾಳೆ ಭಾಗ್ಯ.



ಭಾಗ್ಯಮ್ಮ ತನ್ನ ಅತ್ತೆಯನ್ನು ನೋಡಬೇಕು ಎಂದು ಆಸೆ ಪಡುತ್ತಿದ್ದಾಳೆ. ಆದರೆ ಅಜ್ಜಿ ಮನೆಯಿಂದ ಹೊರಬರೋದು ಸುಲಭ ಇಲ್ಲ. ಇನ್ನೊಂದು ಕಡೆ ಅಜ್ಜಿಯನ್ನು ಕರೆದುಕೊಂಡು ಬನ್ನಿ ಎಂದು ಲಕ್ಷ್ಮೀಕಾಂತ್‌ಗೆ ಹೇಳಲಾಗಿದೆ. ಲಕ್ಷ್ಮೀಕಾಂತ್‌ ಅಜ್ಜಿಯನ್ನು ಆನಂದ್‌ ಮನೆಗೆ ಕರೆದುಕೊಂಡು ಬರಬೇಕು ಎಂದುಕೊಂಡಿದ್ದನು. ಆದರೆ ಅಜ್ಜಿ ಮನೆಯಲ್ಲಿ ಇಲ್ಲ.

ಲಕ್ಷ್ಮೀಕಾಂತ್‌ ಎಷ್ಟೇ ಹುಡುಕಿದರೂ ಕೂಡ ಅಜ್ಜಿ ಕಾಣಿಸುತ್ತಿಲ್ಲ. ನಿದ್ದೆ ಮಾತ್ರೆ ಹಾಕಿ ಅವನು ಅಜ್ಜಿ ಬಳಿ ಥಂಬ್‌ ಇಂಪ್ರೆಶನ್ ಹಾಕಿಸಿಕೊಂಡಿದ್ದನು.‌ ಆಮೇಲೆ ಅಜ್ಜಿ ಕಾಣಿಸಲೇ ಇಲ್ಲ. ಅಜ್ಜಿಯನ್ನು ಕಿಡ್ನ್ಯಾಪ್‌ ಮಾಡಲಾಗಿದೆಯಾ ಎಂಬ ಸಂದೇಹ ಕೂಡ ಬಂದಿದೆ.

ಅಜ್ಜಿಯಿಂದ ಗೌತಮ್-ಭೂಮಿ ಒಂದಾಗುತ್ತಾರಾ ಎಂಬ ಪ್ರಶ್ನೆ ಇರುವಾಗಲೇ ಅಜ್ಜಿ ಕಾಣಿಸ್ತಿಲ್ಲ. ಅಥವಾ ಜೈದೇವ್‌ ಅಜ್ಜಿಯ ಪ್ರಾಣಕ್ಕೆ ಸಂಚಕಾರ ತಂದ್ನಾ? ಅನ್ನೋದೇ ಈಗ ಕುತೂಹಲ.

ವಠಾರದವರು ಸೇರಿಕೊಂಡು ಭೂಮಿಕಾರ ಜನ್ಮದಿನವನ್ನು ಆಚರಣೆ ಮಾಡಿದ್ದಾರೆ. ಭೂಮಿಕಾ ಕೇಕ್‌ ಕಟ್‌ ಮಾಡಿದ್ದು, ಗೌತಮ್‌ ಕೇಕ್‌ ತಿನಿಸಿದ್ದಾನೆ.

ಇದನ್ನೂಓದಿ: Kannada Serial TRP: ಟಿಆರ್​ಪಿಯಲ್ಲಿ ಝೀ ಕನ್ನಡ ಧಾರಾವಾಹಿಯದ್ದೇ ಹವಾ: ನಂಬರ್ 1 ಧಾರಾವಾಹಿ ಇದೇ ನೋಡಿ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author