ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್! ಕೊನೆಗೂ ಶಕುಂತಲಾಗೆ ಈ ಜೋಡಿಯೇ ಆಸರೆ

Amruthadhaare Serial: ಜೈದೇವ್‌ ಹೆತ್ತ ತಾಯಿ ಅಂತ ನೋಡದೇ ಮನೆಯಿಂದ ಹೊರಗೆ ಹಾಕಿದ. ಶಕುಂತಲಾಗೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣ ಆಯ್ತು. ಸೊಸೆ ಕೂಡ ಅತ್ತೆಗೆ ಭಿಕ್ಷೆ ನೀಡಿ, ಮನೆಯಲ್ಲಿ ಇದ್ದ ಬಂಗಾರ ಹಣ ತೆಗೆದುಕೊಂಡು ಪರಾರಿ ಆಗಿದ್ದಾಳೆ. ಹೇಗೋ ಶಕುಂತಲಾ, ಗೌತಮ್‌ ಕಣ್ಣಿಗೆ ಬಿದ್ದು, ಅಂತೂ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಗೌತಮ್‌.

Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 29, 2026 10:30 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial) ಭಾವನಾತ್ಮಕ ಸಂಚಿಕೆಯಾಗಿ ಪ್ರಸಾರ ಕಾಣುತ್ತಿದೆ. ಶಕುಂತಲಾ (Shakuntala) ಸ್ಥಿತಿ ಕಂಡು ವೀಕ್ಷಕರೇ ಮರುಗುತ್ತಿದ್ದಾರೆ. ಅದರಲ್ಲೂ ಶಕುಂತಲಾ ವಿಚಾರಕ್ಕೆ ಭೂಮಿ ಕೂಡ ಕ್ಷಮಿಸಿದ್ದಾಳೆ. ಭೂಮಿಕಾಳ ಈ ನಡೆಗೆ ಗೌತಮ್‌ (Gowtham) ಪತ್ನಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾನೆ. ಹಾಗಾದ್ರೆ ಮುಂದೆ ಜೈದೇವ್‌ ಗತಿ ಏನು?

ಗೌತಮ್‌ ಕಾಲಿಗೆ ಬಿದ್ದ ಶಕುಂತಲಾ

ಜೈದೇವ್‌ ಹೆತ್ತ ತಾಯಿ ಅಂತ ನೋಡದೇ ಮನೆಯಿಂದ ಹೊರಗೆ ಹಾಕಿದ. ಶಕುಂತಲಾಗೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣ ಆಯ್ತು. ಸೊಸೆ ಕೂಡ ಅತ್ತೆಗೆ ಭಿಕ್ಷೆ ನೀಡಿ, ಮನೆಯಲ್ಲಿ ಇದ್ದ ಬಂಗಾರ ಹಣ ತೆಗೆದುಕೊಂಡು ಪರಾರಿ ಆಗಿದ್ದಾಳೆ. ಹೇಗೋ ಶಕುಂತಲಾ, ಗೌತಮ್‌ ಕಣ್ಣಿಗೆ ಬಿದ್ದು, ಅಂತೂ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಗೌತಮ್‌.

ಇದನ್ನೂ ಓದಿ: Jagadhatri Serial: 'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ ಪೈ; ಮುಗಿಯುತ್ತಿರುವ ಸೀರಿಯಲ್‌ ಯಾವುದು?

ಶಕುಂತಲಾಳಿಗೆ ಊಟ ನೀಡಿದ್ದಾಳೆ ಭೂಮಿಕಾ. ಅಷ್ಟೇ ಅಲ್ಲ ಮಕ್ಕಳು ಕೂಡ ಅತ್ಯಂತ ಪ್ರೀತಿಯಿಂದ ಅಜ್ಜಿಯನ್ನು ಮಾತನಾಡಿಸಿದ್ದಾರೆ. ಇಷ್ಟೆಲ್ಲ ಆದ ಬಳಿಕ ಶಕುಂತಲಾ ಗೌತಮ್‌ ಕಾಲಿಗೆ ಬಿದ್ದಿದ್ದಾಳೆ.

ನಾನು ಸಾಕಷ್ಟು ತೊಂದರೆ ಕೊಟ್ಟೆ. ನಿಮಗೆ ಕೇಡನ್ನೇ ಬಯಸುತ್ತಾ ಬಂದೆ. ಆದರೆ ನೀವು ಮಾತ್ರ ನನ್ನನ್ನು ಇಂದಿಗೂ ಪ್ರೀತಿಯಿಂದ ಕಂಡಿರಿ ಅಂತ ಗೌತಮ್‌ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದ್ದಾಳೆ ಶಕುಂತಲಾ.

ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್!

ಇನ್ನೊಂದು ಕಡೆ ಶಕುಂತಲಾಳನ್ನ ಭೂಮಿಕಾ ಕ್ಷಮಿಸಿದ್ದಕ್ಕೆ ಗೌತಮ್‌ ಭಾವುಕನಾಗಿದ್ದಾನೆ. ಅಷ್ಟೇ ಅಲ್ಲ ಇಷ್ಟೆಲ್ಲ ಮಾಡಿದ್ದರೂ ನಿನ್ನ ಒಂದು ಮಾತು ಕೇಳದೆ ಅಮ್ಮನನ್ನು ಮನೆಗೆ ಕರೆದುಕೊಂಡು ಬಂದೆ ಎಂದಿದ್ದಾನೆ. ಆಗ ಭೂಮಿ ಕೂಡ ಯಾರೇ ಏನೇ ಮಾಡಿದರೂ ಅವರಿಗೆ ಬಂದ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು. ನಿಮ್ಮ ನಿರ್ಧಾರಕ್ಕೆ ಸದಾ ನಾನು ಜೊತೆಗಿರುವೆ ಎಂದಿದ್ದಾಳೆ ಭೂಮಿ. ಇದನ್ನ ಕೇಳಿ ಗೌತಮ್‌ ಕಣ್ಣೀರಿಟ್ಟು ಹೆಂಡತಿಯನ್ನು ತಬ್ಬಿಕೊಂಡಿದ್ದಾನೆ.

ಇತ್ತ ಜೈದೇವ್‌, ಆಸ್ತಿ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಒಂದು ಮಗು ಬಳಿ ಚೆಕ್‌ ಕೊಟ್ಟು ಜೈದೇವ್‌ ಕೊಡಲು ಗೌತಮ್‌ ಹೇಳುತ್ತಾನೆ. ಇನ್ನೇನು ಜೈದೇವ್‌ ಆಸ್ತಿ ಕಳೆದುಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಗೌತಮ್‌ ಎಂಟ್ರಿ ಆಗಿದೆ. ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯಲು ಬಂದಿದ್ದಾನೆ ಗೌತಮ್‌.

ಕಥೆ ಈಗ ನೋಡ್ತಾ ಇದ್ದರೆ ಧಾರಾವಾಹಿ ಅಂತ್ಯ ಕಾಣುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಈಗಾಗಲೇ ಜೀ ವಾಹಿನಿ ಹೊಸ ಸೀರಿಯಲ್‌ ಪ್ರೋಮೋ ಹಂಚಿಕೊಂಡಿದೆ. ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಜಗದ್ಧಾತ್ರೀ’ ಶೀಘ್ರದಲ್ಲಿ ಬರುತ್ತಿದೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಮೋಕ್ಷಿತಾ ಪೈ ಅವರು ನಾಯಕಿ ಎಂಬ ಸುದ್ದಿ ತಿಂಗಳುಗಳಿಂದ ಓಡಾಡುತ್ತಿತ್ತು.

ಇದನ್ನೂ ಓದಿ: Amruthadhaare Serial: ಗೌತಮ್ ದಿವಾನ್ ಕಣ್ಣೆದುರು ಶಕುಂತಲಾ! ಹೀಯಾಳಿಸಿದ ಸೊಸೆ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.