Kannada Serial TRP: ಕರ್ಣ ನಂಬರ್ 1, ಅಮೃತಧಾರೆ ನಂಬರ್ 2: ಬಿಗ್ ಬಾಸ್ಗೆ ಎಷ್ಟು ಟಿಆರ್ಪಿ?
ಕಳೆದ ಕೆಲವು ವಾರಗಳಿಂದ ಭರ್ಜರಿ ಟ್ವಿಸ್ಟ್-ಟರ್ನ್ ಮೂಲಕ ನಗುವಿನ ಚಟಾಕಿ ಹಾರಿಸುತ್ತಿರುವ ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಟಿಆರ್ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಕಳೆದ ವಾರ ನಂಬರ್ ಒನ್ ಸ್ಥಾನದಲ್ಲಿದ್ದ ಈ ಸೀರಿಯಲ್ ಈಗ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಅಮೃತಧಾರೆ 9.1 ಟಿವಿಆರ್ ಪಡೆದು ಎರಡನೇ ಸ್ಥಾನದಲ್ಲಿದೆ.
 
                                Kannada Serial TRP -
 Vinay Bhat
                            
                                Oct 31, 2025 7:25 AM
                                
                                Vinay Bhat
                            
                                Oct 31, 2025 7:25 AM
                            ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಹಾಗೂ ರಿಯಾಲಿಟಿ ಶೋಗಳ ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್ಪಿ ಮೂಲಕ ತಿಳಿಯಲಿದೆ. ಇದೀಗ 42ನೇ ವಾರದ ಟಿಆರ್ಪಿ ಹೊರಬಿದ್ದಿದ್ದು, ಕಳೆದ ಮೂರು ವಾರಗಳಿಂದ ಧೂಳೆಬ್ಬಿಸುತ್ತಿರುವ ಅಮೃತಧಾರೆ ಧಾರಾವಾಹಿ ಟಿಆರ್ಪಿ ಕುಸಿದರೆ ಕರ್ಣ ಮತ್ತೆ ನಂಬರ್ ಒನ್ ಆಗಿದ್ದಾನೆ.
ಹೌದು, ಕಳೆದ ಕೆಲವು ವಾರಗಳಿಂದ ಭರ್ಜರಿ ಟ್ವಿಸ್ಟ್-ಟರ್ನ್ ಮೂಲಕ ನಗುವಿನ ಚಟಾಕಿ ಹಾರಿಸುತ್ತಿರುವ ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಟಿಆರ್ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಕಳೆದ ವಾರ ನಂಬರ್ ಒನ್ ಸ್ಥಾನದಲ್ಲಿದ್ದ ಈ ಸೀರಿಯಲ್ ಈಗ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಅಮೃತಧಾರೆ 9.1 ಟಿವಿಆರ್ ಪಡೆದು ಎರಡನೇ ಸ್ಥಾನದಲ್ಲಿದೆ. ಕಳೆದ ಕೆಲವು ವಾರಗಳಿಂದ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದ ಕರ್ಣ ಧಾರಾವಾಹಿ 10.1 ಟಿವಿಆರ್ನೊಂದಿಗೆ ಟಾಪ್ ಗೇರಿದೆ.
ಅಣ್ಣಯ್ಯ 9.0 ಟಿವಿಆರ್ ಪಡೆದು ಮೂರನೇ ಸ್ಥಾನ ಕಾಪಾಡಿಕೊಂಡಿದೆ. ಕಳೆದ ಕೆಲವು ವಾರಗಳಿಂದ ಅಣ್ಣಯ್ಯ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಧಾರಾವಾಹಿ ಮುಂದಿನ ವಾರ ನಂಬರ್ ಒನ್ ಸ್ಥಾನಕ್ಕೇರುವ ಸಾಧ್ಯತೆ ಇದೆ.
ಇತ್ತ ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಟಾಪ್ನಲ್ಲಿದೆ. ಈ ಧಾರಾವಾಹಿಗೆ 6.4 ಟಿವಿಆರ್ ಲಭಿಸಿದೆ. ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿ ಅರ್ಬಲ್ + ರೂರಲ್ ಮಾರ್ಕೆಟ್‌ನಲ್ಲಿ 5.4 ಟಿವಿಆರ್ ಸಿಕ್ಕಿದೆ. ಮುದ್ದು ಸೊಸೆ ಧಾರಾವಾಹಿ 5.2 ಟಿವಿಆರ್ ಪಡೆದು ಕಲರ್ಸ್ನ ಮೂರನೇ ಧಾರಾವಾಹಿ ಆಗಿದೆ.
BBK 12: ಅಶ್ವಿನಿ ಗೌಡ ತಾಕತ್ತಿಗೆ ಸಿಂಗಲ್ ಸಿಂಹ ಗಿಲ್ಲಿ ಸವಾಲ್
ಇನ್ನು ಬಿಗ್ ಬಾಸ್ ವಿಚಾರಕ್ಕೆ ಬಂದರೆ ಬಿಬಿಕೆ 12ರ ನಾಲ್ಕನೇ ವಾರದ ಶನಿವಾರದ ಸಂಚಿಕೆಗೆ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 7.9 ಟಿವಿಆರ್ ದಾಖಲಾಗಿದೆ. ಭಾನುವಾರದ ಸೂಪರ್ ಸಂಡೆ ವಿಥ್ ಸುದೀಪ ಸಂಚಿಕೆಗೆ 8.2 ಟಿವಿಆರ್ ಲಭಿಸಿದೆ. ವಾರದ ರಿಯಾಲಿಟಿ ಸಂಚಿಕೆಗಳಿಗೆ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 6.0 ಟಿವಿಆರ್ ಲಭಿಸಿದೆ. ಝೀ ಕನ್ನಡದಲ್ಲಿ ಪ್ರಸಾರ ಕಂಡ ಝೀ ಕುಟುಂಬ ಅವಾರ್ಡ್ ಕಾರ್ಯಕ್ರಮಕ್ಕೆ 5.4 ಟಿವಿಆರ್ ಸಿಕ್ಕಿದೆ.
