Amruthdhaare Serial: ಭೂಮಿಕಾಗೆ ಕ್ಯಾನ್ಸರ್; ಸಿಹಿ ತಿಂದು ಸಂಭ್ರಮಿಸಿದ ಶಕುಂತಲಾ, ಜೈದೇವ್!
Amruthdhaare Serial: ಭೂಮಿಕಾಗೆ ಚಿಂತೆ ಕಾಡುತ್ತಿದೆ. ತಾನು ಸತ್ತರೆ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಚಿಂತಿತಳಾಗಿದ್ದಾಳೆ. ಮುಂದಿನ ದಿನಗಳಲ್ಲಿ ತನ್ನ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭವಾದ್ರೆ ಮಕ್ಕಳು ಪ್ರಶ್ನಿಸಿದ್ರೆ ಏನು ಮಾಡಬೇಕೆಂದು ಮಲ್ಲಿ ಸಹಾಯ ಕೇಳಿದ್ದಾಳೆ. ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸುವಂತೆ ಮಲ್ಲಿ ಸಲಹೆ ನೀಡಿದ್ದಾಳೆ. ಮಲ್ಲಿ ಮಾತಿನಂತೆ ಮಕ್ಕಳನ್ನು ತವರಿಗೆ ಕಳುಹಿಸಲು ಭೂಮಿಕಾ ನಿರ್ಧರಿಸಿದ್ದಾಳೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthdhaare serial) ರೋಚಕ ಟ್ವಿಸ್ಟ್ ಪಡೆದು ಸಾಗುತ್ತಿದೆ. ಅದರಲ್ಲೂ ಭೂಮಿಕಾಗೆ ಕ್ಯಾನ್ಸರ್ (Bhomika Cancer) ಇರುವುದು ಪತ್ತೆಯಾಗಿದ್ದು, ತನ್ನ ಮಕ್ಕಳ ಭವಿಷ್ಯದ ಚಿಂತೆಯಲ್ಲಿದ್ದಾಳೆ. ಈ ವಿಷಯ ತಿಳಿದ ಶಕುಂತಲಾ ಮತ್ತು ಜೈದೇವ್ ಸಂಭ್ರಮಿಸುತ್ತಿದ್ದಾರೆ.
ಭೂಮಿಕಾಗೆ ಚಿಂತೆ ಕಾಡುತ್ತಿದೆ. ತಾನು ಸತ್ತರೆ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಚಿಂತಿತಳಾಗಿದ್ದಾಳೆ. ಮುಂದಿನ ದಿನಗಳಲ್ಲಿ ತನ್ನ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭವಾದ್ರೆ ಮಕ್ಕಳು ಪ್ರಶ್ನಿಸಿದ್ರೆ ಏನು ಮಾಡಬೇಕೆಂದು ಮಲ್ಲಿ ಸಹಾಯ ಕೇಳಿದ್ದಾಳೆ. ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸುವಂತೆ ಮಲ್ಲಿ ಸಲಹೆ ನೀಡಿದ್ದಾಳೆ. ಮಲ್ಲಿ ಮಾತಿನಂತೆ ಮಕ್ಕಳನ್ನು ತವರಿಗೆ ಕಳುಹಿಸಲು ಭೂಮಿಕಾ ನಿರ್ಧರಿಸಿದ್ದಾಳೆ.
ಶಕುಂತಲಾ ಇವೆಲ್ಲ ಕೇಳಿಸಿಕೊಂಡ ಸಖತ್ ಖುಷಿ ಆಗಿದ್ದಾಳೆ. ಭೂಮಿಕಾಳ ಕ್ಯಾನ್ಸರ್ ವಿಷಯ ತಿಳಿಯುತ್ತಿದ್ದಂತೆ ಸ್ವೀಟ್ ತೆಗೆದುಕೊಂಡು ಮಗ ಜೈದೇವ್ ಬಳಿ ಶಕುಂತಲಾ ಓಡಿ ಹೋಗಿದ್ದಾಳೆ. ಜೈದೇವ್‌ಗೆ ಸಿಹಿ ನೀಡಿ ಭೂಮಿಕಾ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯ ಹೇಳಿದ್ದಾಳೆ. ಇನ್ನು ಈ ವಿಚಾರ ತಿಳಿದ ಶಕುಂಮಲಾ ಜೈದೇವ್ ಮುಂದೆ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡೋದು ಪಕ್ಕಾ ಎನ್ನುವಂತಿದೆ.
ಮತ್ತೊಂದು ಕಡೆ ಗೌತಮ್ ಕಂಪನಿಯ ಎಲ್ಲಾ ಕೆಲಸಗಳನ್ನು ಪಾರ್ಥ ಮತ್ತು ಗೆಳೆಯ ಆನಂದ್ ನೀಡಿದ್ದಾನೆ.
ಇದನ್ನೂ ಓದಿ: Kangana Ranaut : 'ಯುವಜನರನ್ನು ದಾರಿ ತಪ್ಪಿಸಬೇಡಿ' ಟ್ರೋಲ್ ಮಾಡುವವರ ವಿರುದ್ಧ ಕಂಗನಾ ತಿರುಗೇಟು
ಭೂಮಿಕಾಳಿಗೆ ಇನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಜೀವನವಿದೆ ಎಂಬ ರೀತಿಯಲ್ಲಿ ಕಥೆಯನ್ನು ಮುಂದುವರಿಸಲಾಗುತ್ತಿದೆ ಭೂಮಿಕಾ ತನ್ನ ಹೊಸ ರೂಪವನ್ನು ಕನ್ನಡಿಯ ಮುಂದೆ ನೋಡಿ ಧೈರ್ಯ ತಂದುಕೊಳ್ಳುವ ದೃಶ್ಯ ಕಣ್ಣು ಒದ್ದೆಯಾಗಿಸುವಂತಿದೆ. ಇಡೀ ಕುಟುಂಬವೇ ಈ ಸಂಕಷ್ಟದ ಸಮಯದಲ್ಲಿ ಭೂಮಿಕಾ ಪರವಾಗಿ ನಿಂತಿದೆ.
ಭೂಮಿಕಾ ಕ್ಯಾನ್ಸರ್‌ನಿಂದ ಗುಣಮುಖಳಾಗುತ್ತಾಳೆಯೇ? ಅಥವಾ ಕಥೆ ಮತ್ತಷ್ಟು ದುರಂತದತ್ತ ಸಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಜೈದೇವ್ ಮತ್ತು ಶಕುಂತಲಾ ಗೌತಮ್ ಫ್ಯಾಮಿಲಿಯನ್ನು ಬೀದಿಗೆ ತರುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರಿಬ್ಬರೂ ಹೇಗೋ ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಜೈದೇವ ದಿಯಾಳ ಕೊಲೆ ಮಾಡಿದ್ದು, ಇನ್ನೂ ಯಾರಿಗೂ ಗೊತ್ತಿಲ್ಲ. ಇದೀಗ ಮಲ್ಲಿ ಇನ್ಸ್ಪೆಕ್ಟರ್ ಆಗಿರುವ ಹಿನ್ನೆಲೆಯಲ್ಲಿ, ಜೈದೇವ್‌ಗೆ ಮುಹೂರ್ತ ಫಿಕ್ಸ್ ಆಗುವಂತಿದೆ. ಅದೇ ರೀತಿ, ಶಕುಂತಲಾ ಕುತಂತ್ರ ಕೂಡ ಬಯಲು ಮಾಡಿ ಆಕೆಗೂ ಮಗನ ಜೊತೆಗೇ ಜೈಲೂಟ ಹಾಕಿಸುತ್ತಾಳೆ.
ಇದನ್ನೂ ಓದಿ: Amruthdhaare Serial: ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ! ಭಾವುಕರಾದ ಫ್ಯಾನ್ಸ್
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.