ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಲಿವುಡ್ ನಟ ರಾಜ್ ಕುಮಾರ್ ರಾವ್‌ ದಂಪತಿಗೆ ಹೆಣ್ಣು ಮಗು-ಸ್ಪೆಷಲ್‌ ಪೋಸ್ಟ್ ವೈರಲ್

Rajkummar Rao: ರಾಜ್ ಕುಮಾರ್ ರಾವ್ ಅವರು ಪತ್ರಲೇಖಾ (Patralekhaa) ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ನವೆಂಬರ್ 15ಕ್ಕೆ ಈ ಜೋಡಿ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಸೆಲಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಈ ದಂಪತಿ ಹೊಸ ವಿಚಾರ ರಿವಿಲ್ ಮಾಡಿ ಗುಡ್ ನ್ಯೂಸ್ ಒಂದನ್ನು ನೀಡಿದೆ.

ಬಾಲಿವುಡ್ ನಟ ರಾಜ್ ಕುಮಾರ್ ರಾವ್‌ ದಂಪತಿಗೆ ಹೆಣ್ಣು ಮಗು!

ಬಾಲಿವುಡ್ ನಟ ರಾಜ್ ಕುಮಾರ್ ದಂಪತಿಗೆ ಹೆಣ್ಣು ಮಗು -

Profile
Pushpa Kumari Nov 15, 2025 12:43 PM

ನವದೆಹಲಿ: ಬಾಲಿವುಡ್ ನ ಖ್ಯಾತ ನಟ ರಾಜ್ ಕುಮಾರ್ ರಾವ್ (Rajkummar Rao) ಅವರು ತಮ್ಮ ವಿಭಿನ್ನ ಅಭಿನಯದ ಮೂಲಕವೇ ಸಿನಿಮಾ ರಂಗದಲ್ಲಿ ಗುರುತಿಸಿ ಕೊಂಡಿದ್ದಾರೆ. ಕ್ವೀನ್, ಅಲಿಗಢ, ನ್ಯೂಟನ್, ಬರೇಲಿ ಕಿ ಬರ್ಫಿ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಇವರಿಗೆ ಉತ್ತಮ ಸಿನಿಮಾ ಆಫರ್ ಕೂಡ ಸಿಗುತ್ತಿದೆ. ರಾಜ್ ಕುಮಾರ್ ರಾವ್ ಅವರು ಪತ್ರಲೇಖಾ (Patralekhaa) ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ನವೆಂಬರ್ 15ಕ್ಕೆ ಈ ಜೋಡಿ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಸೆಲಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಈ ದಂಪತಿ ಹೊಸ ವಿಚಾರ ರಿವಿಲ್ ಮಾಡಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ದಂಪತಿಗಳಿಗೆ ಹೆಣ್ಣು ಮಗು ಜನಿಸಿದ್ದು ವಿವಾಹ ವಾರ್ಷಿಕೋತ್ಸವದ (wedding anniversary) ಶುಭ ದಿನದಂದೆ ಈ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿ ಕೊಂಡಿ ದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ದಂಪತಿಗಳಿಗೆ ಡಬಲ್ ಸಲಬ್ರೇಶನ್ ಗೆ ಶುಭಾಶಯಗಳನ್ನು ಕೋರಿದ್ದಾರೆ. ಸದ್ಯ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆಯುತ್ತಿದೆ.

ನವೆಂಬರ್ 15ರ ಬೆಳಗ್ಗೆ ಇಬ್ಬರು ತಮ್ಮ ಮೊದಲ ಮಗುವಿನ ಜನನದ ಬಗ್ಗೆ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬೇಬಿ ಪಿಂಕ್ ಕಲರ್ ಥೀಮ್‌ನ ಚಿತ್ರವೊಂದ ರಲ್ಲಿ ಮಗುವಿನ ಬಟ್ಟೆಗಳೊಂದಿಗೆ ಒಂದು ವಿಶೇಷ ಬರಹವನ್ನು ಅವರು ಹಂಚಿಕೊಂಡಿದ್ದಾರೆ. ದೇವರು ನಮಗೆ ಹೆಣ್ಣು ಮಗುವನ್ನು ಆಶೀರ್ವದಿಸಿದ್ದಾನೆ. ನಮ್ಮ 4ನೇ ವಿವಾಹ ವಾರ್ಷಿ ಕೋತ್ಸವದಂದು ದೇವರು ನಮಗೆ ನೀಡಿದ ಅತ್ಯಂತ ದೊಡ್ಡ ಆಶೀರ್ವಾದ ಎಂಬ ಸಾಲುಗಳನ್ನು ಅದರ ಮೇಲೆ ಬರೆಯಲಾಗಿದ್ದನ್ನು ಪೋಸ್ಟ್‌ನಲ್ಲಿ ಕಾಣಬಹುದು.

ಈ ಹಿಂದೆ ಸಂದರ್ಶನ ಒಂದರಲ್ಲಿ ನಟಿ, ಮಾಡೆಲ್ ಸ್ಟಾರ್ ಪತ್ರಲೇಖಾ ಅವರು ತಮ್ಮ ಜೀವನದಲ್ಲಿ ಮಗು ಜನಿಸಿದ ಬಳಿಕ ನ್ಯೂಜಿಲೆಂಡ್‌ನ ದಕ್ಷಿಣ ಭಾಗಕ್ಕೆ ಪ್ರವಾಸ ಮಾಡಬೇಕು ಎಂದು ಯೋಚಿಸಿ ಎಂದು ಹೇಳಿಕೊಂಡಿದ್ದರು. ಬಳಿಕ ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಪ್ರವಾಸಕ್ಕೆ ಹೋಗಿದ್ದ ಸಂದರ್ಭ ದಲ್ಲಿ ತಾವು ಗರ್ಭಿಣಿಯಾಗಿದ್ದಾಗಿ ಸೋಶಿಯಲ್ ಮಿಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದ್ದರು. ಜುಲೈ 9ರಂದು ಹೂವಿನ ಮಾಲೆ ಮತ್ತು ತೊಟ್ಟಿಲನ್ನು ಒಳಗೊಂಡ ಥೀಂ ಇರುವ ಪೋಸ್ಟ್ ನಲ್ಲಿ 'ಬೇಬಿ ಆನ್ ದಿ ವೇ' ಎಂದು ಬರೆದುಕೊಂಡಿದ್ದರು. ಇದೀಗ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು ಬಾಲಿವುಡ್ ಸೆಲಬ್ರಿಟಿಗಳು ಮತ್ತು ಅಭಿಮಾನಿಗಳು ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಕೋರಿದ್ದಾರೆ.

ಇದನ್ನೂ ಓದಿ:Thama movie OTT : ರಶ್ಮಿಕಾ ಮಂದಣ್ಣ ನಟನೆಯ `ಥಾಮಾ' ಸಿನಿಮಾ ಒಟಿಟಿ ರಿಲೀಸ್‌ ಯಾವಾಗ?

ನಟ ವರುಣ್ ಧವನ್ ಅವರು ಇವರ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿ, ರೆಡ್ ಹಾರ್ಟ್ ಇಮೋಜಿ ನೀಡಿದ್ದಾರೆ. ನಟ ಅಲಿ ಫಜಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದನ್ನು ಕೇಳಿ ತುಂಬಾ ಸಂತೋಷ ವಾಯಿತು. ನಿಮ್ಮಿಬ್ಬರಿಗೂ ಅಭಿನಂದನೆಗಳು ಎಂದು ಕಾಮೆಂಟ್ ಹಾಕಿದ್ದಾರೆ. ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ನಟಿ ನೇಹಾ ಧೂಪಿಯಾ ಕೂಡ ಶುಭಾಶಯಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

2014ರಲ್ಲಿ ಸಿಟಿಲೈಟ್ಸ್ ಚಿತ್ರದ ಸೆಟ್‌ ನಲ್ಲಿ ರಾಜ್ ಮತ್ತು ಪತ್ರಲೇಖ ಭೇಟಿಯಾಗಿದ್ದರು. ಯೇ ಆಶಿಕಿ ಎಂಬ ಆಲ್ಬಂ ಸಾಂಗ್ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಸ್ನೇಹಿತರಾದರು. ಮಾಡೆಲಿಂಗ್, ನಟನೆಯಲ್ಲಿ ಇಬ್ಬರ ಅಭಿರುಚಿ ಒಂದೆ ಆಗಿದ್ದ ಕಾರಣಕ್ಕೆ ಈ ಸ್ನೇಹ ಗಾಢವಾಗಿದೆ. ಜಾಹೀರಾತಿನಲ್ಲಿ ನಟಿ ಪತ್ರಲೇಖಾ ಅವರನ್ನು ಕಂಡು ರಾಜ್ ಮನಸೋತಿದ್ದು ಬಳಿಕ ಪ್ರಪೋಸ್ ಮಾಡಿದ್ದಾರೆ. ಬಳಿಕ 2010ರಲ್ಲಿ ನಟಿ ಪತ್ರಲೇಖಾ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿ ಸಿದರು. ನವೆಂಬರ್ 15, 2021ರಂದು ಚಂಡೀಗಢದಲ್ಲಿ ಈ ದಂಪತಿ‌ ವಿವಾಹವಾದರು.