ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Love OTP: ʻಎಲ್ರೂ ಸಿನಿಮಾ ಚೆನ್ನಾಗಿದೆ ಅಂತಾರೆ, ಆದ್ರೆ ಜನರು ಬರ್ತಿಲ್ಲʼ; ಲೈವ್‌ನಲ್ಲೇ ಕಣ್ಣೀರಿಟ್ಟ ನಟ ಅನೀಶ್‌

Love OTP Kannada Movie: ಅನೀಶ್‌ ತೇಜೇಶ್ವರ್‌ ನಟಿಸಿ, ನಿರ್ದೇಶನ ಮಾಡಿರುವ ʻಲವ್‌ ಓಟಿಪಿʼ ಸಿನಿಮಾಕ್ಕೆ ಉತ್ತಮ ವಿಮರ್ಶೆ ಸಿಕ್ಕಿದ್ದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಈ ಬಗ್ಗೆ ಅನೀಶ್‌ ತೇಜೇಶ್ವರ್‌ ನೊಂದುಕೊಂಡಿದ್ದಾರೆ. ನವೆಂಬರ್ 14 ರಂದು ತೆರೆಕಂಡ ಈ ಚಿತ್ರಕ್ಕೆ ವಿಮರ್ಶಕರಿಂದ, ಬುಕ್ ಮೈ ಶೋನಲ್ಲಿ ಉತ್ತಮ ರೇಟಿಂಗ್ ಸಿಕ್ಕಿದೆ. ಬೇಸರಗೊಂಡಿರುವ ಅನೀಶ್ ಲೈವ್‌ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

ಜನರು ʻಲವ್‌ OTPʼ ಸಿನಿಮಾ ನೋಡ್ತಿಲ್ಲ ಎಂದು ಅನೀಶ್‌ ಕಣ್ಣೀರು

-

Avinash GR
Avinash GR Nov 15, 2025 4:48 PM

ನಟ ಅನೀಶ್‌ ತೇಜೇಶ್ವರ್‌ ಅವರು ಕಳೆದ 15 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ನಟರಾಗಿದ್ದ ಅವರು ʻರಾಮಾರ್ಜುನʼ ಸಿನಿಮಾದ ಮೂಲಕ ನಿರ್ದೇಶಕರಾಗಿದರು. ಇದೀಗ ಅವರು ʻಲವ್‌ ಓಟಿಪಿʼ ಹೆಸರಿನ ಹೊಸ ಸಿನಿಮಾವನ್ನು ನಿರ್ದೇಶಿಸಿದ್ದು, ಆ ಚಿತ್ರವು ತೆರೆಕಂಡಿದೆ. ಸದ್ಯ ಈ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿದರೂ ಕೂಡ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ನೊಂದುಕೊಂಡಿರುವ ಅನೀಶ್‌, ಲೈವ್‌ ಬಂದು ವಿಡಿಯೋ ಮಾಡಿದ್ದಾರೆ. ಜೊತೆಗೆ ಕಣ್ಣೀರಿಟ್ಟಿದ್ದಾರೆ.

ನವೆಂಬರ್‌ 14ರಂದು ತೆರೆಕಂಡಿರುವ ಲವ್‌ ʻಲವ್ OTPʼ ಸಿನಿಮಾ

ಅನೀಶ್‌ ತೇಜೇಶ್ವರ್‌ ನಟಿಸಿ, ನಿರ್ದೇಶಿಸಿರುವ ʻಲವ್ OTPʼ ಸಿನಿಮಾವು ನವೆಂಬರ್‌ 14ರಂದು ತೆರೆಕಂಡಿದ್ದು, ವಿಮರ್ಶಕರಿಂದ ಮತ್ತು ಸಿನಿಮಾ ವೀಕ್ಷಣೆ ಮಾಡಿದವರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ಚಿತ್ರಮಂದಿರಕ್ಕೆ ಬಂದು ಈ ಸಿನಿಮಾವನ್ನು ನೋಡುವವರ ಸಂಖ್ಯೆ ಕಡಿಮೆ ಇದೆ. ಅಂದುಕೊಂಡ ಮಟ್ಟಕ್ಕೆ ಆಡಿಯೆನ್ಸ್‌ ಥಿಯೇಟರ್‌ಗೆ ಬರುತ್ತಿಲ್ಲ. ಇದು ಅನೀಶ್‌ ತೇಜೇಶ್ವರ್ ನೋವಿಗೆ ಕಾರಣವಾಗಿದೆ.

ಸಿನಿಮಾ ಮಾಧ್ಯಮ, ಪತ್ರಕರ್ತರ ಜೊತೆ ಕ್ರಿಕೆಟ್‌ ಟೂರ್ನಿ ಆಡಿದ ಲವ್‌ ಒಟಿಪಿ ತಂಡ!

ಪಾಸಿಟಿವ್‌ ರಿವ್ಯೂ ಸಿಕ್ಕರೂ ಜನರು ಬರುತ್ತಿಲ್ಲ

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ಬಂದಿದ್ದ ಅನೀಶ್‌ ಅವರು ಕಣ್ಣೀರಿಟ್ಟಿದ್ದಾರೆ. "ನಮ್ಮ ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆಗಳು‌ ಸಿಕ್ಕರೂ ಚಿತ್ರಮಂದಿರದತ್ತ ಸುಳಿಯುತ್ತಿಲ್ಲ. ಬುಕ್ ಮೈ ಶೋನಲ್ಲೂ ಪ್ರಶಂಸೆಗಳ‌ ಸುರಿಮಳೆಯಾಗಿದೆ. 5ಕ್ಕೆ 3.5 ರೇಟಿಂಗ್ ಸಿಕ್ಕಿದೆ. 14ವರ್ಷಗಳ ಸತತ ಪ್ರಯತ್ನಕ್ಕೆ‌ ಮತ್ತೆ ನಿರಾಸೆಯಾಗಿದೆ. ನನ್ನ ಯಾವ ಸಿನಿಮಾಗೂ ಇಷ್ಟೊಂದು ದೊಡ್ಡ ಮಟ್ಟದ ಪಾಸಿಟಿವ್‌ ರಿವ್ಯೂ ಬಂದಿರಲಿಲ್ಲ. ಆದರೆ ಲವ್‌ ಒಟಿಪಿ ಸಿನಿಮಾಗೆ ಸಿಕ್ಕಿದೆ. ಆದರೆ ಕಲೆಕ್ಷನ್‌ ನೋಡಿ ಬೇಸರವಾಗಿದೆ" ಎಂದು ಅನೀಶ್‌ ಅವರು ಕಣ್ಣೀರಿಟ್ಟಿದ್ದಾರೆ.

ಲೈವ್‌ ಬಂದು ಕಣ್ಣೀರಿಟ್ಟ ಅನೀಶ್‌

ಜನರೇಕೆ ಬರುತ್ತಿಲ್ಲ?

"ಪಾಸಿಟಿವ್‌ ರಿವ್ಯೂ ಬಂದಿದ್ದರೂ ಆಡಿಯೆನ್ಸ್‌ ಬಂದಿಲ್ಲ. ʻಲವ್‌ ಒಟಿಪಿʼ ಸಿನಿಮಾಗೆ ಪಾಸಿಟಿವ್ ರಿವ್ಯೂ ಬಂದಿದ್ದರೂ ಜನರು ಬಂದಿಲ್ಲ. ಥಿಯೇಟರಿಗೆ ಜನರು ಯಾಕ್ ಯಾರೂ ಬರ್ತಿಲ್ಲ...? ನಾನೂ ಇನ್ನೇನ್ ಮಾಡಬೇಕು..??? ನನಗೆ ಗೊತ್ತಾಗ್ತಿಲ್ಲ. ಮೊದಲ ದಿನ ಯಾರೆಲ್ಲಾ ಸಿನಿಮಾ ನೋಡಿದ್ದಾರೋ ಬುಕ್ ಮೈಶೋನಲ್ಲಿ ನಿರೀಕ್ಷೆಗೂ ಮೀರಿ ನಮ್ಮ‌ ಕೆಲಸವನ್ನು ಕೊಂಡಾಡ್ತಿದ್ದಾರೆ. ಆದ್ರೂ ಯಾಕ್ ಈ ರೀತಿ..? ನನಗೆ ಅರ್ಥ ಆಗ್ತಿಲ್ಲ.." ಎಂದು ಬೇಸರ ತೋಡಿಕೊಂಡಿದ್ದಾರೆ ಅನೀಶ್. ‌

ಇದು ನನ್ನ ಅಂತರಾಳದ ನೋವು

"ಶನಿವಾರ ಮತ್ತು ಭಾನುವಾರ ಪ್ರೇಕ್ಷಕರು ಬಂದರೆ ನನಗೆ, ಕೈಹಿಡಿದರೆ ಮುಂದಿನ ದಾರಿ. ಇಲ್ಲವಾದರೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸುತ್ತೇನೆ. ತುಂಬಾ ದುಃಖದಿಂದ ಈ ವಿಚಾರವನ್ನು ಹೇಳುತ್ತಿದ್ದೇನೆ. ಸಿಂಪತಿಗಾಗಿ ಈ ಕಣ್ಣೀರು ಹಾಕುತ್ತಿಲ್ಲ. ಇದು ಗಿಮಿಕ್ಕೂ ಕೂಡ ಅಲ್ಲ.. ಇದು ನನ್ನ ಅಂತರಾಳದ ನೋವು" ಎಂದು ಅನೀಶ್‌ ಅವರು ಹೇಳಿದ್ದಾರೆ.

ಲವ್‌ OTP ಸಿನಿಮಾಗೆ ಅನೀಶ್‌ ನಿರ್ದೇಶನ ಮಾಡಿದ್ದು, ವಿಜಯ್‌ ಎಂ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಅನೀಶ್‌ ಜೊತೆಗೆ ತೆಲುಗಿನ ರಾಜು ಕನಕಾಲ, ಸ್ವರೂಪಿಣಿ, ಜಾನ್ವಿಕಾ ಕಲಕೇರಿ, ತುಳಶಿ ಶಿವಮಣಿ, ಚೇತನ್‌ ಗಂಧರ್ವ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.