Bigg Boss Kannada 13: ಕಿಚ್ಚನ ಮುಂದೆ ಥಂಡಾ ಹೊಡೆದ ಮಂಜ; ಸುದೀಪ್ ಉಗ್ರರೂಪಕ್ಕೆ ಮಂಕಾದ ಮಹಾಕವಿ!
Bigg Boss Kannada 13: ಬಿಗ್ ಬಾಸ್ ಸೀಸನ್- 13’ ಎರಡನೇ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಜನರು ಊಹಿಸಿದಂತೆ ಕಿಚ್ಚ ಸುದೀಪ್ ಕಟಕಟೆಯಲ್ಲಿ ಅಗ್ನಿಪರೀಕ್ಷೆಯ ನಾಲ್ಕು ಜನರನ್ನ ನಿಲ್ಲಿಸಿದ್ದಾರೆ. ಅದರಲ್ಲೂ ಮಹಾಕವಿ ಮಂಜ ಅವರನ್ನು ಚೆನ್ನಾಗಿ ಬೆಂಡತ್ತಿದ್ದಾರೆ. ನಮ್ಮಲ್ಲಿ ಕವಿ ಎಂದರೆ ಬಹಳ ಗೌರವ ಇದೆ. ಸುನೀತರು, ಹೃದಯವಂತರು, ವಿನಯವಂತರು ಎಂದು ನೋಡುತ್ತೇವೆ. ಆದರೆ ನಿನ್ನ ರೀತಿ ಆಡೋರನ್ನ ‘ಕಿತ್ತೋಗಿರೋ ನನ್ನ ಮಕ್ಳು’ ಎಂದು ಕರೀತಾರೆ ಎಂದು ಖಾರವಾಗಿ ನುಡಿದರು ಸುದೀಪ್.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಸೀಸನ್- 13’ (Bigg Boss Kannada 13) ಎರಡನೇ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಜನರು ಊಹಿಸಿದಂತೆ ಕಿಚ್ಚ ಸುದೀಪ್ (kichcha Sudeep) ಕಟಕಟೆಯಲ್ಲಿ ಅಗ್ನಿಪರೀಕ್ಷೆಯ ನಾಲ್ಕು ಜನರನ್ನ ನಿಲ್ಲಿಸಿದ್ದಾರೆ. ಅದರಲ್ಲೂ ಮಹಾಕವಿ ಮಂಜ (Modern Mahakavi Manja) ಅವರನ್ನು ಚೆನ್ನಾಗಿ ಬೆಂಡತ್ತಿದ್ದಾರೆ. ನಮ್ಮಲ್ಲಿ ಕವಿ ಎಂದರೆ ಬಹಳ ಗೌರವ ಇದೆ. ಸುನೀತರು, ಹೃದಯವಂತರು, ವಿನಯವಂತರು ಎಂದು ನೋಡುತ್ತೇವೆ. ಆದರೆ ನಿನ್ನ ರೀತಿ ಆಡೋರನ್ನ ‘ಕಿತ್ತೋಗಿರೋ ನನ್ನ ಮಕ್ಳು’ ಎಂದು ಕರೀತಾರೆ ಎಂದು ಖಾರವಾಗಿ ನುಡಿದರು ಸುದೀಪ್.
ಮಂಜನ ವರ್ತನೆಗೆ ವೀಕ್ಷಕರು ಕೂಡ ಬೇಸತ್ತು ಹೋಗಿದ್ದರು. ಮಂಜನ ಜೊತೆ ಎಲ್ಲ ಕಾಮನರ್ಸ್‌ಗಳಿಗೆ ನಿಮಗೋಸ್ಕರ ನಾವು ಕೋಟಿ ಕೋಟಿ ಜನರನ್ನ ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಎಂದು ನೇರವಾಗಿ ಹೇಳಿದರು ಸುದೀಪ್.
ತಮ್ಮಂದಿರಿಗೆ ಕೆಲವೊಂದು ಬೆಲೆ ಇರಬೇಕು
ನಾನು ಅಣ್ಣ ಅಂತ ಅನಿಸಿಕೊಳ್ಳಬೇಕಾದ್ರೆ ತಮ್ಮಂದಿರಿಗೆ ಕೆಲವೊಂದು ಬೆಲೆ ಇರಬೇಕು. ಮನೆ ಸದಸ್ಯರಾ? ಅವರು ಯಾವ ಸದಸ್ಯರು? ಕಿತ್ತು ಹೋಗಿರೋ 50 ಪೈಸೆಗೆ ಬೆಲೆ ಇಲ್ಲ ಅವರಿಗೆ. ವ್ಯಕ್ತಿಯೊಬ್ಬ ಮಾತನಾಡಿದ ಅದರಲ್ಲಿ ತೂಕ, ಅರ್ಥ ಇರಬೇಕು ಇರಬೇಕು ಇಲ್ಲವಾದರೆ ಅದನ್ನು ಬರೀ ಸೌಂಡ್ ಎನ್ನುತ್ತೇವೆ, ತಮ್ಮನಾಗಲು ಬೆಲೆ ಇರಬೇಕಾಗುತ್ತದೆ. ನಿನ್ನನ್ನು ತಮ್ಮ ಎಂದು ಒಪ್ಪಿಕೊಂಡರೆ, ನನ್ನನ್ನು ಅಣ್ಣ ಎಂದು ಕರೆದವರಿಗೆ ಅವಮಾನ ಮಾಡಿದಂತಾಗುತ್ತದೆ’ಎಂದು ಕಪಾಳಕ್ಕೆ ಹೋಡೆದಂತೆ ನೇರವಾಗಿ ಹೇಳಿದರು.
ಬಿಗ್ ಬಾಸ್‌ಗೆ ಏ…. !
ಇನ್ನು ಬಿಗ್ ಬಾಸ್‌ಗೆ ಏ…. ! ಅಂತ ಮಾತನಾಡುತ್ತೀರಾ. ಅದೇನು ನಿಮ್ಮಪ್ಪಂದ? ಯಾರಪ್ಪಂದು? ನಿಮ್ಮ ವಯಸ್ಸಿಗೆ ಇದೆಲ್ಲ ಬೇಕ? ವಯಸ್ಸಿನ ಬಗ್ಗೆ ಆದರೂ ಮರ್ಯಾದೆ ಇರಲಿ. ಕ್ಯಾಮೆರಾ ಆಫ್ ಆದರೆ ಕತೆಯೇ ಬೇರೆ ಆಗುತ್ತೆ. . ನಮ್ಮಲ್ಲಿ ಕವಿಗಳಿಗೆ ವಿಶೇಷ ಸ್ಥಾನ ಇದೆ. ನಿಮ್ಮ ಹೆಸರು ಮಾಡರ್ನ್ ಕವಿ ಮಂಜ ಅಂತ ನೀವು ಇಟ್ಟುಕೊಂಡಿದ್ದೀರಿ. ನಿನ್ನ ರೀತಿ ಆಡೋರನ್ನ ‘ಕಿತ್ತೋಗಿರೋ ನನ್ನ ಮಕ್ಳು’ಎಂದು ಕರೀತಾರೆ ಎಂದು ಖಾರವಾಗಿ ನುಡಿದರು ಸುದೀಪ್. ಮುಂದಿನ ವಾರ ಹೊಸ ಮಂಜನನ್ನು ನೋಡಬೇಕು, ನಾನು ಹೀಗೇ ಇರುತ್ತೀನಿ ಎಂದರೆ ಜನ ಮುಂದಿನದ್ದನ್ನು ನಿರ್ಧರಿಸುತ್ತಾರೆಬ ಎಂದು ನೇರವಾಗಿ ಹೇಳಿದರು ಕಿಚ್ಚ.
ಇದನ್ನೂ ಓದಿ: Bigg Boss Kannada 13: ಕಾಮನರ್ಸ್ ಈ ಶೋಗೆ ಬೇಡ; ಸ್ಪರ್ಧಿಗಳ ವರ್ತನೆಗೆ ಬೇಸತ್ತ ಕಿಚ್ಚ
ಕಾಮನರ್ಸ್‌ಗಳಿಗೆ ‘ಇಷ್ಟು ಜನ ಶೋನ ನೋಡ್ತಾ ಇದ್ದಾರೆ ಅಂತ ತಾನೆ ನೀವು ಹಿಂಗೆಲ್ಲ ಆಡ್ತಿರೋದು. ಅಷ್ಟು ಜನ 12 ಸೀಸನ್‌ನಿಂದ ಸಂಪಾದಿಸಿರುವ ಆಸ್ತಿ. ಯಾರೋ ನಾಲ್ಕು ಜನರಿಗೋಸ್ಕರ, ಕೋಟಿ ಕೋಟಿ ಕನ್ನಡಿಗರನ್ನು ಕಳೆದುಕೊಳ್ಳಲು ನಾವ್ಯಾರು ತಯಾರಿಲ್ಲ’ ಅಂತ ಸುದೀಪ್ ಗರಂ ಆಗಿ ಹೇಳಿದರು.