'ಯಜಮಾನ' ಧಾರಾವಾಹಿಗೆ ಎಂಟ್ರಿ ಕೊಟ್ಟ ನಟಿ ಯಮುನಾ ಶ್ರೀನಿಧಿ; ಯಾವ ಪಾತ್ರ ಮಾಡ್ತಿದ್ದಾರೆ ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಯಮುನಾ ಶ್ರೀನಿಧಿ ಅವರು ಕಲರ್ಸ್ ಕನ್ನಡದ ಯಶಸ್ವಿ ಧಾರಾವಾಹಿ ʻಯಜಮಾನʼಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ನಿರ್ವಹಿಸಲಿರುವ ಪಾತ್ರದ ಹೆಸರು ಸುಮಿತ್ರಾ. ಈ ಸೀರಿಯಲ್‌ಗೆ ಯಮುನಾ ಶ್ರೀನಿಧಿ ಅವರ ಆಗಮನದಿಂದಾಗಿ ವೀಕ್ಷಕರಲ್ಲಿ ಕುತೂಹಲ ಹೆಚ್ಚಿದೆ.
-
'ಬಿಗ್ ಬಾಸ್ ಕನ್ನಡ ಸೀಸನ್ 11ʼರ ಸ್ಪರ್ಧಿಯಾಗಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ಯಮುನಾ ಶ್ರೀನಿಧಿ. ಸದ್ಯ ಅವರು ಈಗ ಕಲರ್ಸ್ ಕನ್ನಡದ ಯಶಸ್ವಿ ಧಾರಾವಾಹಿ ʻಯಜಮಾನʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಲ್ಲಿ ತುಳಸಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ತಮ್ಮ ಅಭಿನಯ ಮತ್ತು ಪ್ರತಿಭೆಯಿಂದ ಪ್ರಸಿದ್ಧರಾದ ಯಮುನಾ, ಸುಮಿತ್ರಾ ಪಾತ್ರದ ಮೂಲಕ ಧಾರಾವಾಹಿಗೆ ಹೊಸ ಮೆರುಗು, ನಾಟಕೀಯತೆ, ಕುತೂಹಲ ಮತ್ತು ರೋಮಾಂಚನವನ್ನು ತರಲು ಸಿದ್ಧರಾಗಿದ್ದಾರೆ ಎಂಬುದು ವಾಹಿನಿಯ ಅಭಿಪ್ರಾಯ.
ಯಮುನಾ ಶ್ರೀನಿಧಿ ಮಾಡಲಿರುವ ಪಾತ್ರ ಹೇಗಿದೆ?
"ಧಾರಾವಾಹಿಯಲ್ಲಿ ಯಮುನಾ ಅಭಿನಯಿಸುವ ಪಾತ್ರದ ಹೆಸರು ಸುಮಿತ್ರಾ. ಕುಟುಂಬದ ಶಾಂತಿ ಮತ್ತು ಏಕತೆಯನ್ನು ಬಲಪಡಿಸುವ ಅವಳ ಸೂಕ್ಷ್ಮ ಸಂವೇದನೆ ಕಥೆಗೆ ಹೊಸ ತಿರುವುಗಳನ್ನು ನೀಡುತ್ತವೆ. ವಿಶೇಷವಾಗಿ, ಧಾರಾವಾಹಿಯ ಖಳನಾಯಕಿಯಾದ ತುಳಸಿ, ಜಾನ್ಸಿಯನ್ನು ತನ್ನ ಮಗ ಪ್ರಣವ್ ಮದುವೆಯಾಗಬೇಕೆಂದು ಒತ್ತಾಯಿಸುವ ತುಳಸಿಯ ಯೋಜನೆಗಳು ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಇಡುತ್ತವೆ. ಜೊತೆಗೆ ಜಾನ್ಸಿಯ ತಾಯಿ ಸುಮಿತ್ರಾಳನ್ನು ತುಳಸಿ ಗುಪ್ತವಾಗಿ ಬಂಧಿಸಿರುವುದು ಕಥೆಯ ರೋಚಕತೆ ಮತ್ತು ಭಾವನಾತ್ಮಕ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ತಾಯಿ ಸುಮಿತ್ರಾ ಮಗಳು ಝಾನ್ಸಿಯನ್ನು ಹೇಗೆ ಸೇರುತ್ತಾಳೆ? ಎಂಬುದು ಕಥೆಯ ಸ್ವಾರಸ್ಯ. ಸುಮಿತ್ರಾ ಪಾತ್ರವು ಕಥೆಯ ರೋಚಕತೆ ಮತ್ತು ಭಾವನಾತ್ಮಕ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ" ಎಂದು ಸೀರಿಯಲ್ ತಂಡ ಹೇಳಿಕೊಂಡಿದೆ.
Colors Kannada: ಕಲರ್ಸ್ ಕನ್ನಡದಲ್ಲಿ ಸೀರಿಯಲ್‌ಗಳ ಧಮಾಕಾ; ವಿಭಿನ್ನ ಕಥೆಯಲ್ಲಿ ಬರುತ್ತಿವೆ ಯಜಮಾನ, ವಧು ಧಾರಾವಾಹಿ
ಯಮುನಾ ಶ್ರೀನಿಧಿ ಹೇಳಿದ್ದೇನು?
"ಇಂತಹ ಸುಂದರ ಮತ್ತು ಭಾವನಾತ್ಮಕ ಪಾತ್ರವನ್ನು ಕನ್ನಡದ ಧಾರಾವಾಹಿ ʻಯಜಮಾನʼದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈ ಪಾತ್ರವು ಅನೇಕ ರೀತಿಯಲ್ಲಿ ನನ್ನ ಮನಸ್ಸನ್ನು ಸ್ಪರ್ಶಿಸಿದೆ ಮತ್ತು ಈ ಹೊಸ ಪ್ರಯಾಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ತುಂಬಾ ಉತ್ಸುಕಳಾಗಿದ್ದೇನೆ" ಎಂದು ಯಮುನಾ ಶ್ರೀನಿಧಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
Ramachari- Yajamana serial: ಯಜಮಾನ -ರಾಮಾಚಾರಿ ಸೀರಿಯಲ್ ಮಹಾಸಂಗಮದಲ್ಲಿ ಬಿಗ್ ಟ್ವಿಸ್ಟ್!
ಯಮುನಾ ಶ್ರೀನಿಧಿಯ ಎಂಟ್ರಿಯೊಂದಿಗೆ ʻಯಜಮಾನʼ ಧಾರಾವಾಹಿ ಹೊಸ ಎತ್ತರಕ್ಕೆ ಏರಲು ಸಜ್ಜಾಗಿದೆ. ಅವರ ಶಕ್ತಿಯುತ ನಟನೆಯೊಂದಿಗೆ, ಹೆಚ್ಚುತ್ತಿರುವ ಕುಟುಂಬ ಸಂಘರ್ಷಗಳು, ಭಾವನಾತ್ಮಕ ಕಥೆ ಮತ್ತು ತಿರುವು - ಮರುತಿರುವುಗಳಿಂದ ಕೂಡಿದ ಕಂತುಗಳು ಪ್ರೇಕ್ಷಕರನ್ನು ಕಟ್ಟಿ ಹಾಕಲಿವೆಯಂತೆ.
ಯಮುನಾ ಶ್ರೀನಿಧಿ ಅವರ ಪೋಸ್ಟ್
ರಾಘುವಿನ ಕ್ರೇಜಿ ಲುಕ್ ಎಲ್ಲರಿಗೂ ಇಷ್ಟ
ಈ ಮಧ್ಯೆ ಜಾನ್ಸಿಗೆ ಅಪಘಾತ ಆದ ಮೇಲೆ ಅವಳ ನೆನಪಿನ ಶಕ್ತಿ ಹೋಗಿದೆ. ಅವಳು ರಾಘುವನ್ನ ಮರೆತಿದ್ದಾಳೆ. ತುಳಸಿ ಸಂಚು ಮಾಡಿರುವುದನ್ನು ತಪ್ಪಿಸಬೇಕಾದ ರಾಘು ಹೊಸ ಲುಕ್ ನೊಂದಿಗೆ ಬಂದಿರೋದು ಜನರಿಗೆ ಬಹಳ ಇಷ್ಟವಾಗಿದೆ. ರಾಘುವಿನ ಈ ಲುಕ್ ಅಪಾರ ಜನಪ್ರಿಯತೆ ಗಳಿಸಿ ಸಿಕ್ಕಾಪಟ್ಟೆ ವೈರಲ್ ಆಗಿದೆ! ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 7 ಕ್ಕೆ ʻಯಜಮಾನʼ ಧಾರಾವಾಹಿ ಪ್ರಸಾರವಾಗುತ್ತಿದೆ.