ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anupama Parameswaran: ನಟಿ ಅನುಪಮಾ ಸ್ಟಾರ್ ಹೀರೋ ಪುತ್ರನ ಜೊತೆ ಡೇಟಿಂಗ್! ಲೀಕ್ ಆಯ್ತು ಕಿಸ್ಸಿಂಗ್ ಫೋಟೋ..!

ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ ವಿಕ್ರಮ್ ಮಾರಿ ಸೆಲ್ವರಾಜ್ ನಿರ್ದೇಶನದ ಬೈಸನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿಯ ಬಗ್ಗೆ ಗಾಸಿಪ್ ಕೂಡ ಹರಿದಾಡಿತ್ತು. ಇದೀಗ ನಟಿ ಅನುಪಮ ಪರಮೇಶ್ವರನ್ ನಟ ಧ್ರುವ ಜೊತೆಗೆ ಲಿಪ್‌ಲಾಕ್ ಮಾಡಿರುವ ಫೋಟೋ ವೊಂದು ವೈರಲ್ ಆಗಿದೆ. ಅನುಪಮಾಗೆ 29 ವರ್ಷ ವಯಸ್ಸು. ಧ್ರುವ​ಗೆ 27 ವರ್ಷ ವಯಸ್ಸು ಆಗಿದ್ದು ಕಿಸ್ಸಿಂಗ್ ಫೋಟೋ ಆನ್​​ಲೈನ್​ನಲ್ಲಿ ಲೀಕ್ ಆಗುತ್ತಿದ್ದಂತೆ ಅಭಿಮಾನಿಗಳೇ ಶಾಕ್ ಆಗಿದ್ದಾರೆ.

ಸ್ಟಾರ್ ಹೀರೋ ಪುತ್ರನ ಜೊತೆ ಅನುಪಮಾ ಪರಮೇಶ್ವರನ್ ಡೇಟಿಂಗ್‌

Profile Pushpa Kumari Apr 14, 2025 8:07 PM

ನವದೆಹಲಿ: ತೆಲುಗು ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಪಡೆದು ಅನೇಕ ಅಭಿಮಾನಿಗಳ ಮನ ಗೆದ್ದ ನಟಿ ಅನುಪಮ ಪರಮೇಶ್ವರನ್ (Anupama Parameswaran) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಇದೀಗ ಬಹು ಭಾಷಾ ನಟಿ ಅನುಪಮ ಪರಮೇಶ್ವರನ್ ಹೊಸ ಗಾಸಿಪ್ ಸುಳಿಯಲ್ಲಿ ಸಿಲುಕಿದ್ದಾರೆ. ನಟಿ ಅನುಪಮಾ ಚಿಯಾನ್ ವಿಕ್ರಮ್ ಮಗ ಧ್ರುವ ವಿಕ್ರಮ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು ಈ ಜೋಡಿಯ ಫೋಟೊವೊಂದು ಸೋಷಿ ಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವುದಕ್ಕೆ ಸಾಕ್ಷಿ ಸಮೇತ ಲಿಪ್ ಕಿಸ್ ಫೋಟೋವೊಂದು ಲೀಕ್ ಆಗಿದೆ.

ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ ವಿಕ್ರಮ್ ಮಾರಿ ಸೆಲ್ವರಾಜ್ ನಿರ್ದೇಶನದ ಬೈಸನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿಯ ಬಗ್ಗೆ ಗಾಸಿಪ್ ಕೂಡ ಹರಿದಾಡಿತ್ತು. ಇದೀಗ ನಟಿ ಅನುಪಮ ಪರಮೇಶ್ವ ರನ್ ನಟ ಧ್ರುವ ಜೊತೆಗೆ ಲಿಪ್‌ಲಾಕ್ ಮಾಡಿರುವ ಫೋಟೋವೊಂದು ವೈರಲ್ ಆಗಿದೆ. ಅನುಪಮಾಗೆ 29 ವರ್ಷ ವಯಸ್ಸು. ಧ್ರುವ​ಗೆ 27 ವರ್ಷ ವಯಸ್ಸು ಆಗಿದ್ದು ಕಿಸ್ಸಿಂಗ್ ಫೋಟೋ ಆನ್​​ಲೈನ್​ನಲ್ಲಿ ಲೀಕ್ ಆಗುತ್ತಿದ್ದಂತೆ ಅಭಿಮಾನಿಗಳೇ ಶಾಕ್ ಆಗಿದ್ದಾರೆ.



ಫೋಟೋದಲ್ಲಿ ರಾತ್ರಿಯ ಚಂದ್ರನ ಬೆಳದಿಂಗಳಲ್ಲಿ ಇಬ್ಬರು ಪರಸ್ಪರ ಲಿಪ್ ಕಿಸ್ಸಿಂಗ್ ಮಾಡಿದ್ದಾರೆ‌. ಈ ಫೋಟೋ ಇದೀಗ ಬಹಳಷ್ಟು ವೈರಲ್ ಆಗಿದ್ದು ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ಎಐ ಇಮೇಜ್ ಆಗಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಅನೇಕರು ಇದು ಹೊಸ ಚಿತ್ರದ ಪ್ರಚಾರದ ಗಿಮಿಕ್ ಎಂದು ಟ್ವೀಟ್ ಮಾಡಿ ದ್ದಾರೆ.ಇನ್ನು ಕೆಲವರು ಇವರಿಬ್ಬರ ಜೋಡಿ ಕ್ಯೂಟ್ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: Green Movie: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಚಿತ್ರ ಸದ್ಯದಲ್ಲೇ ತೆರೆಗೆ

ಬೈಸಾನ್ ಸಿನಿಮಾವನ್ನು ಸೆಲ್ವರಾಜ್ ನಿರ್ದೇಶನ ಮಾಡಿದ್ದು ಪಾ. ರಂಜಿತ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಶೂಟ್ ಬಹುತೇಕ ಪೂರ್ಣಗೊಂಡಿದೆ. ಬೈಸನ್ ಸಿನಿಮಾದಲ್ಲಿ ಅನೇಕ ಖ್ಯಾತ ನಟರ ಸಂಗಮವಿದ್ದು ಕಬಡ್ಡಿ ಆಟದ ಕಥಾ ವಸ್ತು ಈ ಸಿನೆಮಾದಲ್ಲಿ ಇದೆಯಂತೆ‌. ಸಿನೆಮಾದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದ್ದು ಅನುಪಮಾ ಗ್ಲಾಮರಸ್ ಆಗಿ ಕಾಣಿಸಿದ್ದಾರೆ. ರಜಿಷಾ ವಿಜಯನ್, ಲಾಲ್, ಅಮೀರ್, ಪಶುಪತಿ ಮತ್ತು ಅನುರಾಗ್ ಅರೋರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದೆ.